Site icon Vistara News

MI vs SRH: ಸನ್ ಸ್ಟ್ರೋಕ್​ನಿಂದ ತಪ್ಪಿಸಿಕೊಂಡೀತೇ ಮುಂಬೈ ಇಂಡಿಯನ್ಸ್​​?

MI vs SRH

ಮುಂಬಯಿ: ಪ್ಲೇ ಆಫ್​​ನಿಂದ ಬಹುತೇಕ ಹೊರಬಿದ್ದಿರುವ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್​(MI vs SRH) ಸೋಮವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​(sunrisers hyderabad) ವಿರುದ್ಧ ಆಡಲಿದೆ. ಮುಂಬೈಗೆ ತವರಿನ ಪಂದ್ಯವಾಗಿದ್ದರೂ ಕೂಡ ತಂಡದ ಪ್ರದರ್ಶನ ನೋಡುವಾಗ ಗೆಲುವು ಕಷ್ಟ ಎನ್ನಲಡ್ಡಿಯಿಲ್ಲ.

ರಾಜೀವ್​ ಗಾಂಧಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದಿದ್ದ ಇತ್ತಂಡಗಳ ನಡುವಣ ಮೊದಲ ಮುಖಾಮುಖಿಯಲ್ಲಿ ಉಭಯ ತಂಡಗಳು ಸೇರಿ 523 ರನ್ ಬಾರಿಸಿತ್ತು. ಹೈದರಾಬಾದ್​ 3 ವಿಕೆಟ್​ಗೆ 277 ರನ್ ಬಾರಿಸಿದ್ದರೆ, ಮುಂಬೈ  5 ವಿಕೆಟ್​ಗೆ 246 ರನ್ ಗಳಿಸಿ 31 ರನ್​ ಅಂತರದಿಂದ ಸೋಲು ಕಂಡಿತ್ತು. ಹೆಡ್​ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರೆ, ಇವರ ಜತೆಗಾರ ಅಭಿಷೇಕ್​ ಶರ್ಮ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಇದೀಗ ಈ ಸೋಲಿಗೆ ಮುಂಬೈ ತವರಿನಲ್ಲಿ ಸೇಡು ತೀರಿಸಿಕೊಂಡೀತೇ ಎಂದು ಕಾದು ನೋಡಬೇಕಿದೆ.

ಉತ್ಸಾಹ ಕಳೆದುಕೊಂಡ ಮುಂಬೈ


ಐದು ಬಾರಿಯ ಚಾಂಪಿಯನ್​ ಮುಂಬೈ ತಂಡ ಈ ಬಾರಿ ಅತ್ಯಂತ ಕಳಪೆ ಪ್ರದರ್ಶನ ತೋರಿದೆ. ಯಾರೂ ಕೂಡ ತಂಡಕ್ಕಾಗಿ ಹಾಗೂ ಉತ್ಸಾಹ ಭರಿತವಾಗಿ ಆಡುತ್ತಿಲ್ಲ. 11 ಪಂದ್ಯಗಳಿಂದ ಕೇವಲ 3 ಗೆಲುವು ಸಾಧಿಸಿ 6 ಅಂಕದೊಂದಿಗೆ ಕೊನೆಯ ಸ್ಥಾನಿಯಾಗಿದೆ. ಕಳೆದ 16 ಆವೃತ್ತಿಯ ಐಪಿಎಲ್​ ಟೂರ್ನಿಯನ್ನು ನೋಡುವುದಾದರೆ ಮುಂಬೈ ಈ ಸ್ಥಿತಿ ತಲುಪಿದ್ದು ಇದೇ ಮೊದಲು.

ಇದನ್ನೂ ಓದಿ IPL 2024 : ಮ್ಯಾಕ್ಸಿ ಐಪಿಎಲ್​ನಲ್ಲಿ ಬರೀ ಬೂಸಿ; ಮ್ಯಾಕ್ಸ್​ವೆಲ್​ ಆಟಕ್ಕೆ ಅಭಿಮಾನಿಗಳ ಆಕ್ರೋಶ

ನೂತನ ನಾಯಕ ಹಾರ್ದಿಕ್​ ಪಾಂಡ್ಯ, ಸೂರ್ಯಕುಮಾರ್​ ಯಾದವ್​, ಇಶಾನ್​ ಕಿಶನ್​, ಟಿಮ್​ ಡೇವಿಡ್​ ಹೀಗೆ ಸಾಗಿ ಎಲ್ಲ ಬ್ಯಾಟರ್​ಗಳು ಘೋರ ವೈಫಲ್ಯ. ಬೌಲಿಂಗ್​ನಲ್ಲಿ ಜಸ್​ಪ್ರೀತ್​ ಬುಮ್ರಾ ಹೊರತುಪಡಿಸಿದ ಉಳಿದೆಲ್ಲರು ಲೆಕ್ಕಭರ್ತಿಗೆ ಆಡಿದಂತೆ ಆಡುತ್ತಿದ್ದಾರೆ. ಸಂಘಟಿತ ಪ್ರದರ್ಶನ ತೋರದೇ ಹೋದಲ್ಲಿ ಈ ಪಂದ್ಯದಲ್ಲಿಯೂ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ. ಬೆನ್ನು ನೋವಿನಿಂದ ಬಳಲುತ್ತಿರುವ ರೋಹಿತ್​ ಈ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಅಧಿಕ. ಕಳೆದ ಪಂದ್ಯದಲ್ಲಿ ರೋಹಿತ್​ ಇಂಪ್ಯಾಕ್ಟ್​ ಆಟಗಾರನಾಗಿ ಕಣಕ್ಕಿಳಿದಿದ್ದರು. ಮುಂದಿನ ತಿಂಗಳು ಟಿ20 ವಿಶ್ವಕಪ್​ ಕೂಡ ಆರಂಭಗೊಳ್ಳುವ ಕಾರಣ ಬಿಸಿಸಿಐ ಕೂಡ ವಿಶ್ರಾಂತಿ ಪಡೆಯಲು ಸೂಚನೆ ನೀಡಿರಬಹುದು.

ಹೈದರಾಬಾದ್​ಗೆ ಮಹತ್ವದ ಪಂದ್ಯ


ಪ್ಲೇ ಆಫ್​ ಪ್ರವೇಶಿಸಬೇಕಿದ್ದರೆ ಸನ್​ರೈಸರ್ಸ್​ ಹೈದರಾಬಾದ್​ಗೆ ಇದು ಮಹತ್ವದ ಪಂದ್ಯ. ಸದ್ಯ 12 ಅಂಕ ಗಳಿಸಿ ನಾಲ್ಕನೇ(ಚೆನ್ನೈ-ಪಂಜಾಬ್​ ಪಂದ್ಯಕ್ಕೂ ಮುನ್ನ) ಸ್ಥಾನದಲ್ಲಿದೆ. ಕಮಿನ್ಸ್​ ಪಡೆ ಕಳೆದ ರಾಜಸ್ಥಾನ್​ ವಿರುದ್ಧದ ಪಂದ್ಯದಲ್ಲಿ ಕೇವಲ 1 ರನ್​ ಅಂತರದಿಂದ ಗೆದ್ದು ಬೀಗಿತ್ತು. ಹೀಗಾಗಿ ತಂಡಕ್ಕೆ ಲಕ್​ ಕೂಡ ಇದೆ. ಹೆಡ್​ ಮತ್ತು ಅಭಿಷೇಕ್​ ಶರ್ಮಾ ಪವರ್​ ಪ್ಲೇ ತನಕ ಆಡಿದರೆ ದೊಡ್ಡ ಮೊತ್ತ ಹರಿದು ಬರಲಿದೆ. ಮಧ್ಯಮ ಕ್ರಮಾಂಕದಲ್ಲಿಯೂ ಬ್ಯಾಟಿಂಗ್​ ಲೈನ್​ ಅಪ್​ ಬಲಿಷ್ಠವಾಗಿದೆ. ಮಾರ್ಕ್ರಮ್​, ಕ್ಲಾಸೆನ್​ ನಿತೇಶ್​ ರೆಡ್ಡಿ, ಅಬ್ದುಲ್​ ಸಮದ್​ ಸಿಡಿದು ನಿಂತು ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.

Exit mobile version