Site icon Vistara News

MI vs SRH: ಸೋತವರ ಮಧ್ಯೆ ಗೆಲ್ಲೋರ್ಯಾರು?; ಮುಂಬೈ-ಹೈದರಾಬಾದ್ ಹಣಾಹಣಿ

MI vs SRH

ಹೈದರಾಬಾದ್​: ಈಗಾಗಕೇ ಆಡಿದ ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಸನ್​ರೈಸರ್ಸ್ ಹೈದರಾಬಾದ್MI vs SRH​) ಮತ್ತು ಮುಂಬೈ ಇಂಡಿಯನ್ಸ್​(Mumbai Indians) ಗೆಲುವಿನ ಹಳಿ ಏರಲು ನಾಳೆ ನಡೆಯುವ ಐಪಿಎಲ್​ನ(IPL 2024) 8ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಪಂದ್ಯದಲ್ಲಿ ಒಂದು ತಂಡಕ್ಕೆ ಸೋಲು ಖಚಿತ. ಯಾರೇ ಸೋತರು ಸತತ 2 ಸೋಲಿಗೆ ತುತ್ತಾಗುತ್ತಾರೆ. ಈ ತಂಡ ಯಾವುದು ಎನ್ನುವುದು ಪಂದ್ಯದ ಕುತೂಹಲ.

ಸಿಡಿಯಬೇಕಿದೆ ಇಶಾನ್​ ಕಿಶನ್​


ಮುಂಬೈ ಮೇಲ್ನೋಟಕ್ಕೆ ಹೈದರಾಬಾದ್‌ಗಿಂತ(Sunrisers Hyderabad) ಬಲಿಷ್ಠ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಬ್ಯಾಟಿಂಗ್‌ನಲ್ಲಿ ರೋಹಿತ್‌ ಶರ್ಮ, ನೂತನ ನಾಯಕ ಹಾರ್ದಿಕ್​ ಪಾಂಡ್ಯ ಬೌಲಿಂಗ್‌ನಲ್ಲಿ ಜಸ್​ಪ್ರೀತ್​ ಬುಮ್ರಾ, ಇಶಾನ್​ ಕಿಶನ್​, ಟಿಮ್​ ಡೇವಿಡ್​, ಪಿಯೂಷ್​ ಚಾವ್ಲಾ, ಜೆರಾಲ್ಡ್ ಕೋಟ್ಜಿ ಅವರೆಲ್ಲ ಮುಂಬೈ ತಂಡದ ಶಕ್ತಿಯಾಗಿದ್ದಾರೆ. ಆದರೆ ಇವರೆಲ್ಲ ಸಂಘಟಿತ ಪ್ರದರ್ಶನ ತೋರಬೇಕಿದೆ. ಕಳೆದ ಪಂದ್ಯದಲ್ಲಿ ಮಿಂಚಿದ್ದು ಮಾತ್ರ ರೋಹಿತ್​ ಶರ್ಮ ಅಮತ್ತು ಜಸ್​ಪ್ರೀತ್​ ಬುಮ್ರಾ ಮಾತ್ರ. ರಣಜಿ ಆಡಲು ಅಸಡ್ಡೆ ತೋರಿದ ಇಶಾನ್​ ಹಿಂದಿನ ಐಪಿಎಲ್‌ನಲ್ಲಿ ತೋರಿದ ಚಾರ್ಮ್ ತೋರುವಲ್ಲಿ ವಿಫಲರಾಗಿದ್ದಾರೆ. ಕಳೆದ ಪಂದ್ಯದಲ್ಲಿ ಅವರದ್ದು ಶೂನ್ಯ ಸಂಪಾದನೆ. ಈ ಪಂದ್ಯದಲ್ಲಿ ಸಿಡಿದು ನಿಲ್ಲುವ ಅನಿವಾರ್ಯ ಇವರ ಮೇಲಿದೆ.

ಮುಂಬೈ ಪಾಳಯದಲ್ಲಿ ಸೂರ್ಯಕುಮಾರ್​ ಯಾದವ್​ ಅವರ ಅನುಪಸ್ಥಿತಿ ಎದು ಕಾಣುತ್ತಿದೆ. ಮಧ್ಯಮ ಕ್ರಮಾಂಕದಲ್ಲಿ ಸಿಡಿದು ನಿಲ್ಲುವ ಸೂರ್ಯ ಕಳೆದ ಪಂದ್ಯದಲ್ಲಿ ಇರುತ್ತಿದ್ದರೆ ಮುಂಬೈಗೆ ಗೆಲುವು ಖಚಿತವಾಗಿರುತ್ತಿತ್ತು. ಸದ್ಯ ಸೂರ್ಯಕುಮಾರ್​ ಬಿಸಿಸಿಐ ಕಡೆಯಿಂದ ಇನ್ನೂ ಫಿಟ್​ನೆಸ್​ ಕ್ಲೀಯರೆನ್ಸ್​ ಪಡೆದಿಲ್ಲ. ಹೀಗಾಗಿ ಅವರ ಆಗಮನ ಇನ್ನೂ ತಡವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ IPL 2024 Points Table: ಆರ್​ಸಿಬಿ ಗೆಲುವಿನ ಬಳಿಕ ಅಂಕಪಟ್ಟಿ ಹೇಗಿದೆ?

ಪ್ರಯೋಗ ಸಲ್ಲದು


ಹಿಂದಿನ ಪಂದ್ಯದಲ್ಲಿ ಹಲವು ಪ್ರಯೋಗ ಮಾಡಿ ಕೈ ಸುಟ್ಟುಕೊಂಡ ನಾಯಕ ಹಾರ್ದಿಕ್​ ಪಾಂಡ್ಯ ಈ ಪಂದ್ಯದಲ್ಲಿ ಯಾವುದೇ ಪ್ರಯೋಗಕ್ಕೆ ಮುಂದಾಗಬಾರದು. ಇನಿಂಗ್ಸ್​ನ ಮೊದಲ ಓವರನ್ನು ಅನುಭವಿ ಜಸ್​ಪ್ರೀತ್​ ಬುಮ್ರಾಗೆ ನೀಡಬೇಕು.

ಕಳೆದ ಕೆಕೆಆರ್​ ಪರ ದೊಡ್ಡ ಮೊತ್ತದ ಹೋರಾಟದಲ್ಲಿ ಅಸಾಮಾನ್ಯ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ತಂಡವನ್ನು ಗೆಲುವಿನಂಚಿನವರೆಗೆ ತಂದಿದ್ದ ಹಾರ್ಡ್​ ಹಿಟ್ಟರ್​ ಹೆನ್ರಿಚ್ ಕ್ಲಾಸೆನ್ ಮೇಲೆ ಈ ಪಂದ್ಯದಲ್ಲಿಯೂ ತಂಡ ಹೆಚ್ಚು ಭರವಸೆ ಇರಿಸಿದೆ. ಭುವನೇಶ್ವರ್​ ಕುಮಾರ್​ ಕಳೆದ ಪಂದ್ಯದಲ್ಲಿ ಆರಂಭಿಕ 2 ಓವರ್​ ಉತ್ತಮ ದಾಳಿ ಸಂಘಟಿಸಿ ಆ ಬಳಿಕದ 2 ಓವರ್​ನಲ್ಲಿ ದುಬಾರಿ ರನ್​ ನೀಡಿದ್ದರು. ಹೀಗಾಗಿ ಈ ಪಂದ್ಯದಲ್ಲಿ ಸ್ಥಿರ ಬೌಲಿಂಗ್​ ಕಾಯ್ದುಕೊಳ್ಳುವ ಅಗತ್ಯವಿದೆ. ಉಳಿದಂತೆ ಆರಂಭಿಕ ಸ್ಥಾನದಲ್ಲಿ ಲೋಪವಿಲ್ಲ. ಕನ್ನಡಿಗ ಮಯಾಂಕ್​ ಅಗರ್ವಾಲ್​ ಮತ್ತು ಅಭಿಷೇಕ್​ ಶರ್ಮ ಉತ್ತಮ ಆರಂಭ ಒದಗಿಸುವಲ್ಲಿ ಸಮರ್ಥರಿದ್ದಾರೆ. ಐಡೆನ್​ ಮಾರ್ಕ್ರಮ್​ ಬ್ಯಾಟಿಂಗ್​ ಫಾರ್ಮ್​ ಕಂಡುಕೊಳ್ಳಬೇಕಿದೆ. 20 ಕೋಟಿ ಪಡೆದ ನಾಯಕ ಕಮಿನ್ಸ್​ ಈ ಸಂಭಾವನೆಗೆ ತಕ್ಕ ಪ್ರದರ್ಶನ ತೋರಬೇಕಿದೆ.

ಮುಖಾಮುಖಿ


ಸನ್​ರೈಸರ್ಸ್​ ಹೈದರಾಬಾದ್​(Sunrisers Hyderabad) ಮತ್ತು ಮುಂಬೈ ಇಂಡಿಯನ್ಸ್​ ಇದುವರೆಗಿನ ಐಪಿಎಲ್​ ಟೂರ್ನಿಗಳಲ್ಲಿ ಒಟ್ಟು 21 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಮುಂಬಯಿ ಇಂಡಿಯನ್ಸ್​ 12 ಪಂದ್ಯಗಳನ್ನು ಗೆದ್ದರೆ, ಹೈದರಾಬಾದ್​ 9 ಪಂದ್ಯಗಳನ್ನು ಗೆದ್ದಿದೆ. ಕಳೆದ ಆವೃತ್ತಿಯಲ್ಲಿ ಆಡಿದ ಎರಡೂ ಪಂದ್ಯಗಳನ್ನು ಕೂಡ ಮುಂಬೈ ಗೆದ್ದಿತ್ತು. ಆದರೆ, ಈ ಬಾರಿ ಹೈದರಾಬಾದ್​ ಪಡೆ ಬಲಿಷ್ಠವಾಗಿದೆ. ಜತೆಗೆ ತವರಿನ ಪಂದ್ಯ ಕೂಡ ಆಗಿದೆ. ಹೀಗಾಗಿ ತವರಿನ ಲಾಭ ಇದ್ದೇ ಇದೆ.

ಸಂಭಾವ್ಯ ತಂಡ


ಹೈದರಾಬಾದ್​: ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್​ ಕೀಪರ್​), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಮಾರ್ಕೊ ಜಾನ್ಸೆನ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಟಿ ನಟರಾಜನ್.

ಮುಂಬೈ ಇಂಡಿಯನ್ಸ್​: ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್​ ಕೀಪರ್​), ತಿಲಕ್ ವರ್ಮಾ, ನಮನ್ ಧೀರ್, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಶಮ್ಸ್ ಮುಲಾನಿ, ಪಿಯೂಷ್ ಚಾವ್ಲಾ, ಜೆರಾಲ್ಡ್ ಕೋಟ್ಜಿ, ಜಸ್​ಪ್ರೀತ್ ಬುಮ್ರಾ, ಲ್ಯೂಕ್ ವುಡ್

Exit mobile version