ಸಿಡ್ನಿ: ಗೆದ್ದಿದ್ದಕ್ಕೆ, ಗಳಿಸಿದ್ದಕ್ಕೆ ಗೌರವ ನೀಡಬೇಕು ಎಂಬ ಮಾತಿದೆ. ಆದರೆ, ಭಾರತದ ವಿರುದ್ಧ ಗೆದ್ದ ವಿಶ್ವಕಪ್ (ICC World Cup 2023) ಟ್ರೋಫಿಯ ಮೇಲೆ ಕಾಲಿಟ್ಟು ದುರಹಂಕಾರ ಮೆರೆದಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗ ಮಿಚೆಲ್ ಮಾರ್ಷ್ ಈಗ ಮತ್ತೊಂದು ಉದ್ಧಟತನ ಹೇಳಿಕೆ ನೀಡಿದ್ದಾರೆ. “ನಾನು ಮತ್ತೆ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಡುತ್ತೇನೆ, ಏನಿವಾಗ” ಎಂದು ಹೇಳಿಕೆ ನೀಡುವ ಮೂಲಕ ಮಿಚೆಲ್ ಮಾರ್ಷ್ (Mitchell Marsh) ಅಹಂಕಾರ ಪ್ರದರ್ಶಿಸಿದ್ದಾರೆ. ಇದರ ಕುರಿತು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮಿಚೆಲ್ ಮಾರ್ಷ್, “ನಾನು ಮತ್ತೊಮ್ಮೆ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಡುತ್ತೇನೆ. ಹಾಗಂತ, ನಾನು ವಿಶ್ವಕಪ್ ಟ್ರೋಫಿಗೆ ಅಗೌರವ ತೋರಿದೆ ಎಂದು ಅರ್ಥವಲ್ಲ. ಟ್ರೋಫಿ ಮೇಲೆ ಕಾಲಿಟ್ಟಿರುವ ಸಂಗತಿಯನ್ನು ನಾನೇನು ಗಂಭೀರವಾಗಿ ಪರಿಗಣಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಷಯಗಳ ಬಗ್ಗೆಯೂ ನಾನು ಹೆಚ್ಚು ಗಮನ ಹರಿಸಿಲ್ಲ. ಸಾಮಾಜಿಕ ಜಾಲತಾಣಗಳ ಟೀಕೆಗಳ ಬಗ್ಗೆ ಎಲ್ಲರೂ ನನಗೆ ಹೇಳಿದ್ದಾರೆ. ಆದರೆ, ನಾನು ಮತ್ತೊಮ್ಮೆ ವಿಶ್ವಕಪ್ ಮೇಲೆ ಕಾಲಿಡುತ್ತೇನೆ. ಅದೊಂದು ಸಂಭ್ರಮಾಚರಣೆ ಅಷ್ಟೇ” ಎಂದು ಹೇಳಿದ್ದಾರೆ.
There was obviously no disrespect meant in that photo at all. I haven't given it too much thought. [MITCHELL MARSH] #ODIWorldCup2023
— Cricket Max Masala 🏏 (@CricketX13) December 1, 2023
?? pic.twitter.com/GfPY1gHVSb
ಆಸ್ಟ್ರೇಲಿಯಾ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದ ಕೆಲವೇ ಗಂಟೆಗಳ ನಂತರ ಮಿಚೆಲ್ ಮಾರ್ಷ್ ಅವರು ಟ್ರೋಫಿ ಮೇಲೆ ಕಾಲಿಟ್ಟ ಚಿತ್ರವನ್ನು ಹಂಚಿಕೊಳ್ಳಲಾಗಿತ್ತು. ನವೆಂಬರ್ 19 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಆತಿಥೇಯ ಭಾರತವನ್ನು ಎದುರಿಸಿತು. ಪಂದ್ಯ ಗೆದ್ದ ಬಳಿಕ ಆಸ್ಟ್ರೇಲಿಯಾ ತಂಡದ ಆಟಗಾರರು ಆರಾಮವಾಗಿ ಕುಳಿತು ಪರಸ್ಪರ ಮಾತನಾಡುತ್ತಿದ್ದ ಹೋಟೆಲ್ ಕೋಣೆಯಿಂದ ಈ ಫೋಟೊ ಶೇರ್ ಮಾಡಲಾಗಿದೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ: Mitchell Marsh: ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟ ಮಿಚೆಲ್ ಮಾರ್ಷ್ ವಿರುದ್ಧ ಎಫ್ಐಆರ್ ದಾಖಲು
ಮಾರ್ಷ್ ಅವರು ಚಿನ್ನದ ಟ್ರೋಫಿಯ ಮೇಲೆ ತಮ್ಮ ಎರಡೂ ಕಾಲುಗಳನ್ನು ವಿಶ್ರಾಂತಿ ಪಡೆಯುತ್ತಿದ್ದರು. ಚಿತ್ರ ವೈರಲ್ ಆದ ಕೂಡಲೇ, ಟ್ರೋಫಿಗೆ ‘ಅಗೌರವ’ ತೋರಿದ್ದಕ್ಕಾಗಿ ಜನರು ಅವರ ವಿರುದ್ಧ ಬೈಗುಳಗಳನ್ನು ಪ್ರಾರಂಭಿಸಿದರು. ವಿಶ್ವಕಪ್ ಫೈನಲ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಅನೇಕ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಬೇಸರ ಮೂಡಿಸಿದ್ದರು. ಆದಾಗ್ಯೂ ಗೆದ್ದ ಕಪ್ಗೆ ಸೂಕ್ತ ಮರ್ಯಾದೆ ಕೊಡದ ಆ ತಂಡದ ಆಟಗಾರರ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಆಸ್ಟ್ರೇಲಿಯಾವು ಕ್ರಿಕೆಟ್ನ ಅತಿದೊಡ್ಡ ಟ್ರೋಫಿಯನ್ನು ಗೆದ್ದಿರಬಹುದು, ಆದರೆ ಗೌರವವನ್ನು ಗೆದ್ದಿಲ್ಲ ಕೆಲವರು ಅಭಿಪ್ರಾಯಪಟ್ಟಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ