Site icon Vistara News

Mitchell Marsh: ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಿಚೆಲ್​ ಮಾರ್ಷ್

Mitchell Marsh: Mitchell Marsh entered married life

Mitchell Marsh: Mitchell Marsh entered married life

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಸ್ಟಾರ್​ ಆಲ್​ರೌಂಡರ್​ ಮಿಚೆಲ್​ ಮಾರ್ಷ್​ ಅವರು ತಮ್ಮ ಬಹುಕಾಲದ ಗೆಳತಿ ಗ್ರೇಟಾ ಮ್ಯಾಕ್‌ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಸ್ಟ್ರೇಲಿಯಾದ ಗ್ರೇಸ್‌ಟೌನ್‌ನಲ್ಲಿ ನಡೆದ ಈ ವಿವಾಹ ಕಾರ್ಯಕ್ರಮದಲ್ಲಿ ಕುಟುಂಬ ಸದ್ಯಸರು ಮತ್ತು ಸೀಮಿತ ಸಂಖ್ಯೆಯ ಸ್ನೇಹಿತರು ಮಾತ್ರ ಹಾಜರಾಗಿದ್ದರು.

ದಿ ಫಾರ್ಮ್‌ ಮಾರ್ಗರೇಟ್‌ ರಿವರ್‌ ಸಂಸ್ಥೆಯ ಸಹ ನಿರ್ದೇಶಕಿಯಾಗಿರುವ ಗ್ರೇಟಾ ಮ್ಯಾಕ್‌ ಮತ್ತು ಮಿಚೆಲ್‌ ಮಾರ್ಷ್‌ ಇಬ್ಬರೂ ದೀರ್ಘಾವಧಿಯಿಂದ ಪ್ರೀತಿಸುತ್ತಿದ್ದರು. ಇದೀಗ ಈ ಜೋಡಿ ವೈವಾಹಿಕ ಜೀವನಕ್ಕೆ ಅಡಿಯಿರಿಸಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುದ್ದಿಯನ್ನು ಮಿಚೆಲ್‌ ಮಾರ್ಷ್‌ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

“ಇದು ನನ್ನ ಜೀವನದ ಅತ್ಯಂತ ಶ್ರೇಷ್ಠ ದಿನ. ಇಂದಿನಿಂದ ಜೀವನದಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ” ಎಂದು ಇನ್​ಸ್ಟಾಗ್ರಾಮ್​ನಲ್ಲಿ ಬರೆದಿದ್ದಾರೆ. ಜತೆಗೆ ತಮ್ಮ ವಿವಾಹದ ಫೋಟೊವನ್ನು ಹಂಚಿಕೊಂಡಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿರಿಸಿದ ಮಿಚೆಲ್​ ಮಾರ್ಷ್​ಗೆ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಆಸ್ಟ್ರೇಲಿಯಾ ಕ್ರಿಕೆಟಿಗರಾದ ಗ್ಲೆನ್‌ ಮ್ಯಾಕ್ಸ್‌ವೆಲ್‌, ಅಲೆಕ್ಸ್‌ ಕೇರಿ, ಡೇವಿಡ್​ ವಾರ್ನರ್​, ಸ್ಟೀವನ್​​ ಸ್ಮಿತ್​ ಸೇರಿದಂತೆ ಹಲವರು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ IPL 2023: ಲಕ್ನೋ ವಿರುದ್ಧದ ಪಂದ್ಯಕ್ಕೆ ಆರ್​ಸಿಬಿಯಲ್ಲಿ ಮಹತ್ವದ ಬದಲಾವಣೆ!

ಐಪಿಎಲ್​ನಲ್ಲಿ ಡೆಲ್ಲಿ ಪರ ಆಡುವ ಮಿಚೆಲ್​ ಮಾರ್ಷ್​ ಅವರು ಕಳೆದ ವಾರ ತಮ್ಮ ಮದುವೆಯ ನಿಮಿತ್ತ ಡೆಲ್ಲಿ ತಂಡದಿಂದ ಬೇರ್ಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅವರು ರಾಜಸ್ಥಾನ್ ರಾಯಲ್ಸ್ ವಿರುದ್ದದ ಕೊನೆಯ ಪಂದ್ಯದಲ್ಲಿ ಆಡಿರಲಿಲ್ಲ. ಮುಂದಿನ ಕೆಲ ಪಂದ್ಯಗಳಿಗೂ ಮಾರ್ಷ್‌ ಅಲಭ್ಯರಾಗಲಿದ್ದಾರೆ. ಡೆಲ್ಲಿ ಆಡಿದ ಮೂರು ಪಂದ್ಯಗಳಲ್ಲಿಯೂ ಸೋಲು ಕಂಡಿದೆ. ಮಂಗಳವಾರ ನಡೆಯುವ ನಾಲ್ಕನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಎದುರಾಳಿ ಮುಂಬೈ ಕೂಡ ಸತತ ಎರಡು ಸೋಲು ಕಂಡಿದೆ. ಆದ್ದರಿಂದ ಸೋತವರ ಮಧ್ಯೆ ನಡೆಯುವ ಈ ಕಾಳಗದಲ್ಲಿ ಯಾರು ಗೆಲುವಿನ ಖಾತೆ ತೆರೆಯಲಿದ್ದಾರೆ ಎನ್ನುವುದು ಈ ಪಂದ್ಯದ ಕುತೂಹಲ.

Exit mobile version