Site icon Vistara News

IPL 2023 : ವಿರಾಟ್​ ಕೊಹ್ಲಿಯ ಬ್ಯಾಟಿಂಗ್​ ಲಯವನ್ನು ಹೊಗಳಿದ ಮಿಥಾಲಿ ರಾಜ್​

Ravi Shastri teaches Virat Kohli a new technique to score runs

virat kohli rcb

ಬೆಂಗಳೂರು: ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ (IPL 2023) ಇದುವರೆಗೆ ಮಿಶ್ರ ಫಲ ಕಂಡಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದ ಅಷ್ಟೇ ಹಣಾಹಣಿಗಳಲ್ಲಿ ಸೋತಿದೆ. ಅದರಲ್ಲೂ ಲಕ್ನೊ ವಿರುದ್ಧ ಕೇವಲ ಒಂದು ವಿಕೆಟ್​​ಗಳ ಅಂತರದಿಂದ ಸೋಲು ಕಂಡಿತ್ತು. ಇದೇ ವೇಳೆ ತಂಡದ ಸ್ಟಾರ್ ಬ್ಯಾಟರ್​ ವಿರಾಟ್​ ಕೊಹ್ಲಿ ಮಾತ್ರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆಡಿರುವ ನಾಲ್ಕರಲ್ಲಿ ಮೂರು ಪಂದ್ಯಗಳಲ್ಲಿ ಅರ್ಧ ಶತಕ ಬಾರಿಸಿದ್ದಾರೆ. ಹೀಗಾಗಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದಾರೆ.

ವಿರಾಟ್​ ಕೊಹ್ಲಿ ಕಳೆದ ಎರಡು ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲೂ ಈ ಅವಧಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಇದೀಗ ಅವರು ಮತ್ತೆ ಫಾರ್ಮ್​ಗೆ ಮರಳಿದ್ದಾರೆ. ಅದು ಪ್ರತಿ ಪಂದ್ಯಗಳಲ್ಲಿ ಪ್ರತಿಫಲನಗೊಳ್ಳುತ್ತಿದೆ. ರನ್​ ಗಳಿಕೆಯಿಂದಾಗಿ ಅವರ ವಿಶ್ವಾಸವೂ ಹೆಚ್ಚಾಗಿದೆ.

ಐಪಿಎಲ್ 2023 ರಲ್ಲಿ, ಕೊಹ್ಲಿ ಬ್ಯಾಟ್‌ನೊಂದಿಗೆ ಅದ್ಭುತ ಕೌಶಲ್ಯಗಳನ್ನು ತೋರಿಸಿದ್ದಾರೆ ಮತ್ತು ಪಂದ್ಯಾವಳಿಯ ಪ್ರಮುಖ ರನ್ ಗಳಿಸಿದವರಲ್ಲಿ ಐದನೇ ಸ್ಥಾನದಲ್ಲಿದ್ದಾರೆ ಮತ್ತು ಇದುವರೆಗೆ ಆರ್​ಸಿಬಿ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. 34 ವರ್ಷದ ಅವರ ಫಾರ್ಮ್ ಬಗ್ಗೆ ಹಿರಿಯ ಕ್ರಿಕೆಟಿಗರು ಹಾಗೂ ಕ್ರಿಕೆಟ್​ ಪಂಡಿತರ ಹೊಗಳಿಕೆ ಸಲ್ಲಿಸುತ್ತಿದ್ದಾರೆ. ಅದೇ ವೇಳೆ ಭಾರತ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಕೂಡ ಹೊಗಳಿಕೆ ಸಲ್ಲಿಸಿದ್ದಾರೆ. ಕೊಹ್ಲಿಯು ತಮ್ಮ ಆಟದ ಮೂಲಕ ಇತರ ಆಟಗಾರರಿಗೆ ಪ್ರೇರಣೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಟಿ20 ಪಂದ್ಯಗಳಲ್ಲಿ ತಂಡಕ್ಕೆ ಆರಂಭಿಕರ ಆಟ ಮುಖ್ಯವಾಗಿರುತ್ತದೆ. ಅಂತೆಯೇ ವಿರಾಟ್​ ಕೊಹ್ಲಿ ಆರ್​ಸಿಬಿ ಪರ ಉತ್ತಮ ಆರಂಭ ತಂದುಕೊಡುತ್ತಿದ್ದಾರೆ. ಸರಾಸರಿ 140ರಿಂದ 150 ಕಿಲೋ ಮೀಟರ್​ ವೇಗದಲ್ಲಿ ಬೌಲಿಂಗ್ ಮಾಡುವವರಿಗೆ ಪ್ರತ್ಯುತ್ತರ ಕೊಡುತ್ತಿದ್ದಾರೆ. ಅವರು ಎಂದಿಗೂ ಬೌಲರ್‌ಗಳ ಬಗ್ಗೆ ಭಯ ಇಟ್ಟುಕೊಂಡಿಲ್ಲ. ಉತ್ತಮ ಸ್ಟ್ರೈಕ್​​ರೇಟ್​ನಲ್ಲಿ ರನ್​ ಗಳಿಸುತ್ತಿದ್ದಾರೆ. ಅಂತೆಯೇ ಉತ್ತಮ ರನ್​ ಗಳಿಕೆಯ ವಿಶ್ವಾಸವನ್ನು ಮೂಡಿಸುತ್ತಿದ್ದಾರೆ ಎಂದು ಸ್ಟಾರ್ ಸ್ಪೋರ್ಟ್ಸ್ ಕ್ರಿಕೆಟ್ ಲೈವ್‌ನಲ್ಲಿನ ಮಿಥಾಲಿ ಹೊಗಳಿದ್ದಾರೆ.

ಇದನ್ನೂ ಓದಿ : IPL 2023: ಚೆನ್ನೈ-ಆರ್​ಸಿಬಿ ವಿರುದ್ಧ ಯಾರಿಗೆ ಜಯ; ಭವಿಷ್ಯ ನುಡಿದ ಆರ್ಯವರ್ಧನ್ ಗುರೂಜಿ

ಆರ್​ಸಿಬಿ ತಂಡ ಇದುವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಅವರ ತವರು ಮೈದಾನವಾದ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದೆ ಕೊಹ್ಲಿ ತಮ್ಮ ಮೂರು ಅರ್ಧಶತಕಗಳನ್ನು ಅದೇ ತಾಣದಲ್ಲಿ ಬಾರಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅವರು ಬಾರಿಸಿದ ಅರ್ಧಶತಕವು ಆರ್​ಸಿಬಿ ತಂಡಕ್ಕೆ ಉತ್ತಮ ಮೊತ್ತ ಪೇರಿಸಲು ನೆರವಾಗಿತ್ತು. ಕನ್ನಡಿಗ ವಿಜಯ್​ಕುಮಾರ್​ ವೈಶಾಖ್ ಅವರ ಮೂರು ವಿಕೆಟ್​ಗಳ ಬೌಲಿಂಗ್ ಸಾಧನೆಯಿಂದ ಆರ್​ಸಿಬಿ ತಂಡ ಪಂದ್ಯವನ್ನು ಗೆದ್ದುಕೊಂಡಿತ್ತು.

Exit mobile version