ನವ ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ನವದೆಹಲಿಯ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಲ್ಲಿ ಏಷ್ಯನ್ ಗೇಮ್ಸ್ 2022ರಲ್ಲಿ (Asian Games) ಭಾಗವಹಿಸಿದ್ದ ಸಾಧಕರ ಭಾರತೀಯ ಕ್ರೀಡಾಪಟುಗಳ ಬಳಗವನ್ನು ಭೇಟಿ ಮಾಡಿ ಪ್ರಂಶಸೆ ವ್ಯಕ್ತಪಡಿಸಿದರು. ಏಷ್ಯನ್ ಗೇಮ್ಸ್ 2022 ರಲ್ಲಿ ಭಾರತವು 28 ಚಿನ್ನದ ಪದಕಗಳು ಸೇರಿದಂತೆ 107 ಪದಕಗಳನ್ನು ಗೆದ್ದಿದೆ. ಇದು ಕಾಂಟಿನೆಂಟಲ್ ಬಹು ಕ್ರೀಡೆಗಳ ಸ್ಪರ್ಧೆಯಲ್ಲಿ ಗೆದ್ದ ಒಟ್ಟು ಪದಕಗಳ ಸಂಖ್ಯೆಯ ದೃಷ್ಟಿಯಿಂದ ಇದುವರೆಗಿನ ಗರಿಷ್ಠ ಸಾಧನೆಯಾಗಿದೆ. ಈ ಬಗ್ಗೆ ಪ್ರಧಾನಿ ಮೋದಿ ಅವರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸುದ್ದಿಗಳನ್ನೂ ಓದಿ
Asian Games : ಸಾರ್ವಕಾಲಿಕ ದಾಖಲೆಯ 107 ಪದಕಗಳೊಂದಿಗೆ ಏಷ್ಯನ್ ಗೇಮ್ಸ್ ಅಭಿಯಾನ ಮುಗಿಸಿದ ಭಾರತ
Asian Games : ವಿವಾದಾತ್ಮಕ ಕಬಡ್ಡಿ ಫೈನಲ್ನಲ್ಲಿ ಕೊನೆಗೂ ಚಿನ್ನ ಗೆದ್ದ ಭಾರತ ತಂಡ
Asian Games: ಪಂದ್ಯ ರದ್ದಾದರೂ ಐತಿಹಾಸಿಕ ಚಿನ್ನ ಗೆದ್ದ ಭಾರತ ಪುರುಷರ ಕ್ರಿಕೆಟ್ ತಂಡ
ಆಟಗಾರರ ನಿಯೋಗದ ಪ್ರತಿಯೊಬ್ಬರನ್ನೂ ಭೇಟಿ ಮಾಡಿದ ಅವರು ಮಾತುಕತೆ ನಡೆಸಿದರು. ಪದಕ ಗೆದ್ದವರಿಗೆ ಅಭಿಮಾನ ಸೂಚಿಸಿದ ಅವರು ಪ್ರಯತ್ನದಲ್ಲಿ ವಿಫಲರಾದವರಿಗೆ ಮುಂದಿನ ಬಾರಿ ಗೆಲ್ಲುವ ಅವಕಾಶ ಇರುವುದನ್ನು ಹೇಳಿ ಪ್ರೋತ್ಸಾಹ ನೀಡಿದರು.
ಬಳಿಕ ಮಾತನಾಡಿದ ಪ್ರಧಾನಮಂತ್ರಿಯವರು, 1951ರಲ್ಲಿ ಇದೇ ಕ್ರೀಡಾಂಗಣದಲ್ಲಿ ಏಷ್ಯನ್ ಗೇಮ್ಸ್ ನ ಉದ್ಘಾಟನಾ ಆವೃತ್ತಿ ನಡೆದತ್ತು. ಅದೇ ಸ್ಟೇಡಿಯಮ್ನಲ್ಲಿ ಹಾಲಿ ಸಾಧಕರನ್ನು ಭೇಟಿಯಾಗಿರುವುದು ಸ್ಮರಣೀಯ ಎಂದರು. ಕ್ರೀಡಾಪಟಗಳು ತೋರಿಸಿದ ಧೈರ್ಯ ಮತ್ತು ದೃಢನಿಶ್ಚಯವು ರಾಷ್ಟ್ರದ ಜನರು ಸಂಭ್ರಮಿಸುವಂತೆ ಮಾಡಿದೆ. 100 ಕ್ಕೂ ಹೆಚ್ಚು ಪದಕಗಳ ಗುರಿಯನ್ನು ಸಾಧಿಸಿದ ಕ್ರೀಡಾಪಟುಗಳ ಶ್ರಮವನ್ನು ಉಲ್ಲೇಖಿಸಿದ ಪ್ರಧಾನಿ, ಇಡೀ ರಾಷ್ಟ್ರವು ಹೆಮ್ಮೆಯ ಭಾವನೆಯನ್ನು ಅನುಭವಿಸುತ್ತಿದೆ ಎಂದು ಹೇಳಿದರು. ಇದೇ ವೇಳೆ ಅವರು ಕೋಚ್ಗಳು. ಫಿಸಿಯೋಗಳು ಮತ್ತು ಅಧಿಕಾರಿಗಳ ಕೊಡುಗೆಗಳನ್ನು ಶ್ಲಾಘಿಸಿದರು.
ಕ್ರೀಡಾಪಟುಗಳ ಕುಟುಂಬಕ್ಕೆ ಧನ್ಯವಾದ ಹೇಳಿದ ಮೋದಿ
ಪ್ರಧಾನಿ ಮೋದಿ ಅವರು ಎಲ್ಲ ಕ್ರೀಡಾಪಟುಗಳ ಪೋಷಕರಿಗೆ ಧನ್ಯವಾದ ಸಲ್ಲಿಸಿದರು. ಅವರ ಕುಟುಂಬಗಳು ನೀಡಿದ ಕೊಡುಗೆಗಳು ಮತ್ತು ತ್ಯಾಗಗಳನ್ನು ಸ್ಮರಿಸಿದರು. ತರಬೇತಿ ಮೈದಾನದಿಂದ ಪ್ರಶಸ್ತಿ ವೇದಿಕೆಯವರೆಗೆ, ಪೋಷಕರ ಬೆಂಬಲವಿಲ್ಲದೆ ಪ್ರಯಾಣ ಅಸಾಧ್ಯ ಎಂದು ಪ್ರಧಾನಿ ನುಡಿದರು.
ನೀವು ಇತಿಹಾಸವನ್ನು ಸೃಷ್ಟಿಸಿದ್ದೀರಿ. ಈ ಏಷ್ಯನ್ ಕ್ರೀಡಾಕೂಟದ ಅಂಕಿಅಂಶಗಳು ಭಾರತದ ಯಶಸ್ಸಿಗೆ ಸಾಕ್ಷಿಯಾಗಿವೆ. ಇದು ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ. ನಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂಬುದು ತೃಪ್ತಿಯ ವಿಷಯವಾಗಿದೆ ಎಂದು ಹೇಳಿದರು.
ಶೂಟಿಂಗ್, ಬಿಲ್ಲುಗಾರಿಕೆ, ಸ್ಕ್ವಾಷ್, ರೋಯಿಂಗ್, ಮಹಿಳಾ ಬಾಕ್ಸಿಂಗ್ ನಲ್ಲಿ ಅತ್ಯಧಿಕ ಪದಕಗಳನ್ನು ಮತ್ತು ಮಹಿಳಾ ಮತ್ತು ಪುರುಷರ ಕ್ರಿಕೆಟ್ ಸ್ಪರ್ಧೆಗಳಾದ ಸ್ಕ್ವಾಷ್ ಮಿಶ್ರ ಡಬಲ್ಸ್ ನಲ್ಲಿ ಮೊದಲ ಚಿನ್ನದ ಪದಕ ಪಡೆದಿರುವುದನ್ನು ಮೋದಿ ಅವರು ವೇದಿಕೆಯಲ್ಲಿ ಪ್ರಶಂಸಿಸಿದರು. ಮಹಿಳೆಯರ ಶಾಟ್ ಪುಟ್ (72 ವರ್ಷ), 4×4 100 ಮೀಟರ್ (61 ವರ್ಷ), ಈಕ್ವೆಸ್ಟ್ರಿಯನ್ (41 ವರ್ಷ) ಮತ್ತು ಪುರುಷ ಬ್ಯಾಡ್ಮಿಂಟನ್ (40 ವರ್ಷ) ಸೇರಿದಂತೆ ಕೆಲವು ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದಿರುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಕ್ರೀಡಾಪಟುಗಳ ಪ್ರಯತ್ನದಿಂದಾಗಿ ಹಲವು ದಶಕಗಳ ಕಾಯುವಿಕೆ ಕೊನೆಗೊಂಡಿತು ಎಂದು ಪ್ರಧಾನಿ ಹೇಳಿದರು.
ಕಾರ್ಯಕ್ರಮದಲ್ಲಿ ಅಥ್ಲೀಟ್ಗಳು ಆಟೋಗ್ರಾಫ್ ಹಾಕಿದ ಜೆರ್ಸಿಗಳು, ಕ್ರೀಡಾ ಪರಿಕರಗಳು ಸೇರಿದಂತೆ ನಾನಾ ವಸ್ತುಗಳನ್ನು ಪ್ರಧಾನಿ ಮೋದಿಗೆ ಅವರಿಗೆ ಉಡುಗೊರೆಯಾಗಿ ಕೊಟ್ಟರು.