ಆಕ್ಲೆಂಡ್: ಪಾಕಿಸ್ತಾನ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಕಮ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್(Mohammad Rizwan) ಟ್ರೋಲ್ಗೆ ಒಳಗಾಗಿದ್ದಾರೆ. ಬ್ಯಾಟ್ನಿಂದ ಕ್ರೀಸ್ ಮುಟ್ಟುವ ಬದಲು ಕೈಗಳಿಂದಲೇ ಕ್ರೀಸ್ ಮುಟ್ಟಲು ಪ್ರಯತ್ನಿಸಿ ನಗೆಪಾಟಲಿಗೀಡಾಗಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ಡ್ಯುನೆಡಿನ್ನ ಯೂನಿವರ್ಸಿಟಿ ಓವಲ್ ಮೈದಾನದಲ್ಲಿ ಇಂದು ನಡೆದ ಮೂರನೇ ಟಿ20 ಪಂದ್ಯದಲ್ಲಿ(NZ vs PAK, 3rd T20I) ಮೊದಲು ಬ್ಯಾಟಿಂಗ್ ನಡೆಸಿದ ಆತಿಥೇಯ ನ್ಯೂಜಿಲ್ಯಾಂಡ್ 7 ವಿಕೆಟ್ಗೆ 224 ರನ್ ಕಲೆಹಾಕಿತು. ಗುರಿ ಬೆನ್ನತ್ತಿದ ಪಾಕ್ ತನ್ನ ಪಾಲಿನ ಆಟದಲ್ಲಿ 7 ವಿಕೆಟ್ಗೆ 179 ರನ್ ಗಳಿಸಲಷ್ಟೇ ಶಕ್ತವಾಯಿತು. ಕಿವೀಸ್ 45 ರನ್ಗಳ ಗೆಲುವು ದಾಖಲಿಸಿತು.
Mohammad Rizwan was running without the bat and took a run short 🤦🏽♂️🤦🏽♂️ #NZvsPAK pic.twitter.com/GPvXZyVaSK
— Farid Khan (@_FaridKhan) January 17, 2024
ಚೇಸಿಂಗ್ ವೇಳೆ ಪಾಕ್ ಆಟಗಾರ ರಿಜ್ವಾನ್ 6ನೇ ಓವರ್ನಲ್ಲಿ ರನ್ ಓಡುವ ಯತ್ನದಲ್ಲಿ ಬ್ಯಾಟ್ ಕೆಳಗೆ ಬೀಳಿಸಿಕೊಂಡರು. ಛಲ ಬಿಡದ ಅವರು 2ನೇ ರನ್ ಗಳಿಕೆಯನ್ನು ಕೈಯಲ್ಲಿ ಕ್ರೀಸ್ ಮುಟ್ಟುವ ಪ್ರಯತ್ನ ಮಾಡಿದರು. ಆದರೆ ರಿಝ್ವಾನ್ ಕೈ ಗ್ಲೌಸ್‌ಗಳು ನಾನ್‌ಸ್ಟ್ರೈಕರ್‌ನ ತುದಿಯಲ್ಲಿನ ಕ್ರೀಸ್‌ಗೆ ತಾಗಿರಲಿಲ್ಲ. ಹೀಗಾಗಿ ರನ್ ಕಡಿತ ಮಾಡಲಾಯಿತು. ಇಂತಹದೊಂದು ಎಡವಟ್ಟು ಮಾಡಿರುವ ರಿಝ್ವಾನ್ ಈಗ ಟ್ರೋಲ್ಗೆ ಒಳಗಾಗಿದ್ದಾರೆ. ಈ ಪಂದ್ಯದಲ್ಲಿ 20 ಎಸೆತ ಎದುರಿಸಿದ ರಿಜ್ವಾನ್ 2 ಸಿಕ್ಸರ್ ನೆರವಿನಿಂದ 24 ರನ್ ಗಳಿಸಿ ಮಿಚೆಲ್ ಸ್ಯಾಂಟ್ನರ್ಗೆ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ Team India: ಪಾಕಿಸ್ತಾನದ ದಾಖಲೆ ಮುರಿಯಲು ಸಜ್ಜಾದ ಟೀಮ್ ಇಂಡಿಯಾ
ವಿಸ್ಫೋಟ ಬ್ಯಾಟಿಂಗ್ ನಡೆಸಿದ ಫಿನ್ ಅಲೆನ್
ಈ ಪಂದ್ಯದಲ್ಲಿ ಫಿನ್ ಅಲೆನ್ ತಮ್ಮ ವಿಸ್ಫೋಟಕ ಬ್ಯಾಟಿಂಗ್ ಮೂಲಕ ಸಿಕ್ಸರ್ಗಳ ಮಳೆಯನ್ನೇ ಸುರಿಸಿದರು. ಬರೋಬ್ಬರಿ 16 ಸಿಕ್ಸರ್ ಬಾರಿಸಿ ಮಿಂಚಿದರು. ಒಟ್ಟು 62 ಎಸೆತಗಳಲ್ಲಿ 137 ರನ್ ಬಾರಿಸಿದರು. ನ್ಯೂಜಿಲ್ಯಾಂಡ್ನ ಬ್ಯಾಟರೊಬ್ಬ ಪಂದ್ಯವೊಂದರಲ್ಲಿ 10 ಕ್ಕಿಂತ ಹೆಚ್ಚು ಸಿಕ್ಸರ್ ದಾಖಲಿಸಿದ್ದು ಇದೇ ಮೊದಲು. ಈ ಹಿಂದೆ 2017 ಹಾಗೂ 2018 ರಲ್ಲಿ ಕೋರಿ ಆಂಡರ್ಸನ್ ಮತ್ತು ಕಾಲಿನ್ ಮುನ್ರೊ ತಲಾ 10 ಸಿಕ್ಸರ್‌ಗಳನ್ನು ಬಾರಿಸಿದ್ದರು.
ಶತಕ ಬಾರಿಸುವ ಮೂಲಕ ಫಿನ್ ಅಲೆನ್ ಕಿವೀಸ್ ಪರ ಹಲವು ದಾಖಲೆಗಳನ್ನು ಕೂಡ ಬರೆದಿದ್ದಾರೆ. ಟಿ-20 ಮಾದರಿಯಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ಮೂರನೇ ಆಟಗಾರ ಎನಿಸಿಕೊಂಡರು. ಅಲೆನ್ 48 ಎಸೆತಗಳಲ್ಲಿ ತನ್ನ ಶತಕವನ್ನು ದಾಖಲಿಸಿದರು. ಈ ಹಿಂದೆ ಗ್ಲೆನ್ ಫಿಲಿಪ್ಸ್ ಅವರು 46 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದರು.