Site icon Vistara News

Mohammed Shami : ಐಸಿಸಿ ಪ್ರಶಸ್ತಿಗೆ ಮೊಹಮ್ಮದ್ ಶಮಿಯ ಹೆಸರು ನಾಮನಿರ್ದೇಶನ

Mohammed Shmi 1

ನವದೆಹಲಿ: ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ (Mohammed Shami ) 2023 ರ ಪ್ರತಿಷ್ಠಿತ ಐಸಿಸಿ ಪುರುಷರ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಆಸ್ಟ್ರೇಲಿಯಾದ ತಾರೆಗಳಾದ ಟ್ರಾವಿಸ್ ಹೆಡ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ನಾಮ ನಿರ್ದೇಶನಗೊಂಡಿರು ಇತರ ಆಟಗಾರರು. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗುರುವಾರ ನವೆಂಬರ್ 2023 ರ ಐಸಿಸಿ ಪುರುಷರ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗಳನ್ನು ಘೋಷಿಸಿದೆ. ಇತ್ತೀಚೆಗೆ ನಡೆದ ಏಕದಿನ ವಿಶ್ವಕಪ್ 2023 ರಲ್ಲಿ ಗಮನಾರ್ಹ ಪ್ರದರ್ಶನಕ್ಕಾಗಿ ಶಮಿ, ಹೆಡ್ ಮತ್ತು ಮ್ಯಾಕ್ಸ್ವೆಲ್ ಅವರನ್ನು ಅಂತಿಮ ಪಟ್ಟಿಗೆ ಸೇರಿಸಲಾಗಿದೆ.

ಮೊಹಮ್ಮದ್ ಶಮಿ (ಭಾರತ): ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ 2023 ರ ವಿಶ್ವಕಪ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಕಳೆದ ತಿಂಗಳು 5.68 ಎಕಾನಮಿ ರೇಟ್​ನೊಂದಿಗೆ 12.06 ಸರಾಸರಿಯಲ್ಲಿ 15 ವಿಕೆಟ್​​ಗಳನ್ನು ಪಡೆದುಕೊಂಡಿದ್ದಾರೆ. 2023ರ ವಿಶ್ವ ಕಪ್​ ಟೂರ್ನಿಯಲ್ಲಿ ಶಮಿ 24 ವಿಕೆಟ್ ಕಬಳಿಸುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ನವೆಂಬರ್​ನಲ್ಲಿ ವಾಂಖೆಡೆಯಲ್ಲಿ ಶ್ರೀಲಂಕಾ ವಿರುದ್ಧ 5/18 ಮತ್ತು ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ 7/57 ಅಂಕಿ ಅಂಶಗಳನ್ನು ದಾಖಲಿಸಿದ್ದರು.

ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾದ ಪ್ರತಿಭಾನ್ವಿತ ಬ್ಯಾಟರ್​ ಟ್ರಾವಿಸ್ ಹೆಡ್ ದೀರ್ಘಕಾಲದ ಗಾಯದ ವಿರಾಮದ ನಂತರ ಅಕ್ಟೋಬರ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅದ್ಭುತ ಶತಕದೊಂದಿಗೆ ತಂಡಕ್ಕೆ ಗಮನಾರ್ಹ ಪುನರಾಗಮನ ಮಾಡಿದ್ದರು. ನವೆಂಬರ್​ನಲ್ಲಿ ಅವರು ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರೆಸಿದ್ದರು. ಐಸಿಸಿ ವಿಶ್ವಕಪ್​ನಲ್ಲಿ ಎರಡು ಶತಕ ಮತ್ತು ಅರ್ಧಶತಕದ ಸಹಾಯದಿಂದ ಐದು ಏಕದಿನ ಪಂದ್ಯಗಳಲ್ಲಿ 44 ರ ಪ್ರಭಾವಶಾಲಿ ಸರಾಸರಿಯೊಂದಿಗೆ 220 ರನ್ ಗಳಿಸಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಸೆಮಿಫೈನಲ್ ಮತ್ತು ಭಾರತ ವಿರುದ್ಧದ ಫೈನಲ್​ನಲ್ಲಿ ಅವರು ನೀಡಿದ್ದ ಅತ್ಯುತ್ತಮ ಪ್ರದರ್ಶನವು ಹೈಲೈಟ್ ಆಗಿತ್ತು. ಸೆಮಿಫೈನಲ್​ನಲ್ಲಿ ಹೆಡ್ 48 ಎಸೆತಗಳಲ್ಲಿ 62 ರನ್​ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಭಾರತ ವಿರುದ್ಧದದ ಫೈನಲ್​ನಲ್ಲಿ 120 ಎಸೆತಗಳಲ್ಲಿ 137 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಆರನೇ ವಿಶ್ವ ಕಪ್​ ತಂದುಕೊಟ್ಟಿದ್ದರು.

ಇದನ್ನೂ ಓದಿ : Pakistan Cricket Team : ಪಾಕಿಸ್ತಾನವನ್ನು ‘ಪಾಕಿ’ ಎಂದರೆ ವರ್ಣಭೇದ ನಿಂದನೆಯಂತೆ!

ಗ್ಲೆನ್ ಮ್ಯಾಕ್ಸ್ವೆಲ್ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾದ ಆಲ್​ರೌಂಡರ್​ ಗ್ಲೆನ್ ಮ್ಯಾಕ್ಸ್​ವೆಲ್​ ಕಳೆದ ತಿಂಗಳು ಏಕದಿನ ಪಂದ್ಯಗಳಲ್ಲಿ ತಮ್ಮ ಮೂರು ಪಂದ್ಯಗಳಲ್ಲಿ 152.23 ಸ್ಟ್ರೈಕ್ ರೇಟ್ನೊಂದಿಗೆ 204 ಸರಾಸರಿಯಲ್ಲಿ 204 ರನ್ ಮತ್ತು ಎರಡು ವಿಕೆಟ್​ಗಳನ್ನು ಕಬಳಿಸಿದ್ದರು. 2023ರ ವಿಶ್ವಕಪ್​ನಲ್ಲಿ ಮುಂಬೈನಲ್ಲಿ ಅಫ್ಘಾನಿಸ್ತಾನ ವಿರುದ್ಧ 201* ರನ್ ಬಾರಿಸಿದ್ದರು. ಕಳೆದ ತಿಂಗಳು ಭಾರತ ವಿರುದ್ಧ ಎರಡು ಟಿ 20 ಪಂದ್ಯಗಳಲ್ಲಿ ಶತಕ ಸೇರಿದಂತೆ ಮ್ಯಾಕ್ಸ್ವೆಲ್ 207.14 ಸ್ಟ್ರೈಕ್ ರೇಟ್​​ನಲ್ಲಿ 116 ರನ್ ಗಳಿಸಿದ್ದರು.

ಮೇಲಿನ ಮೂರು ಆಟಗಾರರು ವಿಶ್ವ ಕಪ್​ನ ಫೈನಲ್ ಪಂದ್ಯದಲ್ಲಿ ಆಡಿದವರು. ಆದರೆ, ಅತ್ಯುತ್ತಮ ಸಾಧನೆ ಮಾಡಿದ ಹೊರತಾಗಿಯೂ ಮೊಹಮ್ಮದ್ ಶಮಿಗೆ ಪ್ರಶಸ್ತಿ ಎತ್ತುವ ಅವಕಾಶ ದೊರಕಲಿಲ್ಲ. ಕೇವಲ ಏಳು ಪಂದ್ಯಗಳಲ್ಲಿ ಅಮೋಘ ಸಾಧನೆ ಮಾಡಿದ್ದ ಅವರಿಗೆ ಪ್ರಶಸ್ತಿ ಎತ್ತುವ ಅವಕಾಶ ಸಿಗದೇ ಹೋಗಿದ್ದು ಬೇಸರದ ವಿಷಯ.

Exit mobile version