Site icon Vistara News

Mohammed Shami : ವಿಶ್ವ ಕಪ್​ನಲ್ಲಿ ವಿಕೆಟ್​ಗಳ ಅರ್ಧ ಶತಕ ಬಾರಿಸಿ ನೂತನ ದಾಖಲೆ ಬರೆದ ಶಮಿ

Mohammed Shami

ಮುಂಬಯಿ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ (Mohammed Shami ) ಐಸಿಸಿ ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್ ಕಬಳಿಸುವ ಮೂಲಕ ವಿಶ್ವ ಕಪ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅವರು ಅತಿವೇಗದಲ್ಲಿ 50ಕ್ಕಿಂತ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಶಮಿ 17 ಪಂದ್ಯಗಳಲ್ಲಿ ಇದೀಗ 54 ವಿಕೆಟ್​ಗಳನ್ನು ತಮ್ಮದಾಗಿಕೊಂಡಿದ್ದಾರೆ. ಶಮಿ ಐಸಿಸಿ ವಿಶ್ವಕಪ್ 2023 ರಲ್ಲಿ ವೇಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಆರಂಭಿಕ ಆಟಗಾರರಾದ ಡೆವೊನ್ ಕಾನ್ವೇ, ರಚಿನ್ ರವೀಂದ್ರ, ನಾಯಕ ಕೇನ್ ವಿಲಿಯಮ್ಸನ್ ಮತ್ತು ಡ್ಯಾರಿಲ್ ಮಿಚೆಲ್​, ಟಾ ಮ್ ಲಾಥಮ್ ಅವರನ್ನು ಔಟ್ ಮಾಡುವ ಮೂಲಕ ಆ ಮ್ಯಾಜಿಕ್ ಅನ್ನು ಪ್ರದರ್ಶಿಸಿದರು. ಕೊನೆಯಲ್ಲಿ ಅವರು ಮಿಚೆಲ್ ಸ್ಯಾಂಟ್ನರ್​, ಟಿಮ್ ಸೌಥಿ ಹಾಗೂ ಲಾಕಿ ಫರ್ಗ್ಯೂಸನ್ ಅವರ ವಿಕೆಟ್ ಪಡೆದರು.

17ನೇ ಇನ್ನಿಂಗ್ಸ್​ನಲ್ಲಿ 50 ವಿಕೆಟ್ ಪಡೆದ ಭಾರತದ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಮೊಹಮ್ಮದ್ ಶಮಿ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಮಿಚೆಲ್ ಸ್ಟಾರ್ಕ್ 19 ಇನ್ನಿಂಗ್ಸ್​ಗಳಲ್ಲಿ ಈ ದಾಖಲೆ ಬರೆದಿದ್ದರು. ಅವರ ದಾಖಲೆಯನ್ನು ಇನ್ನೂ ಎರಡು ಪಂದ್ಯಗಳು ಕಡಿಮೆ ಇರುವಂತೆಯೇ ಶಮಿ ಮುರಿದರು. ಇದೇ ವೇಳೆ ಮೊಹಮ್ಮದ್ ಸಮಿ ಹಾಲಿ ಆವೃತ್ತಿಯಲ್ಲಿ ಒಟ್ಟು 23 ವಿಕೆಟ್​ಗಳನ್ನು ಉರುಳಿಸುವ ಮೂಲಕ ಗರಿಷ್ಠ ವಿಕೆಟ್​ ಪಡೆದವರ ಸಾಲಿನಲ್ಲಿ ಮೊದಲ ಸ್ಥಾನ ಪಡೆದರು.

ವೇಗಿ ತನ್ನ ಮೊದಲ ಎಸೆತದಲ್ಲೇ ಡೆವೊನ್ ಕಾನ್ವೇ ಅವರನ್ನು ಔಟ್ ಮಾಡಿದರು ಮತ್ತು ಶೀಘ್ರದಲ್ಲೇ ಫಾರ್ಮ್ ನಲ್ಲಿರುವ ರಚಿನ್ ರವೀಂದ್ರ ಅವರನ್ನು ಔಟ್ ಮಾದರು. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಆಲ್ರೌಂಡರ್ ಡ್ಯಾರಿಲ್ ಮಿಚೆಲ್ ಅವರೊಂದಿಗೆ 181 ರನ್​ಗಳ ಜೊತೆಯಾಟದಲ್ಲಿ ಆಡಿದ್ದರಿಂದ ಭಾರತ ತಂಡಕ್ಕೆ ಸವಾಲು ಎದುರಾಯಿತು. ಈ ವೇಳೆ ವಿಲಿಯಮ್ಸನ್ ವಿಕೆಟ್​ ಪಡೆದು ಮಿಂಚಿದರು. ಬಳಿಕ ಡ್ಯಾರಿಲ್​ಗೆ ದಾರಿ ತೋರಿದರು.

ಇದನ್ನೂ ಓದಿ : VISTARA TOP 10 NEWS: ಕಿವೀಸ್‌ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ಭಾರತ, ಸಚಿನ್‌ ದಾಖಲೆ ಮುರಿದ ಕೊಹ್ಲಿ…

ನ್ಯೂಜಿಲೆಂಡ್ ಬ್ಯಾಟರ್​ಗಳ ವಿರುದ್ಧ ಭಾರತೀಯ ಬೌಲರ್​​ಗಳು ಹೆಣಗಾಡುತ್ತಿದ್ದಾಗ ಮತ್ತು ವಿಕೆಟ್​ಗಾಗಿ ಕಷ್ಟ ಪಡುತ್ತಿದ್ದಾಗ ಶಮಿ ನೆರವಿಗೆ ನಿಂತರು. ಏತನ್ಮದ್ಯೆ, ಮೊಹಮ್ಮದ್ ಶಮಿ ಒಂದು ಕ್ಯಾಚ್ ಅನ್ನು ಕೈಬಿಟ್ಟರು. ಆದರೆ, ವೇಗಿ ಈ ಘಟನೆಯು ಬೇಸರಕ್ಕೆ ಕಾರಣವಾಗುವಂತೆ ಮಾಡಲಿಲ್ಲ.ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಔಟ್ ಮಾಡಿ ಅದ್ಭುತ ಪುನರಾಗಮನ ಮಾಡಿದರು.

ಮೊಹಮ್ಮದ್ ಶಮಿ 181 ರನ್ಗಳ ಬಲವಾದ ಜೊತೆಯಾಟವನ್ನು ಕೊನೆಗೊಳಿಸಿದರು. ಅದೇ ಓವರ್​ನಲ್ಲಿ ಟಾಮ್ ಲಾಥಮ್ ಅವರನ್ನು 0 ರನ್​ಗೆ ಔಟ್ ಮಾಡುವ ಮೂಲಕ ಟೀಮ್ ಇಂಡಿಯಾಕ್ಕೆ ಮತ್ತೊಂದು ವಿಕೆಟ್ ನೀಡಿದರು. ವಾಂಖೆಡೆಯ ಜನಸಮೂಹದಲ್ಲಿ ಉತ್ಸಾಹ ಮತ್ತೆ ಕಾಣಿಸಿಕೊಂಡಿತು.

ಕೊಹ್ಲಿಯ ಅದ್ಭುತ ಬ್ಯಾಟಿಂಗ್​

ಇದಕ್ಕೂ ಮುನ್ನ ವಾಂಖೆಡೆ ಪಿಚ್​ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ವಿರಾಟ್ ಕೊಹ್ಲಿ ಐಸಿಸಿ ವಿಶ್ವಕಪ್ 2023 ರಲ್ಲಿ ತಮ್ಮ 3 ನೇ ಶತಕವನ್ನು ಗಳಿಸಿದರು . ಏಕದಿನ ಅಂತರರಾಷ್ಟ್ರೀಯ (ಒಡಿಐ) ಸ್ವರೂಪದ ಕ್ರಿಕೆಟ್​ನಲ್ಲಿ 50 ಶತಕಗಳನ್ನು ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು. ಶ್ರೇಯಸ್ ಅಯ್ಯರ್ ಹಾಳಿ ಟೂರ್ನಿಯಲ್ಲಿ ಸತತ ಎರಡನೇ ಶತಕ ಬಾರಿಸಿ ಟೀಮ್ ಇಂಡಿಯಾವನ್ನು ಉನ್ನತ ಸ್ಕೋರ್ ಕಡೆಗೆ ಕೊಂಡೊಯ್ದರು.

Exit mobile version