Site icon Vistara News

Mohammed Shami : ಶಮಿಯ ಯಶಸ್ಸಿನ ಬಗ್ಗೆ ವಿಲಕ್ಷಣ ಹೇಳಿಕೆ ನೀಡಿದ ವಿಚ್ಛೇದಿತ ಪತ್ನಿ

Hasin Jahan

ಬೆಂಗಳೂರು: ಮೊಹಮ್ಮದ್ ಶಮಿ ವಿಶ್ವಕಪ್ ಗೆಲ್ಲುವ ಕಸನು ಕಾಣುತ್ತಿದ್ದಾರೆ. ಭಾರತದ ಮೊದಲ ಮೂರು ಪಂದ್ಯಗಳಲ್ಲಿ ಸ್ಥಾನ ಪಡೆಯದ ವೇಗಿ ಕೇವಲ 4 ಪಂದ್ಯಗಳಲ್ಲಿ 16 ವಿಕೆಟ್​ಗಳನ್ನು ಪಡೆದಿದ್ದಾರೆ. ಶಮಿ ಅವರ ಅಸಾಧಾರಣ ಪ್ರದರ್ಶನದ ಬಗ್ಗೆ ಇಡೀ ಕ್ರಿಕೆಟ್ ಕ್ಷೇತ್ರವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ ಅವರ ವಿಚ್ಛೇದಿತ ಪತ್ನಿ ಹಸೀನ್ ಜಹಾನ್ ತಮ್ಮ ಪತಿಯ ಯಶಸ್ಸಿನ ಬಗ್ಗೆ ವಿಲಕ್ಷಣ ಹೇಳಿಕೆ ನೀಡಿದ್ದಾರೆ.

ನ್ಯೂಸ್ ನೇಷನ್​ಗೆ ನೀಡಿದ ಸಂದರ್ಶನದಲ್ಲಿ, ಹಸೀನ್ ಜಹಾನ್ ಅವರನ್ನು ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್​​ನಲ್ಲಿ ಶಮಿ ಮತ್ತು ಟೀಮ್ ಇಂಡಿಯಾದ ಯಶಸ್ಸಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆರಂಭದಲ್ಲಿ, ಜಹಾನ್ ಅವರು ಕ್ರಿಕೆಟ್ ಮತ್ತು ಕ್ರಿಕೆಟಿಗರ ಅಭಿಮಾನಿಯಲ್ಲ ಎಂದು ಹೇಳಿಕೊಂಡರು. ಆದಾಗ್ಯೂ, ಶಮಿ ಉತ್ತಮ ಪ್ರದರ್ಶನ ನೀಡಿದರೆ, ಭಾರತೀಯ ತಂಡದಲ್ಲಿ ಉಳಿಯುತ್ತಾರೆ. ಅವರು ಉತ್ತಮವಾಗಿ ಸಂಪಾದಿಸುತ್ತಾರೆ. ಅದು ಕುಟುಂಬದ ಭವಿಷ್ಯಕ್ಕೆ ಒಳ್ಳೆಯದು ಎಂದು ವಿಭಿನ್ನ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ.

“ಕುಚ್ ಭಿ ಹೈ, ಅಚ್ಚಾ ಪರ್ಫಾರ್ಮ್ ಕೆರ್ ರಾ ಹೈ, ಅಚ್ಚಾ ಖೇಲೆಗಾ, ಟೀಮ್ ಮೇನ್ ಬಿನಾ ರೇಗಾ, ಅಚ್ಚಾ ಕಾಮಯೇಗಾ ತೋ ಹುಮಾರಾ ಭಾವಿಶ್ಯ ಸೆಕ್ಯೂರ್ ರೇಗಾ” (ಅದೇನೇ ಇರಲಿ, ಶಮಿ ಉತ್ತಮ ಪ್ರದರ್ಶನ ನೀಡಿದರೆ, ಅವರು ಭಾರತೀಯ ತಂಡದಲ್ಲಿ ಉಳಿಯುತ್ತಾರೆ. ಉತ್ತಮವಾಗಿ ಸಂಪಾದಿಸುತ್ತಾರೆ, ಅದು ನಮ್ಮ ಭವಿಷ್ಯವನ್ನು ಭದ್ರಪಡಿಸುತ್ತಾರೆ” ಎಂದು ಜಹಾನ್ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ, ಕೌಟುಂಬಿಕ ಹಿಂಸಾಚಾರ ಪ್ರಕರಣದಲ್ಲಿ ವಿಚ್ಛೇದಿತ ಪತ್ನಿಗೆ ಮಾಸಿಕ 1,30,000 ರೂ.ಗಳ ಜೀವನಾಂಶವನ್ನು ಪಾವತಿಸುವಂತೆ ಕೋಲ್ಕತಾ ನ್ಯಾಯಾಲಯವು ಮೊಹಮ್ಮದ್ ಶಮಿಗೆ ಆದೇಶಿಸಿತ್ತು. ಹಸೀನ್ ಜಹಾನ್ ಮತ್ತು ಮೊಹಮ್ಮದ್ ಶಮಿ ಜೂನ್ 6, 2014 ರಂದು ವಿವಾಹವಾದರು. ದಂಪತಿ 2015ರಲ್ಲಿ ರಲ್ಲಿ ತಮ್ಮ ಮಗಳನ್ನು ಸ್ವಾಗತಿಸಿದ್ದರು.

ಮಾರ್ಚ್ 8, 2018 ರಂದು, ಜಹಾನ್ ತನ್ನ ಪತಿಯ ವಿರುದ್ಧ ಬೆದರಿಕೆ, ದಾಂಪತ್ಯ ದ್ರೋಹ ಮತ್ತು ವರದಕ್ಷಿಣೆ ಬೇಡಿಕೆಯ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದರು. ದಂಪತಿಗಳು 2018 ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ಹಲವು ದಾಖಲೆ ಬರೆದ ಶಮಿ

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​ ಅನುಭವಿ ವೇಗಿ ಮೊಹಮ್ಮದ್​ ಶಮ್ಮಿ ಅವರು, ಪಂದ್ಯದಿಂದ ಪಂದ್ಯಕ್ಕೆ ತಮ್ಮ ಘಾತಕ ಬೌಲಿಂಗ್​ ದಾಳಿ ಮೂಲಕ ವಿಕೆಟ್​ ಕಿತ್ತು ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಗುರುವಾರ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಲಂಕಾ ವಿರುದ್ಧದ ಪಂದ್ಯದಲ್ಲಿಯೂ 5 ವಿಕೆಟ್​ ಕಿತ್ತು ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ: Glenn Maxwell : ದ್ವಿಶತಕದ ದಾಖಲೆಯ ಶೂರ ಮ್ಯಾಕ್ಸ್​ವೆಲ್​ ವಿಶ್ವ ಕಪ್​ನಿಂದ ಔಟ್​?

ಲಂಕಾ ವಿರುದ್ಧದ ಪಂದ್ಯದಲ್ಲಿ 5 ಓವರ್​ ಬೌಲಿಂಗ್​ ಮಾಡಿದ ಮೊಹಮ್ಮದ್​ ಶಮಿ ಕೇವಲ 18 ನೀಡಿ 5 ವಿಕೆಟ್​ ಉಡಾಯಿಸಿದರು. ಇದರಲ್ಲಿ ಒಂದು ಮೇಡನ್​ ಕೂಡ ಒಳಗೊಂಡಿತ್ತು. ಈ ವಿಕೆಟ್​ ಸಾಧನೆಗಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಭಾರತ ಪರ ವಿಶ್ವಕಪ್​ಕಪ್​ನಲ್ಲಿ ಅತ್ಯಧಿಕ ವಿಕೆಟ್​

33 ವರ್ಷದ ಶಮಿ ಅವರು ಲಂಕಾ ವಿರುದ್ಧ 5 ವಿಕೆಟ್​ ಕೀಳುವ ಮೂಲಕ ಭಾರತ ಪರ ವಿಶ್ವಕಪ್​ನಲ್ಲಿ ಅತ್ಯಧಿಕ ವಿಕಟ್​ ಕಿತ್ತ ಮೊದಲ ಬೌಲರ್​ ಎಂಬ ಹಿರಿಮೆಗೆ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಜಂಟಿಯಾಗಿ ಜಹೀರ್​ ಖಾನ್​ ಮತ್ತು ಜಾವಗಲ್​ ಶ್ರೀನಾಥ್​ ಅವರ ಹೆಸರಿನಲ್ಲಿತ್ತು. ಜಹೀರ್​ ಮತ್ತು ಶ್ರೀನಾಥ್​ ತಲಾ 44 ವಿಕೆಟ್​ ಪಡೆದಿದ್ದರು. ಆದರೆ ಈಗ ಶಮಿ 45* ವಿಕೆಟ್​ ಪಡೆಯುವ ಮೂಲಕ ಈ ದಾಖಲೆಯನ್ನು ಮುರಿದಿದ್ದಾರೆ. 33 ವಿಕೆಟ್​ ಪಡೆದಿರುವ ಜಸ್​ಪ್ರೀತ್​ ಬುಮ್ರಾ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರಿಗೂ ಜಹೀರ್​ ಮತ್ತು ಶ್ರೀನಾಥ್​ ದಾಖಲೆ ಮುರಿಯುವ ಅವಕಾಶವಿದೆ. ಈ ದಾಖಲೆ ಮುರಿಯಲು ಬುಮ್ರಾಗೆ ಇನ್ನು 12 ವಿಕೆಟ್​ ಬೇಕಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version