ರೊಸೇಯೂ (ಡೊಮಿನಿಕಾ): ವೆಸ್ಟ್ ಇಂಡೀಸ್(IND vs WI) ವಿರುದ್ಧ ಬುಧವಾರ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವೇ ಭಾರತ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಆರ್.ಅಶ್ವಿನ್ (5 ವಿಕೆಟ್) ಹಾಗೂ ರವೀಂದ್ರ ಜಡೇಜಾ (3 ವಿಕೆಟ್) ಮಾರಕ ದಾಳಿಗೆ ಸಿಲುಕಿದ ಕೆರಿಬಿಯನ್ನರು 150 ರನ್‌ಗಳಿಗೆ ಆಲೌಟ್ ಆಗಿದ್ದಾರೆ. ಇನ್ನು ಬ್ಯಾಟಿಂಗ್ ಆರಂಭಿಸಿದ ಭಾರತ ಉತ್ತಮ ಆರಂಭ ಪಡೆದಿದೆ. ಮೊದಲ ದಿನದ ಅಂತ್ಯಕ್ಕೆ ಭಾರತ ವಿಕೆಟ್ ನಷ್ಟವಿಲ್ಲದೆ 80 ರನ್ ಗಳಿಸಿದ್ದು, ಬೃಹತ್ ಮುನ್ನಡೆಯ ಮುನ್ಸೂಚನೆ ನೀಡಿದೆ. ರೋಹಿತ್ ಶರ್ಮಾ 30 ಹಾಗೂ ಯಶಸ್ವಿ ಜೈಸ್ವಾಲ್ 40 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ. ಇದೇ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್(mohammed siraj) ಅವರು ಹೊಡಿದಿರುವ ಕ್ಯಾಚ್(mohammed siraj catch) ಒಂದು ಇದೀಗ ವೈರಲ್(viral video) ಆಗಿದೆ.
ಭೋಜನ ವಿರಾಮಕ್ಕೆ ಒಂದು ಓವರ್ ಬಾಕಿ ಇತ್ತು. ಈ ಓವರ್ ಜಡೇಜಾ ಪಾಲಾಯಿತು. ಕ್ರೀಸ್ನಲ್ಲಿದ್ದ ಜರ್ಮೈನ್ ಬ್ಲಾಕ್‌ವುಡ್ ಅವರು ಚೆಂಡನ್ನು ಬೌಂಡರಿಗೆ ಬಾರಿಸಲು ಎತ್ತಿ ಹೊಡೆದರು. ಆದರೆ 30 ಯಾರ್ಡ್ ಸರ್ಕಲ್ನಲ್ಲಿದ್ದ ಸಿರಾಜ್ ಅವರು ಹಿಮ್ಮುಖವಾಗಿ ಸೂಪರ್ ಮ್ಯಾನ್ ರೀತಿಯಲ್ಲಿ ಜಿಗಿದು ಈ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು. ಸಿರಾಜ್ ಅವರ ಈ ಡೈವ್ ಕಂಡು ಪ್ರೇಕ್ಷರು ಒಂದು ಕ್ಷಣ ದಂಗಾದರು. ಸದ್ಯ ಸಿರಾಜ್ ಅವರ ಈ ಕ್ಯಾಚ್ನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Miyaan Bhai ki daring 😯 #INDvWIonFanCode #WIvIND pic.twitter.com/LUdvAmmbVr
— FanCode (@FanCode) July 12, 2023
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ಬ್ಲಾಕ್‌ವುಡ್ 34 ಎಸೆತಗಳಲ್ಲಿ 14 ರನ್ ಬಾರಿಸಿ ಉತ್ತಮ ಆರಂಭ ಪಡೆದಿದ್ದರು. ಆದರೆ ಸಿರಾಜ್ ಸೂಪರ್ ಕ್ಯಾಚ್ ಪಡೆಯುವ ಮೂಲಕ ವಿಂಡೀಸ್ ಬ್ಯಾಟರ್ನ ಅಬ್ಬರಕ್ಕೆ ಬ್ರೇಕ್ ಹಾಕಿದರು.
ವಿಶೇಷ ದಾಖಲೆ ಬರೆದ ಅಶ್ವಿನ್
ವಿಂಡೀಸ್‌ನ ತಗೆನರೈನ್ ಚಂದ್ರಪಾಲ್ ಅವರ ವಿಕೆಟ್ ಪಡೆಯುವ ಮೂಲಕ ಆರ್.ಅಶ್ವಿನ್ ಅವರು ತಂದೆ ಹಾಗೂ ಮಗನ ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎನಿಸಿದರು. ತಗೆನರೈನ್ ಚಂದ್ರಪಾಲ್ ಅವರ ತಂದೆ ಶಿವನರೈನ್ ಚಂದ್ರಪಾಲ್ ಅವರ ವಿಕೆಟ್ 2011ರಲ್ಲಿ ಪಡೆದಿದ್ದರು.
2011ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆರ್.ಅಶ್ವಿನ್ ಅವರು ಶಿವನರೈನ್ ಚಂದ್ರಪಾಲ್ ಅವರ ವಿಕೆಟ್ ಪಡೆದಿದ್ದರು. ಕ್ರಿಕೆಟ್ ವೃತ್ತಿಜೀವನದಲ್ಲಿ ಶಿವನರೈನ್ ಅವರನ್ನು ಅಶ್ವಿನ್ ನಾಲ್ಕು ಬಾರಿ ಔಟ್ ಮಾಡಿದ್ದರು. ಈಗ ಬುಧವಾರ ಆರಂಭವಾದ ಮೊದಲ ಟೆಸ್ಟ್‌ನಲ್ಲಿ ತಗೆನರೈನ್ ಚಂದ್ರಪಾಲ್ 12 ರನ್ ಗಳಿಸಿ ಆಡುತ್ತಿದ್ದಾಗ ಅವರನ್ನು ಬೌಲ್ಡ್ ಮಾಡುವ ಮೂಲಕ ಅಶ್ವಿನ್, ವಿಶಿಷ್ಟ ಸಾಧನೆ ಮಾಡಿದರು. ಇದುವರೆಗೆ ಭಾರತದ ಯಾವ ಬೌಲರ್ ಕೂಡ ತಂದೆ-ಮಗನ ವಿಕೆಟ್ ಪಡೆದಿರಲಿಲ್ಲ.