Site icon Vistara News

CWG- 2022 | ಚೊಚ್ಚಲ ಕಾಮನ್ವೆಲ್ತ್‌ನಲ್ಲಿ ಕಂಚು ಗೆದ್ದ ಮೋಹಿತ್‌ ಗ್ರೇವಾಲ್‌

CWG-2022

ಬರ್ಮಿಂಗ್ಹಮ್‌ : ಕಾಮನ್ವೆಲ್ತ್‌ ಗೇಮ್ಸ್‌ (CWG- 2022) ಕ್ರೀಡಾಕೂಟದಲ್ಲಿ ಶುಕ್ರವಾರ ಭಾರತಕ್ಕೆ ಪದಕಗಳ ಸುರಿಮಳೆಯಾಗಿದೆ. ರಾತ್ರಿಯ ವೇಳೆಗೆ ಒಟ್ಟಾರೆ ೬ ಪದಕಗಳು ಲಭಿಸಿದ್ದು, ಅಷ್ಟನ್ನೂ ಕುಸ್ತಿಪಟುಗಳು ತಂದುಕೊಟ್ಟಿದ್ದಾರೆ. ಐದನೇ ಪದಕ ಗೆದ್ದವರು ಪುರುಷರ ೧೨೫ ಕೆ.ಜಿ ವಿಭಾಗದಲ್ಲಿ ಸ್ಪರ್ಧಿ ಮೋಹಿತ್‌ ಗ್ರೇವಾಲ್‌.

ಶುಕ್ರವಾರ ರಾತ್ರಿ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಜಮೈಕಾದ ಆರೋನ್‌ ಜೊಹಾನ್ಸನ್‌ ವಿರುದ್ಧ ಏಕಪಕ್ಷೀಯ ಜಯ ಸಾಧಿಸಿದ ಮೋಹಿತ್‌ ಗ್ರೇವಾಲ್‌ ಚೊಚ್ಚಲ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿಯೇ ಪದಕವೊಂದನ್ನು ಬಾಚಿಕೊಂಡರು.

ಮೋಹಿತ್ ಅವರ ಪದಕದ ಸಾಧನೆಯೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ ೨೬ಕ್ಕೆ ಏರಿಕೆಯಾಯಿತು. 9 ಚಿನ್ನದ ಪದಕ, ೮ ಬೆಳ್ಳಿ ಪದಕ ಹಾಗೂ ೯ ಕಂಚಿನದ ಪದಕ ಭಾರತದ ಪಾಲಾಗಿದೆ. ಅಲ್ಲದೆ, ಅಂಕಪಟ್ಟಿಯಲ್ಲಿ ಐದನೇ ಸ್ಥಾನವೂ ಲಭಿಸಿದೆ.

ದಿನದ ಸ್ಪರ್ಧೆಯಲ್ಲಿ ಮೋಹಿತ್‌ ಸೇರಿದಂತೆ ಭಾರತಕ್ಕೆ ಕುಸ್ತಿ ಸ್ಪರ್ಧೆಯಲ್ಲಿ ಒಟ್ಟು ಆರು ಪದಕಗಳು ದೊರೆತವು. ಮೊದಲ ಪದಕ ಅನ್ಶು ಮಲಿಕ್ ಅವರ ಬೆಳ್ಳಿಯೊಂದಿಗೆ ಲಭಿಸಿದರೆ, ಎರಡನೇ ಪದಕ ಬಜರಂಗ್‌ ಪೂನಿಯಾ ಗೆದ್ದ ಬಂಗಾರ. ಮೂರನೇ ಪದಕ ಸಾಕ್ಷಿ ಮಲಿಕ್‌ ಗೆದ್ದ ಚಿನ್ನ ಹಾಗೂ ನಾಲ್ಕನೆಯದು ದೀಪಕ್‌ ಪೂನಿಯಾ ಪಾಕಿಸ್ತಾನದ ಎದುರಾಳಿಯನ್ನು ಮಣಿಸಿ ಗೆದ್ದ ಸ್ವರ್ಣ ಪದಕ. ಐದನೇ ಪದಕ ಕಂಚು. ಗೆದ್ದವರು ದಿವ್ಯಾ ಕಾಕ್ರನ್‌.

ಇದನ್ನೂ ಓದಿ | CWG-2022 | ಮಹಿಳೆಯರ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ದಿವ್ಯಾ ಕಾಕ್ರನ್‌

Exit mobile version