Site icon Vistara News

ICC World Cup 2023 : ಭಾರತ ವಿರುದ್ಧ ಸೋತು ಕಂಗೆಟ್ಟ ಪಾಕ್​ ತಂಡಕ್ಕೆ ಜ್ವರದ ಬಾಧೆ!

Pakistan Cricket team

ಬೆಂಗಳೂರು: ಪಾಕಿಸ್ತಾನ ಕ್ರಿಕೆಟ್ ತಂಡವು ಭಾರತದಲ್ಲಿ ಉತ್ತಮ ಸಮಯವನ್ನು ಹೊಂದಿಲ್ಲ. ಅಹಮದಾಬಾದ್​ನಲ್ಲಿ ಭಾರತ ವಿರುದ್ಧ ಹೀನಾಯ ಸೋಲಿನ ನಂತರ, ಪಾಕಿಸ್ತಾನ ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಪಂದ್ಯಕ್ಕೆ (ICC World Cup 2023) ಸಜ್ಜಾಗಬೇಕಾಗಿದೆ. ಅದಕ್ಕಾಗಿ ತಂಡ ಬೆಂಗಳೂರಿಗೆ ತಲುಪಿದೆ. ಆದರೆ ಪಾಖ್​ ಶಿಬಿರದಲ್ಲಿ ಜ್ವರದ ಸಮಸ್ಯೆ ಕಾಣಿಸಿಕೊಂಡಿದೆ. ಅಬ್ದುಲ್ಲಾ ಶಫೀಕ್, ಶಾಹೀನ್ ಅಫ್ರಿದಿ ಮತ್ತು ಉಸಾಮಾ ಮಿರ್ ಜ್ವರದಿಂದ ಬಳಲುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತ ವಿರುದ್ಧ ಹೀನಾಯ ಸೋಲಿನ ನಂತರ ಪಾಕಿಸ್ತಾನ ಸೋಮವಾರ ಬೆಂಗಳೂರಿಗೆ ಆಗಮಿಸಿದೆ. ಆದರೆ ಅವರು ಆಸ್ಟ್ರೇಲಿಯಾವನ್ನು ಎದುರಿಸುವ ಮೊದಲು, ಅವರ ಸಿದ್ಧತೆಗಳಿಗೆ ಅಡ್ಡಿಯಾಗಿದೆ. ಸತತವಾಗಿ ಜ್ವರದ ಸಮಸ್ಯೆಯಿಂದ ಬಳಲುತ್ತಿರುವ ಆಟಗಾರರಿಗೆ ಅಭ್ಯಾಸಕ್ಕಾಗಿ ಮೈದಾನಕ್ಕೆ ಇಳಿಯಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಪಾಕ್​ ತಂಡದ ಸಿದ್ದತೆಗೆ ಸಮಸ್ಯೆ ಉಂಟಾಗಿದೆ.

ಕಳೆದ ಕೆಲವು ದಿನಗಳಿಂದ ಕೆಲವು ಆಟಗಾರರಿಗೆ ಜ್ವರ ಬಂದಿದೆ ಮತ್ತು ಅವರಲ್ಲಿ ಹೆಚ್ಚಿನವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಚೇತರಿಸಿಕೊಳ್ಳುವ ಹಂತದಲ್ಲಿರುವವರು ತಂಡದ ವೈದ್ಯಕೀಯ ಸಮಿತಿಯ ಮೇಲ್ವಿಚಾರಣೆಯಲ್ಲಿದ್ದಾರೆ” ಎಂದು ಪಾಕಿಸ್ತಾನ ತಂಡದ ಮಾಧ್ಯಮ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನ ಶಿಬಿರದಲ್ಲಿ ಜ್ವರದ ಅಲೆಯ ನಂತರ, ತಂಡವು ಡೆಂಗ್ಯೂ ಮತ್ತು ಕೋವಿಡ್ -19 ಪರೀಕ್ಷೆಗಳನ್ನು ನಡೆಸಿದೆ. ಬೆಂಗಳೂರಿನಲ್ಲಿ ಆಟಗಾರರು ಆಗಾಗ್ಗೆ ಡೆಂಗ್ಯೂ ಮತ್ತು ಕೋವಿಡ್ -19 ತಪಾಸಣೆಗೆ ಒಳಗಾಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಗಳನ್ನೂ ಓದಿ
Physical abuse : ಅತ್ಯಾಚಾರ ಕೇಸಲ್ಲಿ ಸಿಕ್ಕಿ ಬಿದ್ದಿದ್ದ ಲಂಕಾ ಕ್ರಿಕೆಟಿಗನಿಗೆ ಶಿಕ್ಷೆಯಿಂದ ಮುಕ್ತಿ
SL vs AUS: ಅಂಪೈರ್​ ವಿವಾದಾತ್ಮಕ ತೀರ್ಪಿಗೆ ವಿಕೆಟ್​ ಕೈಚೆಲ್ಲಿದ ಡೇವಿಡ್​ ವಾರ್ನರ್​
ICC World Cup 2023 : ಆಫ್ಘನ್​ ತಂಡದ ಗುರ್ಬಜ್​ಗೆ ಐಸಿಸಿ ಗುದ್ದು? ನಿಯಮ ಉಲ್ಲಂಘನೆಗೆ ದಂಡನೆ

ಆಟಗಾರರು ಚೇತರಿಸಿಕೊಳ್ಳಲು ಅನುವು ಮಾಡಿಕೊಡಲು ಪಾಕಿಸ್ತಾನ ತನ್ನ ಅಭ್ಯಾಸ ಅವಧಿಗಳನ್ನು ರದ್ದುಗೊಳಿಸಿದೆ. ಆದಾಗ್ಯೂ, ತಂಡವು ಮಂಗಳವಾರ ಸಂಜೆ 6-8 ರಿಂದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಲಭ್ಯವಿರುವ ಆಟಗಾರರೊಂದಿಗೆ ಅಭ್ಯಾಸ ಅವಧಿಯನ್ನು ಮಾಡಲೇಬೇಕಾಗಿದೆ.

ಭಾರತವನ್ನು ಟೀಕಿಸಿದ್ದ ಪಾಕ್​ ಕ್ರಿಕೆಟ್​ ನಿರ್ದೇಶಕನ ವಿರುದ್ಧ ಕ್ರಮ

ಭಾರತ ಮತ್ತು ಪಾಕಿಸ್ತಾನ ನಡುವಿನ (Ind vs Pak) ವಿಶ್ವಕಪ್ ಪಂದ್ಯದ ನಂತರ ಮಿಕಿ ಆರ್ಥರ್ ಮಾಡಿದ ಟೀಕೆಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗಂಭೀರವಾಗಿ ಪರಿಗಣಿಸಿದೆ. ಮೆಗಾ ಮುಖಾಮುಖಿಯ ಮುಕ್ತಾಯದ ನಂತರ ಪಾಕಿಸ್ತಾನ ತಂಡದ ನಿರ್ದೇಶಕ ಮಿಕಿ ಆರ್ಥರ್ ಈ ಆಟವು ದ್ವಿಪಕ್ಷೀಯ ಸರಣಿಯಂತಿತ್ತು. ಇದು ಐಸಿಸಿಯ ಟೂರ್ನಿಯಂತಿರಲಿಲ್ಲ ಎಂದು ಟೀಕೆ ಮಾಡಿದ್ದರು. ಈ ಮೂಲಕ ಐಸಿಸಿ ಹಾಗೂ ಆತಿಥೇಯ ಭಾರತಕ್ಕೆ ಅವಮಾನ ಮಾಡಲು ಯತ್ನಿಸಿದ್ದರು. ಕ್ರಿಕೆಟ್​ ನಿರ್ದೇಶಕರೊಬ್ಬರು ಈ ರೀತಿ ಮಾತನಾಡಿರುವುದು ಐಸಿಸಿಐ ನಿಯಮಗಳ ಉಲ್ಲಂಘನೆಯೇ ಎಂಬುದು ಈಗ ಪರಾಮರ್ಶೆಗೆ ಒಳಗಾಗಲಿದೆ. ಒಂದು ವೇಳೆ ಅವರು ಮಾತನಾಡಿದ್ದು ಐಸಿಸಿ ಘನತೆಗೆ ಕುತ್ತು ತಂದರೆ ಖಂಡಿತವಾಗಿಯೂ ಅವರು ಕಾನೂನು ಕ್ರಮವನ್ನು ಎದುರಿಸಲಿದ್ದಾರೆ.

ಅಕ್ಟೋಬರ್ 14 ರಂದು 1.3 ಲಕ್ಷ ಭಾರತೀಯರಿಗೆ ಆತಿಥ್ಯ ವಹಿಸಿದ್ದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಯಾವುದೇ ಪಾಕಿಸ್ತಾನಿ ಅಭಿಮಾನಿಗಳು ಇಲ್ಲದಿರುವುದು ಆರ್ಥರ್ ಅವರಿಗೆ ಈ ಹೇಳಿಕೆ ನೀಡಲು ಪ್ರೇರೇಪಿಸಿತ್ತು. ಮೆನ್ ಇನ್ ಗ್ರೀನ್ ಗೆ ಈ ನೆಲದಲ್ಲಿ ಯಾವುದೇ ಬೆಂಬಲವಿಲ್ಲ ಎಂದು ಅವರು ಹೇಳಿದ್ದಾರೆ. ಬೆರಳೆಣಿಕೆಯಷ್ಟು ಪಾಕಿಸ್ತಾನಿ ಪತ್ರಕರ್ತರು ಮಾತ್ರ ಐಸಿಸಿ ವಿಶ್ವಕಪ್​​​ಗೆ ತಮ್ಮ ವೀಸಾಗಳನ್ನು ಅನುಮೋದಿಸಿದ್ದರು. ಪ್ರೇಕ್ಷಕರಿಗೆ ಇಲ್ಲಿಗೆ ಬರಲು ಅವಕಾಶ ಸಿಕ್ಕಿರಲಿಲ್ಲ. ಇದನ್ನು ಆರ್ಥರ್ ಆಕ್ಷೇಪಿಸಿದ್ದರು.

” ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂದರೆ ನಾನು ಸುಳ್ಳು ಹೇಳುತ್ತೇನೆ” ಎಂದು ಆರ್ಥರ್ ಪಂದ್ಯದ ನಂತರ ಹೇಳಿದರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ಐಸಿಸಿ ಟೂರ್ನಿಯಂತೆ ಕಾಣಲಿಲ್ಲ. ಇದು ದ್ವಿಪಕ್ಷೀಯ ಸರಣಿಯಂತೆ ತೋರಿತು. ಇದು ಬಿಸಿಸಿಐ ಕಾರ್ಯಕ್ರಮದಂತೆ ಭಾಸವಾಯಿತು ಎಂದು ಮಿಕಿ ಆರ್ಥರ್ ಹೇಳಿದ್ದರು.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ ಪಾಕಿಸ್ತಾನ ವಿರುದ್ಧ ಭಾರತ ಸಮಗ್ರ ಗೆಲುವು ದಾಖಲಿಸಿದ ನಂತರ ಪಾಕಿಸ್ತಾನ ತಂಡದ ನಿರ್ದೇಶಕ ಮಿಕಿ ಆರ್ಥರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಅಭಿಮಾನಿ ಬಳಗದ ಏಕಪಕ್ಷೀಯ ಸ್ವರೂಪವನ್ನು ಪ್ರಶ್ನಿಸಿದ್ದರು ವಿಶ್ವದ ಅತಿದೊಡ್ಡ ಸ್ಟೇಡಿಯಂ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ನಡುವೆ ಪಂದ್ಯ ನಡೆಯಿತು. ‘ಮೆನ್ ಇನ್ ಬ್ಲೂ’ ಅನ್ನು ಬೆಂಬಲಿಸಲು ತವರಿನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದು ಅವರ ಕಣ್ಣು ಕುಕ್ಕಿತ್ತು.

Exit mobile version