Site icon Vistara News

FIFA World Cup | ಮೊರಾಕ್ಕೊ ಆಸೆ ಭಗ್ನ, ಸತತ ಎರಡನೇ ಬಾರಿ ಫೈನಲ್​ಗೇರಿದ ಫ್ರಾನ್ಸ್​ ಬಳಗ

ದೋಹಾ : ಮೊರಾಕ್ಕೊ ತಂಡದ ನಾಗಾಲೋಟಕ್ಕೆ ಬ್ರೇಕ್​ ಕೊಟ್ಟ ಫ್ರಾನ್ಸ್ ತಂಡ ಫಿಫಾ ವಿಶ್ವ ಕಪ್​ನ​ ಹಾಲಿ ಆವೃತ್ತಿಯಲ್ಲಿ ಫೈನಲ್​​ಗೇರಿದೆ. ಈ ಮೂಲಕ ಸತತ ಎರಡನೇ ಬಾರಿ ವಿಶ್ವ ಕಪ್​ನ ಫೈನಲ್​ ಹಂತಕ್ಕೇರಿದ ಸಾಧನೆ ಮಾಡಿತು.

ಬುಧವಾರ ಇಲ್ಲಿನ ಅಲ್​ ಬಯಾತ್ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಮೊರಾಕ್ಕೊ ತಂಡವನ್ನು 2-0 ಗೋಲ್​ಗಳಿಂದ ಮಣಿಸಿದ ಫ್ರಾನ್ಸ್​ ಬಳಗ ಪ್ರಶಸ್ತಿ ಸುತ್ತಿಗೇರಿತು. ಫ್ರಾನ್ಸ್ ಪಾಲಿಗೆ ಇದು ಆರನೇ ಬಾರಿ ಫೈನಲ್​ಗೇರಿದ ಸಾಧನೆಯಾಗಿದೆ.

ಫ್ರಾನ್ಸ್ ಪರ ಥಿಯೋ ಹೆಂಡ್ರಿಕ್ಸ್ (5ನೇ ನಿಮಿಷ) ಹಾಗೂ ರಂಡಾಲ್​ ಕೊಲೊ ಮುನಾಯಿ (79 ನೇ ನಿಮಿಷ) ಎರಡು ಗೋಲ್​ಗಳನ್ನು ಬಾರಿಸಿದರು. ಬಲಿಷ್ಠ ತಂಡಗಳಿಗೆ ಮಣ್ಣು ಮುಕ್ಕಿಸಿದ್ದ ಮೊರಾಕ್ಕೊ ತಂಡ ಸೆಮಿ ಫೈನಲ್​ ಹಣಾಹಣಿಯಲ್ಲಿ ಸೋಲು ಅನುಭವಿಸಿತು.

ಅದಾಗಲೇ ಫೈನಲ್​ ಪ್ರವೇಶಿಸಿರುವ ಅರ್ಜೆಂಟೀನಾ ತಂಡವನ್ನು ಫ್ರಾನ್ಸ್ ತಂಡ ಪ್ರಶಸ್ತಿ ಸುತ್ತಿನಲ್ಲಿ ಎದುರಿಸಲಿದೆ.

ಇದನ್ನೂ ಓದಿ | Fifa World Cup | ಭಾನುವಾರ ನಡೆಯಲಿರುವ ಫಿಫಾ ವಿಶ್ವ ಕಪ್​ ಫೈನಲ್​ ನನ್ನ ಅಂತಿಮ ಪಂದ್ಯ; ಮೆಸ್ಸಿ ಮಾತು

Exit mobile version