Site icon Vistara News

FIFA World Cup | ಕ್ವಾರ್ಟರ್‌ ಫೈನಲ್ಸ್‌ಗೆ ಪ್ರವೇಶ ಪಡೆದು ಇತಿಹಾಸ ಸೃಷ್ಟಿಸಿದ ಮೊರಾಕ್ಕೊ ತಂಡ

FiFA WORLD CUP

ದೋಹಾ : ಫಿಪಾದ ಶ್ರೇಯಾಂಕ ಪಟ್ಟಿಯಲ್ಲಿ ೨೨ನೇ ಸ್ಥಾನದಲ್ಲಿರುವ ಮೊರಾಕ್ಕೊ ತಂಡ ಹಾಲಿ ವಿಶ್ವ ಕಪ್‌ನ (FIFA World Cup) ಕ್ವಾರ್ಟರ್‌ಫೈನಲ್ಸ್ ಹಂತಕ್ಕೆ ಪ್ರವೇಶ ಪಡೆದಿದೆ. ಬಲಿಷ್ಠ ಸ್ಪೇನ್‌ ತಂಡವನ್ನು ಮಂಗಳವಾರ ನಡೆದ ನಾಕೌಟ್‌ ಹಂತದ ಹಣಾಹಣಿಯಲ್ಲಿ ಪೆನಾಲ್ಟಿ ಶೂಟೌಟ್‌ ೩-೦ ಗೋಲ್‌ಗಳಿಂದ ಸೋಲಿಸುವ ಮೂಲಕ ಎಂಟರ ಘಟ್ಟಕ್ಕೆ ಪ್ರವೇಶ ಪಡೆಯಿತು. ಫುಟ್ಬಾಲ್‌ ವಿಶ್ವ ಕಪ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೊರಾಕ್ಕೊ ತಂಡ ಕ್ವಾರ್ಟರ್‌ಫೈನಲ್ಸ್‌ಗೇರುವ ಮೂಲಕ ದಾಖಲೆ ಬರೆಯಿತು.

ಇಲ್ಲಿನ ಎಜುಜಕೇಷನ್ ಸಿಟಿ ಸ್ಟೇಡಿಯಮ್‌ನಲ್ಲಿ ನಡೆದ ಹಣಾಹಣಿಯ ಪೂರ್ಣ ಅವಧಿಯಲ್ಲಿ ಇತ್ತಂಡಗಳೂ ಗೋಲ್‌ ದಾಖಲಿಸಲಿಲ್ಲ. ಒಟ್ಟು ೧೨೩ ನಿಮಿಷಗಳ ಪಂದ್ಯವನ್ನು ಆಡಿಸಿದರೂ ಎರಡೂ ತಂಡಗಳಿಗೆ ಯಶಸ್ಸು ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪೆನಾಲ್ಟಿ ಮೊರೆ ಹೋಗಲಾಯಿತು. ಮೊರಾಕ್ಕೊ ತಂಡ ಮೊದಲ ಮೂರು ಪ್ರಯತ್ನಗಳನ್ನೂ ಗೋಲ್‌ಗಳಾಗಿ ಪ್ರಯತ್ನಿಸಿದರೆ ಸ್ಪೇನ್ ತಂಡಕ್ಕೆ ಒಂದೇ ಒಂದು ಗೋಲ್‌ ದಾಖಲಿಸಲು ಸಾಧ್ಯವಾಗಲಿಲ್ಲ.

ತಡರಾತ್ರಿ ನಡೆಯುವ ಪೋರ್ಚುಗಲ್‌ ಹಾಗೂ ಸ್ವಿಜರ್ಲೆಂಡ್‌ ತಂಡಗಳ ನಡುವಿನ ೧೬ರ ಸುತ್ತಿನ ಪಂದ್ಯದ ವಿಜೇತರು ಮೊರಾಕ್ಕೊ ತಂಡಕ್ಕೆ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಎದುರಾಗಲಿದೆ. ಇದೇ ವೇಳೆ ಸ್ಪೇನ್ ತಂಡ ಸತತವಾಗಿ ಎರಡು ವಿಶ್ವ ಕಪ್‌ನಲ್ಲಿ ೧೬ ಘಟ್ಟದಲ್ಲೇ ನಿರ್ಗಮನ ಕಾಣುವ ಮೂಲಕ ನಿರಾಸೆ ಎದುರಿಸಿತು.

ಇದನ್ನೂ ಓದಿ | MS Dhoni | ಫಿಫಾ ವಿಶ್ವ ಕಪ್‌ ಸ್ಟೇಡಿಯಮ್‌ನಲ್ಲಿ ಧೋನಿ ಅಭಿಮಾನಿಗಳ ಕಲರವ, ಜರ್ಸಿ ಹಿಡಿದು ಸಂಭ್ರಮ

Exit mobile version