ನವ ದಹೆಲಿ : ಲೇವರ್ ಕಪ್ ಟೆನಿಸ್ ಟೂರ್ನಿ ಶನಿವಾರ ಎಲ್ಲರ ಗಮನ ಸೆಳೆದಿತ್ತು. ವೃತ್ತಿ ಕ್ರೀಡೆಯ ಕೊನೇ ಪಂದ್ಯವನ್ನು ಆಡುತ್ತಿರುವ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಜೋಡಿ ಪುರುಷರ ಡಬಲ್ಸ್‌ನಲ್ಲಿ ಸೋಲು ಕಂಡರು. ಆ ಬಳಿಕ ವಿದಾಯದ ಮಾತುಗಳನ್ನಾಡಿದ ರೋಜರ್ ಫೆಡರರ್ ಅಂತಿಮವಾಗಿ ಕಣ್ಣೀರು ಹಾಕಿದರು. ಈ ವೇಳೆ ರಾಫೆಲ್ ನಡಾಲ್ ಅವರೂ ಕಣ್ಣೀರು ಸುರಿಸಿದರು. ಈ ಚಿತ್ರ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿ ಮಾಡಿತ್ತು. ಈ ಕುರಿತು ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿರುವ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು, ನಾನು ಇದುವರೆಗೆ ನೋಡಿದ ಅತ್ಯಂತ ಸುಂದರ ಕ್ರೀಡಾ ಪೋಟೊ ಇದು ಎಂಬುದಾಗಿ ಬರೆದುಕೊಂಡಿದ್ದಾರೆ.
ಪ್ರತಿಸ್ಪರ್ಧಿಗಳು ಕೂಡ ಪರಸ್ಪರ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ ಎಂದ ನಾವು ಎಂದಾದರೂ ಯೋಚನೆ ಮಾಡಿದ್ದೇವೆಯೇ? ಅದುವೇ ಕ್ರೀಡೆಯ ಸೌಂದರ್ಯ. ಇದು ನನ್ನ ಪಾಲಿಗೆ ಅತ್ಯಂತ ಸುಂದರವಾಗಿರುವ ಕ್ರೀಡಾ ಚಿತ್ರವಾಗಿದೆ. ನಿನ್ನ ಜತೆಗಾರ ನಿನಗಾಗಿ ನಿನಗಾಗಿ ಅಳುತ್ತಾನೆ ಎಂದಾದರೆ, ನೀನು ದೇವರು ಕೊಟ್ಟ ಪ್ರತಿಭೆಯನ್ನು ಬಳಸಿಕೊಂಡು ಸಾಧನೆ ಮಾಡಿದ್ದೀಯ ಎಂದರ್ಥ. ಈ ಇಬ್ಬರು ಶ್ರೇಷ್ಠ ಆಟಗಾರರು ಗೌರವಕ್ಕೆ ಪಾತ್ರರು,” ಎಂಬುದಾಗಿ ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ | ಅಂತಿಮ ಪಂದ್ಯದಲ್ಲಿ ಸೋಲು, ರೋಜರ್ ಫೆಡರರ್ ಟೆನಿಸ್‌ಗೆ ಕಣ್ಣೀರಿನ ವಿದಾಯ