Site icon Vistara News

Moto GP | 2023ರ ಸೆಪ್ಟೆಂಬರ್‌ 22ರಿಂದ24ರವರೆಗೆ ಭಾರತದಲ್ಲಿ ಮೊಟೊ ಜಿಪಿ ಬೈಕ್‌ ರೇಸ್‌

MotoGP

ನವ ದೆಹಲಿ: ಬೈಕ್‌ ಪ್ರೇಮಿಗಳು ಅತ್ಯಂತ ಹೆಚ್ಚಿರುವ ದೇಶಗಳಲ್ಲಿ ಭಾರತವೂ ಒಂದು. ಬೈಕ್‌ ರೇಸರ್‌ಗಳು ಹಾಗೂ ಅದಕ್ಕಿಂತ ಹೆಚ್ಚು ಅಭಿಮಾನಿಗಳು ಇಲ್ಲಿದ್ದಾರೆ. ಅದರೆ, ನಮ್ಮಲ್ಲಿ ಅಂತಾರಾಷ್ಟ್ರೀಯ ಮಟ್ಟದ ರೇಸ್‌ ನಡೆಯುತ್ತಿಲ್ಲ ಎಂಬುದು ಕೊರತೆಯಾಗಿತ್ತು. ಆದರೆ, ಆ ಹಿನ್ನಡೆಯನ್ನು ನೀಗಿಸಿದೆ ನೋಯ್ಡಾ ಮೂಲದ ಫೇರ್‌ಸ್ಟ್ರೀಟ್‌ ಸ್ಪೋರ್ಟ್ಸ್‌ ಸಂಸ್ಥೆ. ಮೊಟೊ ಜಿಪಿ ಆಯೋಜನೆಯ ವಾಣಿಜ್ಯ ಹಕ್ಕು ಹೊಂದಿರುವ ಡೊರ್ನಾ ಸ್ಪೋರ್ಟ್ಸ್ ಜತೆಗಿನ ಒಪ್ಪಂದ ಫಲಪ್ರದವಾಗಿದ್ದು, ಮುಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ನೋಯ್ಡಾದ ಬುದ್ಧ ಇಂಟರ್‌ನ್ಯಾಷನಲ್‌ ಸರ್ಕೀಟ್‌ನಲ್ಲಿ ರೇಸ್‌ ಆಯೋಜನೆಗೊಂಡಿದೆ.

ಡೊರ್ನಾ ಸ್ಪೋರ್ಟ್ಸ್‌ ಸಂಸ್ಥೆ ಶುಕ್ರವಾರ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ೨೦೨೩ರ ಸೆಪ್ಟೆಂಬರ್‌ ೨೨ರಿಂದ ೨೪ರವರೆಗೆ ರೇಸ್‌ನ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿದೆ. ಟ್ರ್ಯಾಕ್‌ನ ಗುಣಮಟ್ಟ ಪರಿಶೀಲನೆಯ ಅಂತಿಮಗೊಂಡ ಬಳಿಕ ಇದು ಅಧಿಕೃತಗೊಳ್ಳಲಿದೆ. ೨೦೨೩ ಮೋಟೊ ಜಿಪಿ ವಾರ್ಷಿಕ ರೇಸ್ ಪಟ್ಟಿಯಲ್ಲಿ ಭಾರತ ಜತೆ ಕಜಕಸ್ತಾನವನ್ನೂ ಸೇರಿಸಲಾಗಿದೆ.

“ಭಾರತದ ಬುದ್ಧ ಸರ್ಕೀಟ್‌ನಲ್ಲಿ ರೇಸ್‌ ನಡೆಯಲಿದೆ ಎಂಬುದನ್ನು ಘೋಷಿಸಲು ಸಂತೋಷವಾಗುತ್ತಿದೆ. ಭಾರತದಲ್ಲಿ ಮೋಟೊ ಜಿಪಿಗೆ ಬೃಹತ್‌ ಪ್ರಮಾಣದ ಅಭಿಮಾನಿಗಳು ಇರುವ ಕಾರಣ ರೋಚಕವಾಗಿ ಆಯೋಜನೆಗೊಳ್ಳಲಿದೆ,” ಎಂಬುದಾಗಿ ಅವರು ಹೇಳಿದರು.

ಇದನ್ನೂ ಓದಿ | ಎಫ್‌ಐಎಮ್‌ ಮಿನಿ ಜಿಪಿ ವರ್ಲ್ಡ್‌ ಸೀರಿಸ್‌ ಫೈನಲ್‌ಗೇರಿದ ಬೆಂಗಳೂರಿನ ಶ್ರೇಯಸ್‌ ಹರೀಶ್‌

Exit mobile version