ನವ ದೆಹಲಿ: ಗ್ರೇಟರ್ ನೊಯ್ಡಾದಲ್ಲಿರುವ ಬುದ್ಧ ಇಂಟರ್ನ್ಯಾಷನಲ್ ಸರ್ಕ್ಯೂಟ್ ಅಂತಾರರಾಷ್ಟ್ರೀಯ ರೇಸಿಂಗ್ ಕ್ಯಾಲೆಂಡರ್ಗೆ ಮರಳಿದೆ. ಆದರೆ ಇದೇ ಮೊದಲ ಬಾರಿಗೆ ಭಾರತಕ್ಕೆ ಕಾಲಿಟ್ಟ ಜನಪ್ರಿಯ ಮೋಟೋ ರೇಸ್ ಸಂಸ್ಥೆಯು ದೊಡ್ಡ ಎಡವಟ್ಟು ಮಾಡಿದೆ. ಭಾರತ್ ಜಿಪಿ ಎಂದು ಮರುನಾಮಕರಣ ಮಾಡಲಾದ ಇಂಡಿಯನ್ ಆಯಿಲ್ ಗ್ರ್ಯಾನ್ ಪ್ರಿ ಆಫ್ ಇಂಡಿಯಾ ಶುಕ್ರವಾರ ವಿವಾದದ ಕೇಂದ್ರಬಿಂದುವಾಗಿದೆ. ಮೋಟೋಜಿಪಿಯ ಅಭಿಮಾನಿಗಳು ಕೋಪಗೊಂಡಿದ್ದಾರೆ. ಭಾರತದ ವಿಕೃತ ನಕ್ಷೆಯನ್ನು ನೋಡಿ ಅವರು ಆಘಾತಕ್ಕೊಳಗಾಗಿದ್ದಾರೆ.
ಈ ತಪ್ಪು ಮಾಡಿದ್ದು ಮೊಟೊ ಜಿಪಿ ಆಯೋಜಕರು. ಶಿರವೇ ಇಲ್ಲದ ಭಾರತದ ಭೂಪಟವನ್ನು ಪ್ರಕಟಿಸಿದೆ. ಇದು ವಿವಾದಕ್ಕೆ ಒಳಗಾಗುತ್ತಿದ್ದಂತೆ ಮೋಟೋಜಿಪಿ ಈ ‘ತಪ್ಪನ್ನು’ ತರಾತುರಿಯಲ್ಲಿ ಸರಿಪಡಿಸಿದೆ. ತನ್ನ ಎಲ್ಲಾ ಭಾರತೀಯ ವೀಕ್ಷಕರಲ್ಲಿ ಕ್ಷಮೆಯಾಚಿಸಿದೆ.
ಭಾರತದ ಕಿರೀಟ ಎಲ್ಲಿದೆ?
ಜಮ್ಮು, ಕಾಶ್ಮೀರ ಮತ್ತು ಲಡಾಖ್ ಪ್ರದೇಶದ ಸುತ್ತ ಸಾಕಷ್ಟು ವಿವಾದಗಳಿವೆ. ಆದಾಗ್ಯೂ, ಮೋಟೋಜಿಪಿ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ನಕ್ಷೆಯನ್ನು ಬಳಸುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಭಾರತ್ ಜಿಪಿಗಾಗಿ ಬುದ್ಧ ಇಂಟರ್ನ್ಯಾಷನಲ್ ಸರ್ಕೀಟ್ನಲ್ಲಿ ರೇಸಿಂಗ್ ನಡೆಸುವ ಸಂದರ್ಭದಲ್ಲಿ ಇಂಥ ಭೂಪಟ ಹಾಕಿ ತಪ್ಪೆಸಗಿದೆ.
ಇದನ್ನೂ ಓದಿ : Asian Games 2023 : ಏಷ್ಯನ್ ಗೇಮ್ಸ್ಗೆ ಅರುಣಾಚಲ ಪ್ರದೇಶದ ಅಥ್ಲಿಟ್ಗೆ ಚೀನಾ ಪ್ರವೇಶ ನಿರಾಕರಣೆ, ಭಾರತದ ಖಂಡನೆ; ಏನಿದು ಹೊಸ ವಿವಾದ?
ಭಾರತೀಯ ಮೋಟೋಜಿಪಿ ಅಭಿಮಾನಿಗಳಿಂದ ಸಾಕಷ್ಟು ಕೋಲಾಹಲ ಸೃಷ್ಟಿಯಾದ ನಂತರ, ಅವರು ತ್ವರಿತವಾಗಿ ದೋಷವನ್ನು ಸರಿಪಡಿಸಿದರು. ಬಳಿಕ ಸಾರ್ವಜನಿಕ ಕ್ಷಮೆಯಾಚಿಸಿದರು. ಭಾರತ್ ಜಿಪಿಯ ನಂತರದ ಪ್ರಸಾರದ ಸಮಯದಲ್ಲಿ, ಅವರು ಭಾರತದ ಸರಿಯಾದ ನಕ್ಷೆಯನ್ನು ತೋರಿಸಿದರು.
ಮೋಟೋಜಿಪಿ ಪ್ರಸಾರದ ಭಾಗವಾಗಿ ಈ ಹಿಂದೆ ತೋರಿಸಲಾದ ನಕ್ಷೆ ತಪ್ಪಾಗಿದೆ. ನಾವು ಭಾರತದಲ್ಲಿನ ನಮ್ಮ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಲು ಬಯಸುತ್ತೇವೆ. ನಮ್ಮ ಆತಿಥೇಯ ದೇಶಕ್ಕೆ ಬೆಂಬಲ ಮತ್ತು ಮೆಚ್ಚುಗೆಯನ್ನು ಹೊರತುಪಡಿಸಿ ಬೇರೆ ಯಾವುದೇ ಹೇಳಿಕೆಯನ್ನು ನೀಡುವುದು ನಮ್ಮ ಉದ್ದೇಶವಲ್ಲ. ನಿಮ್ಮೊಂದಿಗೆ ಇಂಡಿಯನ್ ಆಯಿಲ್ ಗ್ರ್ಯಾನ್ ಪ್ರಿ ಆಫ್ ಇಂಡಿಯಾವನ್ನು ಆನಂದಿಸಲು ನಾವು ಉತ್ಸುಕರಾಗಿದ್ದೇವೆ .ಬುದ್ಧ ಇಂಟರ್ನ್ಯಾಷನಲ್ ಸರ್ಕೀಟ್ನಲ್ಲಿ ಪ್ರೀತಿಯನ್ನು ತೋರಿಸುತ್ತೇವೆ ಎಂದು ಮೋಟೋ ಜಿಪಿ ಬರೆದುಕೊಂಡಿದೆ.
— MotoGP™🏁 (@MotoGP) September 22, 2023
ಒಂದು ಸರಳ ತಪ್ಪು?
ಬಹಳಷ್ಟು ರೇಸಿಂಗ್ ಉತ್ಸಾಹಿಗಳು ಭಾರತ್ ಜಿಪಿ ಮತ್ತು ಫಾರ್ಮುಲಾ 1ರಲ್ಲಿ ಮೋಟೋಜಿಪಿ ಬಳಸಿದ ನಕ್ಷೆಗಳಲ್ಲಿ ಹೋಲಿಕೆಯನ್ನು ಗಮನಿಸಿದ್ದಾರೆ. ತಮ್ಮ ಗ್ರಿಲ್ ದಿ ಗ್ರಿಡ್ ವೀಡಿಯೊಗಳಲ್ಲಿ, ಫಾರ್ಮುಲಾ 1 ಭಾರತದ ತಪ್ಪು ನಕ್ಷೆಯನ್ನು ಸಹ ಬಳಸಿದೆ. ಆ ನಕ್ಷೆಯಲ್ಲಿ, ಸಂಪೂರ್ಣ ಸಂಘರ್ಷದ ಭಾಗವನ್ನು ಚೀನಾದ ಭಾಗವೆಂದು ತೋರಿಸಲಾಗಿದೆ. ಆದಾಗ್ಯೂ, ಅವರು ಯಾವುದೇ ಆಕ್ರೋಶದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ : Team India : ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿ 3 ಮಾದರಿಯ ಕ್ರಿಕೆಟ್ನಲ್ಲಿ ವಿಶೇಷ ದಾಖಲೆ ಮಾಡಿದ ಟೀಮ್ ಇಂಡಿಯಾ