Site icon Vistara News

ಜಗಳಗಂಟ ಗಂಭೀರ್​ ಕರಾಳ ಮುಖ ತೆರೆದಿಟ್ಟ ಶ್ರೀಶಾಂತ್‌; ವಿಡಿಯೊ ವೈರಲ್​ 

sreesanth and gambhir

ಸೂರತ್: ಲೆಜೆಂಡ್ಸ್ ಲೀಗ್ ಕ್ರಿಕೆಟ್‌ ಪಂದ್ಯದಲ್ಲಿ ಮೈದಾನದಲ್ಲೇ ಮಾಜಿ ಟೀಮ್​ ಇಂಡಿಯಾದ ಆಟಗಾರರಾದ ಗೌತಮ್​ ಗಂಭೀರ್(Gautam Gambhir)​ ಮತ್ತು ಎಸ್​.ಶ್ರೀಶಾಂತ್(S. Sreesanth)​ ಅವರು ಕಿತ್ತಾಟ ನಡೆಸಿದ ವಿಡಿಯೊ ಈಗಾಗಲೇ ಎಲ್ಲಡೆ ಭಾರಿ ಸುದ್ದು ಮಾಡುತ್ತಿದೆ. ಇದೀಗ ಈ ಘಟನೆ ನಡೆಯಲು ನಿಜವಾದ ಕಾರಣ ಏನೆಂಬುದನ್ನು ಶ್ರೀಶಾಂತ್ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಲೈವ್​ ವಿಡಿಯೊ ಮೂಲಕ ರಿವಿಲ್​ ಮಾಡಿದ್ದಾರೆ.

ಸೂರತ್‌ನಲ್ಲಿ ಬುಧವಾರ ರಾತ್ರಿ ನಡೆದ ಇಂಡಿಯಾ ಗುಜರಾತ್ ಜೈಂಟ್ಸ್ ಮತ್ತು ಇಂಡಿಯಾ ಕ್ಯಾಪಿಟಲ್ಸ್ ನಡುವಿನ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ (LLC 2023- ಎಲ್‌ಎಲ್‌ಸಿ 2023) ಎಲಿಮಿನೇಟರ್ ಪಂದ್ಯದಲ್ಲಿ ಶ್ರೀಶಾಂತ್ ಮತ್ತು ಗೌತಮ್‌ ಗಂಭೀರ್ ನಡುವೆ ಜಗಳ ನಡೆದಿತ್ತು. ಇವರಿಬ್ಬರ ಈ ಜಗಳದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಭಾರಿ ವೈರಲ್​ ಆಗುವುದರ ಜತೆಗೆ ಪರ ಮತ್ತು ವಿರೋಧ ವ್ಯಕ್ತವಾಗಿತ್ತು.

ಎರಡನೇ ಇನ್ನಿಂಗ್ಸ್‌ನಲ್ಲಿ ಕ್ಯಾಪಿಟಲ್ಸ್ ನಾಯಕ ಗಂಭೀರ್, ಶ್ರೀಶಾಂತ್ ಅವರ ಬಾಲ್‌ಗಳಿಗೆ ಸಿಕ್ಸರ್‌ ಹಾಗೂ ಬೌಂಡರಿಗಳ ಮೂಲಕ ಉತ್ತರಿಸಿದರು. ಇದರಿಂದ ಹತಾಶೆಗೀಡಾದ ಶ್ರೀಶಾಂತ್ ಗಂಭೀರ್‌ ಕಡೆಗೆ ತೀಕ್ಷ್ಣವಾಗಿ ನೋಡುತ್ತಾ ಸ್ಲೆಡ್ಜಿಂಗ್‌ ಮಾಡಿದ್ದಾರೆ. ಪ್ರತಿಯಾಗಿ ಗಂಭೀರ್ ಕೂಡ ಏನನ್ನೋ ಗೊಣಗುತ್ತಾ ಶ್ರೀಶಾಂತ್‌ ಅವರನ್ನು ಗುರಾಯಿಸಿದರು. ವಿರಾಮದ ಸಮಯದಲ್ಲಿ ಕೂಡ ಅವರಿಬ್ಬರೂ ಬೈಗುಳ ವಿನಿಮಯ ಮಾಡಿಕೊಂಡಿದ್ದಾರೆ.

ಜಗಳಕ್ಕೆ ಕಾರಣವೇನು?

ಆರಂಭದಲ್ಲಿ ಇದು ಶ್ರೀಶಾಂತ್​ ಮಾಡಿದ ಕಿತಾಪತಿ ಎನ್ನಲಾಗಿತ್ತು. ಇದೇ ಕಾರಣಕ್ಕೆ ಗಂಭೀರ್​ ಅವರು ಕೆರಳಿದ್ದು ಎಂದು ಹೇಳಲಾಗಿತ್ತು. ಆದರೆ ಇದೀಗ ನೈಜ ವಿಚಾರವನ್ನು ಶ್ರೀಶಾಂತ್​ ಬಹಿರಂಗಪಡಿಸಿದ್ದಾರೆ. ಲೈವ್​ ವಿಡಿಯೊ ಮೂಲಕ ಮಾತನಾಡಿದ ಶ್ರೀಶಾಂತ್, ನಾನು ಗಂಭೀರ್​ ಅವರಿಗೆ ಒಂದು ಸಣ್ಣ ಕಟ್ಟ ಪದ ಬಳಸಿಯೂ ಬೈದಿಲ್ಲ. ಈ ವಿಚಾರ ಫೀಲ್ಡ್​ ಅಂಪೈರ್​ಗೂ ತಿಳಿದಿದೆ. ಅವರೇ ನನ್ನನ್ನು ನೋಡಿ ನೀನೊಬ್ಬ ಫಿಕ್ಸರ್​ ಎಂದು ಪದೇಪದೆ ಹೇಳುವ ಮೂಲಕ ನನ್ನನ್ನು ಹೀಯಾಳಿಸಿದರು. ಆಗ ನಾನು ಅವರ ಬಳಿ ಪ್ರಶ್ನೆ ಮಾಡಿ ಏನು ಇನ್ನೊಮ್ಮೆ ಈ ಮಾತನ್ನು ಹೇಳಿ ಎಂದು ಹೇಳುತ್ತ ಅವರ ಬಳಿಗೆ ಬಂದೆ ಈ ವೇಳೆ ಸಹ ಆಟಗಾರರ ತಡೆದರು. ನಾನು ನಿಜವಾಗಿಯೂ ಯಾವುದೇ ಕಿರಿಕ್​ ಮಾಡಿಲ್ಲ” ಎಂದು ಶ್ರೀಶಾಂತ್​ ಈ ವಿಡಿಯೊದಲ್ಲಿ ಹೇಳಿದ್ದಾರೆ.

“ಗಂಭೀರ್​ ನನ್ನನ್ನು ಫೀಕ್ಸರ್​ ಎಂದು ಕರೆಯುವ ಜತೆಗೆ ಇನ್ನೂ ಕೆಲ ಅವಾಚ್ಯ ಪದಗಳಿಂದ ನಿಂದಿಸಿದರು. ನಾನ್ನ ಮೇಲಿದ್ದ ಫಿಕ್ಸಿಂಗ್ ಆರೋಪ ಸುಳ್ಳು ಎನ್ನುವುದು ಈಗಾಗಕಲೇ ಸಾಭೀತಾಗಿದೆ. ನಾನು ನನ್ನ ಕುಟುಂಬದ ಜತೆ ಮಾನ್ಯವಾಗಿ ಜೀವಿಸುವ ವ್ಯಕ್ತಿಯಾಗಿದ್ದೇನೆ” ಎಂದು ಶ್ರೀಶಾಂತ್​ ಹೇಳಿದ್ದಾರೆ.

ಇದನ್ನೂ ಓದಿ Gautam Gambhir: ʼಯಾಕೋ ಗುರಾಯಿಸ್ತೀಯಾ?ʼ ಕ್ರೀಡಾಂಗಣದಲ್ಲಿ ಶ್ರೀಶಾಂತ್-‌ ಗಂಭೀರ್ ಕಿರಿಕ್‌

ಭಾರತ ತಂಡದ ಮಾಜಿ ವೇಗಿ ಶ್ರೀಶಾಂತ್‌, ಐಪಿಎಲ್ ಪಂದ್ಯದ ಸ್ಪಾಟ್ ಫಿಕ್ಸಿಂಗ್ ಮಾಡಿದ ಆರೋಪಕ್ಕೆ ಗುರಿಯಾದ ಬಳಿಕ ಅಂತಾರಾಷ್ಟ್ರೀಯ, ರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿದ್ದರು. ಕೆಲವು ವರ್ಷಗಳ ಹಿಂದೆ ನ್ಯಾಯಾಲಯ ಈ ನಿಷೇಧವನ್ನು ತೆಗೆದುಹಾಕಿದ್ದು, ಶ್ರೀಶಾಂತ್ ನಂತರ ವಿವಿಧ ಲೀಗ್‌ಗಳನ್ನು ಆಡುತ್ತಿದ್ದಾರೆ. ಪಂದ್ಯದ ವೇಳೆ ಗಂಭೀರ್ ತನಗೆ ನಿಖರವಾಗಿ ಏನು ಹೇಳಿದರು ಎಂಬುದನ್ನು ಬಹಿರಂಗಪಡಿಸುವುದಾಗಿ ಶ್ರೀಶಾಂತ್‌ ಹೇಳಿದ್ದು, ಈ ಮಾತುಗಳು ತನಗೆ ಮತ್ತು ತನ್ನ ಕುಟುಂಬಕ್ಕೆ ನೋವುಂಟು ಮಾಡಿದೆ ಎಂದಿದ್ದಾರೆ.

ಗಂಭೀರ್​ ಅವರು ಸಹ ಆಟಗಾರರೊಂದಿಗೆ ಈ ರೀತಿ ಕಿರಿಕ್​ ಮಾಡುತ್ತಿರುವುದು ಇದೇ ಮೊದಲೇನಲ್ಲ. ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ ಜತೆ ಹಲವು ಬಾರಿ ಮೈದಾನದಲ್ಲಿ ಇದೇ ರೀತಿಯ ಕಿರಿಕ್​ ಮಾಡಿದ್ದಾರೆ. ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ಗಂಭೀರ್​ ಅವರು ನವೀನ್​ ಉಲ್​ ಹಕ್​ ವಿಚಾರವಾಗಿ ಕೊಹ್ಲಿ ಜತೆ ಅನಗತ್ಯವಾಗಿ ಜಗಳವಾಡಿದ್ದರು.

Exit mobile version