Site icon Vistara News

MS Dhoni: ಧೋನಿ ರಾಜಕೀಯ ಪ್ರವೇಶಕ್ಕೆ ಸಲಹೆ ನೀಡಿದ ಆನಂದ್‌ ಮಹೀಂದ್ರಾ

CSK team tribute to MS Dhoni

ಮುಂಬಯಿ: ಭಾರತ ಕ್ರಿಕೆಟ್​ ಕಂಡ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರು ರಾಜಕೀಯಕ್ಕೆ ಎಂಟ್ರಿ ಕೊಡಬೇಕೆಂದು ಮಹೀಂದ್ರಾ ಗ್ರೂಪ್‌ ಚೇರ್ಮನ್‌ ಆನಂದ್‌ ಮಹೀಂದ್ರಾ ಅಭಿಪ್ರಾಯಪಟ್ಟಿದ್ದಾರೆ. ಧೋನಿ ಅವರು ವಿಶ್ವ ಕ್ರಿಕೆಟ್​​ ಕಂಡ ಅತ್ಯಂತ ಚಾಣಾಕ್ಷ ನಾಯಕ. ನಾಯಕತ್ವದ ವಿಚಾರದಲ್ಲಿ ಧೋನಿಗೆ ಧೋನಿಯೇ ಸಾಟಿ ಇಂತಹ ನಾಯಕರು ರಾಜಕೀಯದಲ್ಲಿ ಇದ್ದರೆ ಉತ್ತಮ ಎಂದು ಆನಂದ್‌ ಮಹೀಂದ್ರಾ ಹೇಳಿದ್ದಾರೆ.

ಟ್ವಿಟರ್‌ನಲ್ಲಿ ಧೋನಿ ಕುರಿತು ಅಭಿಪ್ರಾಯವೊಂದನ್ನು ಹಂಚಿಕೊಂಡಿರುವ ಆನಂದ್‌ ಮಹೀಂದ್ರಾ ಅವರು, ಧೋನಿ ಅತ್ಯಂತ ಯಶಸ್ವಿ ನಾಯಕ ಅವರು ರಾಜಕೀಯ ಪ್ರವೇಶಿಸುವ ಕಡೆಗೆ ಆಲೋಚಿಸಬೇಕು ಎಂದು ಪೋಸ್ಟ್​ ಮಾಡಿದ್ದಾರೆ.

ಐಪಿಎಲ್​ನಲ್ಲಿ ಧೋನಿ ಮುಂದುವರಿಯುವ ಕುರಿತು ಸಂತಸ ವ್ಯಕ್ತಪಡಿಸಿರುವ ಅವರು, ನಿವೃತ್ತಿಯನ್ನು ಮುಂದುಡಿದ ವಿಯಯ ಕೇಳಿ ಸಂತಸ ಪಟ್ಟ ಹಲವರಲ್ಲಿ ನಾನು ಕೂಡ ಒಬ್ಬನಾಗಿದ್ದೇನೆ. ಆದರೆ ಧೋನಿ ಅವರು ಶೀಘ್ರವೇ ರಾಜಕೀಯ ಜೀವನಕ್ಕೆ ಕಾಲಿಡಬೇಕು ಎಂದು ಆಶಿಸುತ್ತೇನೆ. ಜೇ ಪಾಂಡಾ ಅವರ ಅಧ್ಯಕ್ಷತೆಯ ಎನ್‌ಸಿಸಿ ಪರಿಶೀಲನಾ ಸಮಿತಿಯಲ್ಲಿ ಧೋನಿ ಅವರೊಂದಿಗೆ ನಾನು ಕೆಲಸ ಮಾಡಿದ್ದೇನೆ. ಧೋನಿ ಅವರ ದೂರದೃಷ್ಟಿ ಚುರುಕುತನ ರಾಜಕೀಯ ಕ್ಷೇತ್ರಕ್ಕೆ ಹೇಳಿ ಮಾಡಿಸಿದಂತಿದೆ ಎಂದು ಹೇಳಿದರು.

ಇದನ್ನೂ ಓದಿ IPL 2023 : ಐಪಿಎಲ್ ಟ್ರೋಫಿಗೆ ತಿರುಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಿಎಸ್​ಕೆ

ಧೋನಿ ಒಬ್ಬ ಸ್ವಾಭಾವಿಕ ನಾಯಕ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ನಾಯಕತ್ವ ಎಂಬುದು ಅವರಲ್ಲಿ ನೈಸರ್ಗಿಕವಾಗಿ ಬಂದಿದೆ. ಅವರು ಸ್ಪಷ್ಟ ಭವಿಷ್ಯದ ನಾಯಕ ಎಂದು ಆನಂದ್​ ಮಹೀಂದ್ರಾ ಅವರು ಧೋನಿಗೆ ರಾಜಕೀಯ ಪ್ರವೇಶಿಸಲು ಸಲಹೆ ಕೊಟ್ಟಿದ್ದಾರೆ. 16ನೇ ಆವೃತ್ತಿಯ ಐಪಿಎಲ್​ನಲ್ಲಿ ಧೋನಿ ಸಾರಥ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಿತು.

Exit mobile version