Site icon Vistara News

MS Dhoni : ಗಿಲ್ ಸ್ಟಂಪ್​ ಮಾಡುವುದರೊಂದಿಗೆ ಹೊಸ ದಾಖಲೆ ಸೃಷ್ಟಿಸಿದ ಮಹೇಂದ್ರ ಸಿಂಗ್ ಧೋನಿ

MS Dhoni New Record

#image_title

ಅಹಮದಾಬಾದ್​: ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಐಪಿಎಲ್​ 16ನೇ ಆವೃತ್ತಿಯ ಫೈನಲ್​ ಪಂದ್ಯದಲ್ಲಿ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಅಂತೆಯೇ ಅವರು ಟಿ20 ಪಂದ್ಯದಲ್ಲಿ 300 ಬ್ಯಾಟರ್​ಗಳನ್ನು ಔಟ್​ ಮಾಡಿದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ರವೀಂದ್ರ ಜಡೇಜಾ ಅವರ ಬೌಲಿಂಗ್​​ನಲ್ಲಿ ಶುಭಮನ್ ಗಿಲ್ ಅವರನ್ನು ಸ್ಟಂಪ್ ಮಾಡುವ ಮೂಲಕ ಧೋನಿ ಈ ಸಾಧನೆ ಮಾಡಿದ್ದಾರೆ.

ಧೋನಿ 296 ಬ್ಯಾಟರ್​​ಗಳನ್ನು ಔಟ್​ ಮಾಡಿದ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ಅದೇ ರೀತಿ ಅವರು ವಿಕೆಟ್​ಕೀಪರ್​ ಅಲ್ಲದೆಯೂ ಐದು ಕ್ಯಾಚ್​ಗಳನ್ನು ಪಡೆದಿದ್ದಾರೆ. ಐಪಿಎಲ್​ನಲ್ಲಿ ಮಹೇಂದ್ರ ಸಿಂಗ್​ ಧೋನಿ 243 ಇನಿಂಗ್ಸ್​ಗಳಲ್ಲಿ 180 ಬ್ಯಾಟರ್​​ಗಳನ್ನು ಔಟ್​ ಮಾಡಿದ್ದಾರೆ. ಅದರಲ್ಲಿ 138 ಕ್ಯಾಚ್​ ಹಾಗೂ 42 ಸ್ಟಂಪ್​ ಹೊಂದಿದ್ದಾರೆ.

250 ಪಂದ್ಯಗಳನ್ನು ಆಡಿದ ಆಟಗಾರರು

ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) 2023 ರ ಫೈನಲ್ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಮೂಲಕ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ ವಿಶೇಷ ದಾಖಲೆಯೊಂದನ್ನು ಬರೆದರು. ಕ್ಯಾಪ್ಟನ್​ ಕೂಲ್​ ಖ್ಯಾತಿಯ ಧೋನಿ ಐಪಿಎಲ್​ನಲ್ಲಿ 250 ಪಂದ್ಯಗಳನ್ನು ಆಡಿದ ಆಟಗಾರ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡರು. ಈ ಪಟ್ಟಿಯಲ್ಲಿ ಅವರು ಅವರೇ ಅಗ್ರಸ್ಥಾನಿಯಾಗಿದ್ದಾರೆ.

2010, 2011, 2018 ಮತ್ತು 2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡಕ್ಕೆ ತಮ್ಮ ನಾಯಕತ್ವದಲ್ಲಿ ನಾಲ್ಕು ಪ್ರಶಸ್ತಿಗಳನ್ನು ತಂದುಕೊಟ್ಟಿದ್ದರು ಧೋನಿ. ಈ ಮೂಲಕ ಮುಂಬಯಿ ಇಂಡಿಯನ್ಸ್ ತಂಡ ನಾಯಕ ರೋಹಿತ್​ ಶರ್ಮಾ ಬಳಿಕ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ. ರೋಹಿತ್​ ಮುಂಬಯಿ ತಂಡಕ್ಕೆ ಐದು ಟ್ರೋಫಿಗಳನ್ನು ತಂದುಕೊಟ್ಟಿದ್ದಾರೆ. 2013ರ ಸ್ಪಾಟ್ ಫಿಕ್ಸಿಂಗ್ ಹಗರಣದ ಹಿನ್ನೆಲೆಯಲ್ಲಿ ಚೆನ್ನೈ ತಂಡವನ್ನು ಎರಡು ವರ್ಷಗಳ ಕಾಲ ನಿಷೇಧಿಸಿದಾಗ 2016 ಮತ್ತು 2017 ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಆಡಿದ್ದರು ಮಹೇಂದ್ರ ಸಿಂಗ್​ ಧೋನಿ. ತಂಡಕ್ಕೆ ಆಸ್ಟ್ರೇಲಿಯಾದ ಸ್ಟೀವ್​ ಸ್ಮಿತ್​ ನಾಯಕರಾಗಿದ್ದರು.

ಇದನ್ನೂ ಓದಿ : IPL 2023 : ಸಿಎಸ್​ಕೆ ವಿರುದ್ಧ 214 ರನ್ ಬಾರಿಸಿ ಐಪಿಎಲ್​ನಲ್ಲಿ ನೂತನ ದಾಖಲೆ ಬರೆದ ಗುಜರಾತ್​ ಟೈಟನ್ಸ್​

ಮಹೇಂದ್ರ ಸಿಂಗ್​ ಧೋನಿ ಐಪಿಎಲ್ ಇತಿಹಾಸದಲ್ಲಿ ಧೋನಿ 226 ಪಂದ್ಯಗಳನ್ನು ಮುನ್ನಡೆಸಿದ್ದಾರೆ. ಅವುಗಳಲ್ಲಿ 132 ಪಂದ್ಯಗಳನ್ನು ಗೆದ್ದಿದ್ದು, 91 ಪಂದ್ಯಗಳಲ್ಲಿ ಸೋತಿದ್ದಾರೆ. 100ಕ್ಕೂ ಹೆಚ್ಚು ಪಂದ್ಯಗಳಲ್ಲಿ ತಂಡವೊಂದನ್ನು ಮುನ್ನಡೆಸಿದ ನಾಯಕರಲ್ಲಿ ಅವರ ಗೆಲುವಿನ ಶೇಕಡಾವಾರು ಪ್ರಮಾಣ ಐಪಿಎಲ್​ ಇತಿಹಾಸದಲ್ಲಿ ಅತ್ಯುತ್ತಮವಾಗಿದೆ.

ಧೋನಿ 249 ಐಪಿಎಲ್ ಪಂದ್ಯಗಳಲ್ಲಿ 39.09 ಸರಾಸರಿಯಲ್ಲಿ 5082 ರನ್ ಗಳಿಸಿದ್ದಾರೆ, 135.96 ಸ್ಟ್ರೈಕ್ ರೇಟ್ ಹೊಂದಿದ್ದಾರೆ. 2018ರ ಋತುವಿನಲ್ಲಿ ಅವರು 16 ಪಂದ್ಯಗಳಲ್ಲಿ 75.83 ಸರಾಸರಿಯಲ್ಲಿ 455 ರನ್ ಗಳಿಸಿದ್ದಾರೆ. ಅವರು ಮೂರು ಅರ್ಧ ಶತಕಗಳೊಂದಿಗೆ 150.66 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

Exit mobile version