Site icon Vistara News

MS Dhoni Birthday: ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಪತ್ನಿ; ವಿಡಿಯೊ ವೈರಲ್​

MS Dhoni Birthday

MS Dhoni Birthday: MS Dhoni cuts his 43rd birthday cake, wife Sakshi touches his feet; video goes viral

ಮುಂಬಯಿ: ಇಂದು(ಜುಲೈ 7) 43ನೇ ವಸಂತಕ್ಕೆ ಕಾಲಿಟ್ಟ ಟೀಮ್​ ಇಂಡಿಯಾದ ಮಾಜಿ ಆಟಗಾರ ಮಹೇಂದ್ರ ಸಿಂಗ್​ ಧೋನಿ(MS Dhoni Birthday) ಅವರು ತಮ್ಮ ಹುಟ್ಟುಹಬ್ಬವನ್ನು ಪತ್ನಿ ಜತೆ ಕೇಕ್​ ಕತ್ತರಿಸಿ ಆಚರಿಸಿದ್ದಾರೆ. ಈ ವೇಳೆ ಪತ್ನಿ ಸಾಕ್ಷಿ ಸಿಂಗ್(​ ಧೋನಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ವಿಡಿಯೊ ಇದೀಗ ವೈರಲ್​ ಆಗಿದೆ. ಈ ವಿಡಿಯೊವನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿರುವ ಸಾಕ್ಷಿ ಸಿಂಗ್(Sakshi Singh)​, ಹ್ಯಾಪಿ ಬರ್ತ್‌ಡೇ ಟೂ ಯು ಮಾಹಿ ಎಂದು ಬರೆದಿದ್ದಾರೆ.

ಧೋನಿ ಅವರು ಕೇಕ್​ ಕತ್ತರಿಸಿದ ಬಳಿಕ ಪತ್ನಿ ಸಾಕ್ಷಿಗೆ ತಿನ್ನಿಸಿದರು. ಸಾಕ್ಷಿ ಕೂಡ ಒಂದು ತುಂಡು ಕೇಕ್​ ಧೋನಿಗೆ ತಿನ್ನಿಸಿ, ಮುಖಕ್ಕೆ ಹಚ್ಚಿ ಬಳಿಕ ಪಾದ ಮುಟ್ಟಿ ಆಶೀರ್ವಾದ ಪಡೆದರು. ಧೋನಿ ಕೇಕ್​ ಕತ್ತರಿಸುವ ವೇಳೆ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಗಿದ್ದರು.

ಜುಲೈ 4 ರಂದು ಧೋನಿ ಮತ್ತು ಸಾಕ್ಷಿ ತಮ್ಮ 15ನೇ ವರ್ಷದ ವಿವಾಹ ವಾರ್ಷಿಕೋತ್ಸವ(ms dhoni wedding anniversary) ಆಚರಿಸಿದ್ದರು. ಧೋನಿ ಕೇಕ್​ ಕತ್ತರಿಸಿ ಪತ್ನಿಗೆ ತಿನ್ನಿಸುವ ಮೂಲಕ ತಮ್ಮ 15ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಸಂಭ್ರಮಿಸಿದ್ದರು. 2010ರಲ್ಲಿ ಧೋನಿ ಅವರು ಸಾಕ್ಷಿ ಅವರನ್ನು ಡೆಹರಾಡೂನ್​ನಲ್ಲಿ ​ವಿವಾಹವಾಗಿದ್ದರು.  ಈ ಜೋಡಿಗೆ ಝಿವಾ ಎಂಬ ಮುದ್ದಾಗ ಮಗಳಿದ್ದಾಳೆ.

ಧೋನಿ ಆಗಸ್ಟ್​ 15 2020ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದರ. ಸದ್ಯ ಐಪಿಎಲ್​ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಹಿಂದೊಮ್ಮೆ ಧೋನಿ ಅವರು ನನ್ನ ಪತ್ನಿಗೆ ಟ್ರಾವೆಲ್​ ಎಂದರೆ ಬಲು ಇಷ್ಟ. ಕ್ರಿಕೆಟ್​ ನಿವೃತ್ತಿ ಬಳಿಕ ನಾನು ಖಂಡಿತಾ ಹಲವು ದೇಶಕ್ಕೆ ಪ್ರವಾಸ ಮಾಡುವ ಎಲ್ಲ ಯೋಜನೆಗಳನ್ನು ರೂಪಿಸಿದ್ದೇನೆ ಎಂದು ಹೇಳಿದ್ದರು. ಬಿಡುವಿನ ವೇಳೆಯಲ್ಲಿ ಪತ್ನಿ ಮತ್ತು ಮಗಳ ಜತೆ ಧೋನಿ ಆಗಾಗ ವಿದೇಶಕ್ಕೆ ಭೇಟಿ ನೀಡುತ್ತಾ ಪ್ರವಾಸವನ್ನು ಎಂಜಾಯ್​ ಮಾಡುತ್ತಿರುತ್ತಾರೆ.

ಇದನ್ನೂ ಓದಿ MS Dhoni Birthday: 43ನೇ ವಸಂತಕ್ಕೆ ಕಾಲಿಟ್ಟ ಮಹೇಂದ್ರ ಸಿಂಗ್‌ ಧೋನಿ

ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ದೂರ ಉಳಿದಿದ್ದರೂ ಅವರ ಮೇಲಿನ ಕ್ರೇಜ್ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ. ಅವರು ಕ್ರಿಕೆಟ್​ ಆಡಬೇಕೆಂಬುವುದು ಅಭಿಮಾನಿಗಳ ಆಶಯವಾಗಿದೆ. ಇದಕ್ಕೆ ಈ ಬಾರಿಯ ಐಪಿಎಲ್​ ಟೂರ್ನಿಯೇ ಉತ್ತಮ ನಿದರ್ಶನ. ಧೋನಿ ಅವರು ಈ ಬಾರಿಯ ಐಪಿಎಲ್​ ಬಳಿಕ ನಿವೃತ್ತಿ ಘೋಷಿಸುತ್ತಾರೆ ಎನ್ನಲಾಗಿತ್ತು. ಇದೇ ಕಾರಣಕ್ಕೆ ಅವರ ಅಭಿಮಾನಿಗಳು ಚೆನ್ನೈ ಪಂದ್ಯ ಎಲ್ಲೆಲ್ಲಿ ನಡೆಯುತ್ತದೋ ಅಲ್ಲೆಲ್ಲ ಹೋಗಿ ಧೋನಿ ಆಟವನ್ನು ಕಣ್ತುಂಬಿಕೊಂಡಿದ್ದಾರೆ. ಜತೆಗೆ ಧೋನಿ ಅವರು ಮೈದಾನಕ್ಕೆ ಬರುವ ವೇಳೆ ಮೊಬೈಲ್​ ಪ್ಲ್ಯಾಶ್​ ಲೈಟ್​ಗಳನ್ನು ಹಾಕಿ ವಿಶೇಷ ಗೌರವ ಸೂಚಿಸುತ್ತಿದ್ದರು.

Exit mobile version