Site icon Vistara News

MS Dhoni: 16ನೇ ಆವೃತ್ತಿ ಐಪಿಎಲ್​ ಬಳಿಕ ಧೋನಿ ವಿದಾಯ; ಸುಳಿವು ನೀಡಿದ ಸಿಎಸ್​ಕೆ

ms dhoni csk

#image_title

ಚೆನ್ನೈ: 2023ರ ಐಪಿಎಲ್(IPL 2023) ಟೂರ್ನಿ ಆರಂಭಕ್ಕೂ ಮುನ್ನವೇ ಮಹೇಂದ್ರ ಸಿಂಗ್​ ಧೋನಿ(MS Dhoni) ಅಭಿಮಾನಿಗಳಿಗೆ ಭಾರಿ ನಿರಾಸೆಯನ್ನುಂಟು ಮಾಡುವ ಸುದ್ದಿಯೊಂದು ಹೊರಬಿದ್ದಿದೆ. 16ನೇ ಆವೃತ್ತಿಯ ಐಪಿಎಲ್​ ಬಳಿಕ ಧೋನಿ ವಿದಾಯ ಹೇಳಲಿದ್ದಾರೆ ಎಂದು ವರದಿಯಾಗಿದೆ.

“ಧೋನಿ ಈ ಬಾರಿ ನಡೆಯುವ ತವರಿನ ಐಪಿಎಲ್​ನಲ್ಲಿ ತಮ್ಮ ಕೊನೆಯ ಪಂದ್ಯವನ್ನಾಡಲಿದ್ದಾರೆ. ಈ ವಿಚಾರವನ್ನು ಐಪಿಎಲ್ ಆರಂಭಕ್ಕೂ ಮುನ್ನ ಧೋನಿ ಬಹಿರಂಗ ಪಡಿಸುವ ಸಾಧ್ಯತೆ ಇದೆ” ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ(CSK) ಮೂಲಗಳು ಹೇಳಿವೆ. ಆದರೆ ಈ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗೆ ಧೋನಿ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.

“ಮೂರು ವರ್ಷಗಳ ಬಳಿಕ ಐಪಿಎಲ್ ಟೂರ್ನಿ ಮತ್ತೆ ತವರಿನಲ್ಲಿ ಆಯೋಜನೆಗೊಳ್ಳುತ್ತಿದೆ. ತವರಿನ ಅಭಿಮಾನಿಗಳ ಮುಂದೆ ಧೋನಿ ವಿದಾಯ ಹೇಳಲಿದ್ದಾರೆ. ಇದು ಅವರ ಕೊನೆಯ ಐಪಿಎಲ್ ಟೂರ್ನಿಯಾಗಿದೆ. ಶ್ರೇಷ್ಠ ನಾಯಕನಿಗೆ ತವರಿನ ಅಭಿಮಾನಿಗಳ ಮುಂದೆ ವಿದಾಯ ನೀಡಲು ನಾವು ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಐಪಿಎಲ್ 2023 ಆರಂಭಕ್ಕೂ ಮುನ್ನ ಈ ಕುರಿತು ಸಂಪೂರ್ಣ ಚಿತ್ರಣ ಸಿಗಲಿದೆ” ಎಂದು ಸಿಎಸ್‌ಕೆ ಮೂಲಗಳು ತಿಳಿಸಿವೆ.

ಇದನ್ನೂ ಓದಿMS Dhoni: ಟ್ರ್ಯಾಕ್ಟರ್‌ ಮೂಲಕ ಉಳುಮೆ ಮಾಡಿದ ಎಂ.ಎಸ್​. ಧೋನಿ; ವಿಡಿಯೊ ವೈರಲ್​

ಧೋನಿ ಐಪಿಎಲ್​ನಲ್ಲಿ ಈವರೆಗೆ 234 ಪಂದ್ಯಗಳನ್ನಾಡಿದ್ದು 4,978 ರನ್​ಗಳನ್ನು ಕಲೆಹಾಕಿದ್ದಾರೆ. 24 ಅರ್ಧಶತಕಗಳನ್ನು ಬಾರಿಸಿದ್ದಾರೆ. ಜತೆಗೆ ಇವರ ನಾಯಕತ್ವದಲ್ಲಿ ಸಿಎಸ್​ಕೆ ತಂಡವು 4 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

Exit mobile version