Site icon Vistara News

MS Dhoni: ಐಪಿಎಲ್​ಗೆ ಅಭ್ಯಾಸ ಆರಂಭಿಸಿದ ಧೋನಿ; ವಿಡಿಯೊ ವೈರಲ್​

ms dhoni practice csk

ಚೆನ್ನೈ: ವಿದಾಯದ ಐಪಿಎಲ್​ ಟೂರ್ನಿ(IPL 2024) ಆಡಲಿರುವ ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು 17ನೇ ಆವೃತ್ತಿಯ ಐಪಿಎಲ್​ಗಾಗಿ ಅಭ್ಯಾಸ ಆರಂಭಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ದುಬೈ ಪ್ರವಾಸದಲ್ಲಿದ್ದ ಧೋನಿ ಈಗ ತವರಿಗೆ ಮರಳಿದ್ದು, ಪ್ಯಾಡ್​​ ಕಟ್ಟಿ ಬ್ಯಾಟಿಂಗ್​ ಅಭ್ಯಾಸ ನಡೆಸಿದ್ದಾರೆ. ಈ ವಿಡಿಯೊ ವೈರಲ್(viral video)​ ಆಗಿದೆ.

ಹಾಲಿ ಚಾಂಪಿಯನ್​ ಆಗಿರುವ ಚೆನ್ನೈ ತಂಡ ಈ ಬಾರಿಯ ಆವೃತ್ತಿಗಾಗಿ ಆಟಗಾರರ ಮಿನಿ ಹರಾಜಿನಲ್ಲಿ ಸ್ಟಾರ್​ ಆಟಗಾರರನ್ನು ಖರೀದಿಸಿ ತಂಡವನ್ನು ಬಲಿಷ್ಠಗೊಳಿಸಿದೆ. ಕಳೆದ ಬಾರಿಯ ಟೂರ್ನಿಯಲ್ಲಿ ಬೆರಳೆಣಿಕೆಯ ಅನುಭವಿ ಆಟಗಾರರನ್ನು ಹೊಂದಿದ್ದರೂ ಕಪ್​ ಗೆದ್ದು ಇತಿಹಾಸ ನಿರ್ಮಿಸಿತ್ತು. ಈ ಬಾರಿ ಬಲಿಷ್ಠವಾಗಿ ಗೋಚರಿಸಿದ ಚೆನ್ನೈ ತಂಡ ಮತ್ತೆ ಕಪ್​ ಗೆಲ್ಲುವುದು ಖಚಿತ ಎಂದು ಟೂರ್ನಿ ಆರಂಭಕ್ಕೂ ಮುನ್ನವೇ ಅಭಿಮಾನಿಗಳು ಭವಿಷ್ಯ ನುಡಿಯಲಾರಂಭಿಸಿದ್ದಾರೆ.

ಧೋನಿ ಅವರು ಚೆನ್ನೈ ತಂಡ ಜೆರ್ಸಿ ಮತ್ತು ಪ್ಯಾಡ್​ ಕಟ್ಟಿಕೊಂಡು ನೆಟ್ಸ್​ನಲ್ಲಿ ಬ್ಯಾಟಿಂಗ್​ ಅಭ್ಯಾಸ ನಡೆಸುತ್ತಿರುವ ವಿಡಿಯೊವನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 2004 ಐಪಿಎಲ್​ಗೆ ಧೋನಿಯ ಅಭ್ಯಾಸ ಆರಂಭ ಎಂದು ಬರೆದುಕೊಂಡಿದ್ದಾರೆ. ಧೋನಿ ಡಿಫೆಂನ್ಸಿಂಗ್​ ಬ್ಯಾಟಿಂಗ್​ ಮಾಡುತ್ತಿರುವುದು ಈ ವಿಡಿಯೊದಲ್ಲಿ ಕಾಣಬಹುದು.

ಇದನ್ನೂ ಓದಿ ಧೋನಿಯೇ ಮಹಾ ವಂಚಕ; ಸಾಕ್ಷಿ ಸಮೇತ ಆರೋಪ ಮಾಡಿದ ಮಾಜಿ ಬಿಸಿನೆಸ್ ಪಾರ್ಟ್ನರ್

ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಕೆಳವು ವರ್ಷಗಳಾಗಿವೆ. ಕೇವಲ ಐಪಿಎಲ್​ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಕಳೆದ ವರ್ಷವೇ ಅವರು ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ನಿವೃತ್ತಿ ಬಳಿಕ ಏನು ಮಾಡಲಿದ್ದೀರ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಧೋನಿ. ಸದ್ಯಕ್ಕೆ ನಾನು ಕ್ರಿಕೆಟ್​ ಬಗ್ಗೆ ಮಾತ್ರ ಯೋಚಿಸುತ್ತಿದ್ದೇನೆ. ಆದರೆ ಒಂದಂತು ನಿಜ, ಕ್ರಿಕೆಟ್​ನಿಂದ ನಿವೃತ್ತಿಯಾದ ಬಳಿಕ ಕೆಲ ಕಾಲ ಆರ್ಮಿಯಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಅದು ನನ್ನ ಜೀವನದ ಪ್ರಮುಖ ಗುರಿ ಎಂದು ಮಾಹಿ ಹೇಳಿದ್ದರು.

ಹುಕ್ಕಾ ಸೇದಿ ಸಿಕ್ಕಿ ಬಿದ್ದ ಧೋನಿ


ಕೆಲ ದಿನಗಳ ಹಿಂದಷ್ಟೇ ಧೋನಿ ಹುಕ್ಕಾ ಸೇದುವ(MS Dhoni smoking hookah) ವಿಡಿಯೊ ವೈರಲ್​ ಆಗಿತ್ತು. ಇದನ್ನು ಕಂಡು ಅವರ ಅಭಿಮಾನಿಗಳು ದಂಗಾಗಿದ್ದರು. ಬೈಕ್​ ಮತ್ತು ಕಾರುಗಳ ಮೇಲೆ ಅಪಾರ ಕ್ರೇಜ್​ ಇರುವ ಧೋನಿಗೆ ಹುಕ್ಕಾ ಸೇದುವ ಚಟವಿದೆ ಎನ್ನುವ ವಿಚಾರ ತಡವಾಗಿ ಬೆಳಕಿಗೆ ಬಂದಿತ್ತು. ಹಿಂದೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಜಾರ್ಜ್​ ಬೈಲಿ ಸಂದರ್ಶನವೊಂದರಲ್ಲಿ ಧೋನಿಗೆ ಅಪಾರ ಹುಕ್ಕಾ ಸೇದುವ ಚಟವಿದೆ ಎಂದು ಹೇಳಿದ್ದರು. ಯುವ ಕ್ರಿಕೆಟಿಗರೊಂದಿಗೆ ತಮ್ಮ ಕೊಠಡಿಯಲ್ಲಿ ಕೂತು ಮಾತನಾಡುವ ವೇಳೆ ಧೋನಿ ಹುಕ್ಕಾ ಸೇದುತ್ತಾರೆ ಎಂದು ಹೇಳಿದ್ದರು. ಆದರೆ ಬೈಲಿಯ ಈ ಮಾತನ್ನು ಯಾರು ಕೂಡ ನಂಬಿರಲಿಲ್ಲ. ಬೈಲಿ ಅವರನ್ನೇ ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಧೋನಿ ಅವರು ಹುಕ್ಕ ಸೇದುವಾಗಲೇ ಪ್ರತ್ಯಕ್ಷವಾಗಿ ಸಿಕ್ಕಿ ಬಿದ್ದ ಬಳಿಕ ಬೈಲಿ ಹೇಳಿದ ಮಾತನ್ನು ನಿಜ ಎಂದು ಅಭಿಮಾನಿಗಳು ಒಪ್ಪಿಕೊಂಡಿದ್ದಾರೆ.

Exit mobile version