ಮುಂಬಯಿ: ಧೋನಿ(MS Dhoni) ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿ ಕೆಳವು ವರ್ಷಗಳಾಗಿವೆ. ಕೇವಲ ಐಪಿಎಲ್ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್ಗೆ ವಿದಾಯ(ms dhoni ipl retirement) ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಅವರು ನಾಯಕತ್ವದಿಂದ ಕೆಳಗಿಳಿದು ಈ ಸ್ಥಾನವನ್ನು ಯುವ ಆಟಗಾರ ಗಾಯಕ್ವಾಡ್ಗೆ ನೀಡಿದ್ದು ಎನ್ನಲಾಗಿದೆ. ಆದರೆ, ಧೋನಿ ವಿದಾಯದ ಬಗ್ಗೆ ಅವರ ಆಪ್ತ ಗೆಳೆಯ, ಚೆನ್ನೈ ತಂಡದ ಮಾಜಿ ಆಟಗಾರ ಸುರೇಶ್ ರೈನಾ(Suresh Raina) ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಜಿಯೋ ಸಿನಿಮಾ ಸಂದರ್ಶನದಲ್ಲಿ ಮಾತನಾಡಿದ ಸುರೇಶ್ ರೈನಾ, ಧೋನಿ ಮುಂದಿನ ಆವೃತ್ತಿಯ ಐಪಿಎಲ್ನಲ್ಲಿಯೂ ಆಡಲಿದ್ದಾರೆ ಎಂದು ಹೇಳಿದರು. ರೈನಾ ಅವರ ಈ ಮಾತು ಕೇಳಿ ಧೋನಿ ಅಭಿಮಾನಿಗಳು ಸಂತಸಗೊಂಡಿದ್ದಾರೆ.
Bat sound from the Shots of MS Dhoni 🥵
— 🎰 (@StanMSD) April 17, 2024
pic.twitter.com/EZOtQWqDjG
‘ಧೋನಿಯ ಗಾಯಗಳ ಬಗ್ಗೆ ಅವರಿಗಿಂತ ಹೆಚ್ಚು ಬೇರೆಯವರು ಕಾಳಜಿ ಹೊಂದಿದ್ದಾರೆ. ನಾನು ನೋಡಿರುವ ಜನರಲ್ಲೇ ಧೋನಿ ಅತ್ಯಂತ ಕಠಿಣ ವ್ಯಕ್ತಿ. ಅವರು ಎಷ್ಟು ಗಾಯ ಅನುಭವಿಸುತ್ತಿದ್ದಾರೆ ಅಥವಾ ಅನುಭವಿಸುತ್ತಿಲ್ಲ ಎನ್ನುವುದು ನಮಗೆ ಯಾರಿಗೂ ಗೊತ್ತಿಲ್ಲ. ಅವರು ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಾರೆ. ಮುಂದಿನ ಆವೃತ್ತಿಯಲ್ಲಿಯೂ ಆಡುವ ಮೂಲಕ ಅವರ ಅಭಿಮಾನಿಗಳಿಗೆ ಖುಷಿ ನೀಡಲಿದ್ದಾರೆ” ಎಂದು ರೈನಾ ಹೇಳಿದರು.
Will MS Dhoni play in IPL 2025?
— Johns. (@CricCrazyJohns) April 17, 2024
The answer from Suresh Raina is great news for CSK fans….!!!! pic.twitter.com/wxUdNeAeiT
ಇದನ್ನೂ ಓದಿ IPL 2024 POINTS TABLE: ಗುಜರಾತ್ ಮಣಿಸಿ ಅಂಕಪಟ್ಟಿಯಲ್ಲಿ 3 ಸ್ಥಾನ ಜಿಗಿತ ಕಂಡ ಡೆಲ್ಲಿ
ಧೋನಿ (MS Dhoni) ಮೊಣಕಾಲು ಗಾಯದಿಂದ ಬಳಲುತ್ತಿದ್ದರೂ ಕ್ರಿಕೆಟ್ ಕುರಿತ ಅಚಲ ಬದ್ಧತೆಗಾಗಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಸಿಎಸ್ಕೆ ಬೌಲಿಂಗ್ ಸಲಹೆಗಾರ ಎರಿಕ್ ಸಿಮನ್ಸ್ ಧೋನಿಯ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿದ್ದು, ಅವರ ದೃಢನಿಶ್ಚಯದ ಬಲವನ್ನು ಬಹಿರಂಗಪಡಿಸಿದ್ದರು. ಮೊಣಕಾಲು ಗಾಯಕ್ಕೆ ಸಂಬಂಧಿಸಿದ ನೋವು ಮತ್ತು ಸಂಭಾವ್ಯ ಅಪಾಯಗಳ ಹೊರತಾಗಿಯೂ, ಧೋನಿ ಅದನ್ನು ಅವರ ಪ್ರದರ್ಶನ ಅಥವಾ ಉತ್ಸಾಹವನ್ನು ಕಡಿಮೆ ಮಾಡುತ್ತಿಲ್ಲ ಎಂದು ಹೇಳಿದ್ದರು.
ಮುಂಬೈ ಇಂಡಿಯನ್ಸ್ ವಿರುದ್ಧದ ಗಮನಾರ್ಹ ಪಂದ್ಯದಲ್ಲಿ ಧೋನಿ ಇನಿಂಗ್ಸ್ನ ಕೊನೆಯ ನಾಲ್ಕು ಎಸೆತಗಳಲ್ಲಿ ಪರಾಕ್ರಮ ತೋರಿದ್ದರು. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಎಸೆದ ಕೊನೆಯ ಓವರ್ನಲ್ಲಿ 26 ರನ್ ಗಳಿಸಿದ್ದರು. ಮೊದಲ ಮೂರು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ್ದರು. ಮಿಂಚಿನ ದಾಳಿಯು ಸಿಎಸ್ಕೆ ತಂಡಕ್ಕೆ 20 ರನ್ಗಳ ಗೆಲುವಿಗೆ ಕಾರಣವಾಯಿತು.