IPL 2024 POINTS TABLE: ಗುಜರಾತ್​​ ಮಣಿಸಿ ಅಂಕಪಟ್ಟಿಯಲ್ಲಿ 3 ಸ್ಥಾನ ಜಿಗಿತ ಕಂಡ ಡೆಲ್ಲಿ - Vistara News

ಕ್ರೀಡೆ

IPL 2024 POINTS TABLE: ಗುಜರಾತ್​​ ಮಣಿಸಿ ಅಂಕಪಟ್ಟಿಯಲ್ಲಿ 3 ಸ್ಥಾನ ಜಿಗಿತ ಕಂಡ ಡೆಲ್ಲಿ

IPL 2024 Points Table: ಗುಜರಾತ್​ ಟೈಟಾನ್ಸ್(Gujarat Titans)​ ವಿರುದ್ಧ 6 ವಿಕೆಟ್​ಗಳ ಅಂತರದಿಂದ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ಅಂಕಪಟ್ಟಿಯಲ್ಲಿ(IPL 2024 POINTS TABLE) ಬರೋಬ್ಬರಿ 3 ಸ್ಥಾನಗಳ ಜಿಗಿತ ಕಂಡು 6ನೇ ಸ್ಥಾನಕ್ಕೆ ಬಂದು ನಿಂತಿದೆ.

VISTARANEWS.COM


on

IPL 2024 Points Table
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಅಹಮದಾಬಾದ್​: ಬುಧವಾರ ರಾತ್ರಿ ನಡೆದ ಐಪಿಎಲ್(IPL 2024)​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ತಂಡ ಗುಜರಾತ್​ ಟೈಟಾನ್ಸ್(Gujarat Titans)​ ವಿರುದ್ಧ 6 ವಿಕೆಟ್​ಗಳ ಅಂತರದಿಂದ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ(IPL 2024 POINTS TABLE) ಬರೋಬ್ಬರಿ 3 ಸ್ಥಾನಗಳ ಜಿಗಿತ ಕಂಡು 6ನೇ ಸ್ಥಾನಕ್ಕೆ ಬಂದು ನಿಂತಿದೆ. ಈ ಗೆಲುವಿಗೂ ಮುನ್ನ ಡೆಲ್ಲಿ 9ನೇ ಸ್ಥಾನದಲ್ಲಿತ್ತು. ಇದೀಗ ಡೆಲ್ಲಿ ಗೆಲುವಿನಿಂದಾಗಿ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ ಸಂಭವಿಸಿದೆ.

ನೂತನ ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​76112 (+0.677)
ಕೆಕೆಆರ್​​6428 (+1.399)
ಚೆನ್ನೈ ಸೂಪರ್​ ಕಿಂಗ್ಸ್​​6428 (+0.726)
ಹೈದರಾಬಾದ್​​6428(+0.502)
ಲಕ್ನೋ6336 (+0.038)
ಡೆಲ್ಲಿ ಕ್ಯಾಪಿಟಲ್ಸ್​​7346 (-0.074)
ಗುಜರಾತ್​7346 (-1.303)
ಪಂಜಾಬ್6244 (-0.218)
ಮುಂಬೈ​6244 (-0.234)
ಆರ್​ಸಿಬಿ7162 (-1.185)

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ಡೆಲ್ಲಿ(Delhi Capitals) ತಂಡಕ್ಕೆ. ಬೌಲರ್​ಗಳು ತಮ್ಮ ಘಾತಕ ದಾಳಿಯ ಮೂಲಕ ಎದುರಾಳಿ ಗುಜರಾತ್​ ತಂಡವನ್ನು 89 ರನ್​ಗಳಿಗೆ ಆಲೌಟ್​ ಮಾಡಿದರು. ಸಾಧಾರಣ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ 8.5 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 92 ರನ್​ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಚೇಸಿಂಗ್​ ವೇಳೆ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಬಿರುಸಿನ ಬ್ಯಾಟಿಂಗ್​ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಇವರ ಈ ಆಕ್ರಮಣಕಾರಿ ಬ್ಯಾಟಿಂಗ್​ನಿಂದಾಗಿ 2 ಓವರ್​ ಮುಕ್ತಾಯಗೊಳ್ಳುವ ಮುನ್ನವೇ ತಂಡಕ್ಕೆ 25 ರನ್​ ಹರಿದುಬಂತು. ಆದರೆ ಇವರ ಈ ಆಟ ಹೆಚ್ಚು ಹೊತ್ತು ಸಾಗಲಿಲ್ಲ. ಸ್ಪೆನ್ಸರ್ ಜಾನ್ಸನ್ ಎಸೆದ ವೈಡ್​ ಲೆಂತ್​ ಬಾಲ್​ನ ಮರ್ಮವನರಿಯದೆ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು. ಅವರ ಗಳಿಕ 10 ಎಸೆತಗಳಿಂದ 20 ರನ್. ಈ ವಿಕೆಟ್​ ಪತನದ ಬಳಿಕ ಆಡಲಿಳಿದ ಅಭಿಷೇಕ್​ ಪೋರೆಲ್(15)​ ಮತ್ತು ಶಾಯ್ ಹೋಪ್(19)​ ಬೇಗನೆ​ ವಿಕೆಟ್​ ಕಳೆದುಕೊಂಡು ತಂಡಕ್ಕೆ ಆತಂಕ ತಂದೊಡ್ಡಿದರು. ಈ ವೇಳೆ ತಾಳ್ಮೆಯುತ ಬ್ಯಾಟಿಂಗ್​ ನಡೆಸಿದ ನಾಯಕ ಪಂತ್​(16) ಮತ್ತು ಸುಮೀತ್​ ಕುಮಾರ್​(9) ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಗುಜರಾತ್​ ಪರ ಸಂದೀಪ್​ ವಾರಿಯರ್​ 2 ವಿಕೆಟ್​ ಕಿತ್ತರು.

ಇದನ್ನೂ ಓದಿ IPL 2024: ಕೆಕೆಆರ್ ಸೋಲು ಕಂಡು ಕಣ್ಣೀರು ಸುರಿಸಿದ ನಟ ಶಾರೂಖ್ ಖಾನ್‌; ಫೋಟೊ ವೈರಲ್​

ಇನಿಂಗ್ಸ್​ ಆರಂಭಿಸಿದ ಗುಜರಾತ್​ ತಂಡದ ಬ್ಯಾಟರ್​ಗಳು ಡೆಲ್ಲಿ ಬೌಲರ್​ಗಳಾದ ಇಶಾಂತ್​ ಶರ್ಮ, ಮುಕೇಶ್​ ಕುಮಾರ್​ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರ ಕರಾರುವಾಕ್ ಬೌಲಿಂಗ್ ಎದುರು ಅಬ್ಬರಿಸಲು ವಿಫಲರಾದರು. ನಾಯಕ ಶುಭಮನ್​​ ಗಿಲ್​(8), ವೃದ್ಧಿಮಾನ್​ ಸಾಹಾ(2), ಡೇವಿಡ್​ ಮಿಲ್ಲರ್​(2), ಅಭಿನವ್​ ಮನೋಹರ್​(8) ಮತ್ತು ಈ ಆವೃತ್ತಿಯಲ್ಲಿ ಮೊದಲ ಪಂದ್ಯವಾನ್ನಾಡಿದ ಶಾರುಖ್ ಖಾನ್(0) ಸಿಂಗಲ್​ ಡಿಜಿಟ್​ಗೆ ಸೀಮಿತರಾಗಿ ಪೆವಿಲಿಯನ್​ ಪರೇಡ್​ ನಡೆಸಿದರು.

ಇನ್ನೇನು ತಂಡ 50ರನ್​ ಒಳಗಡೆ ಗಂಟು-ಮೂಟೆ ಕಟ್ಟುತ್ತದೆ ಎನ್ನುವ ಹಂತದಲ್ಲಿ 8ನೇ ಕ್ರಮಾಂಕದಲ್ಲಿ ಆಡಲಿಳಿದ ರಶೀದ್​ ಖಾನ್​ ಏಕಾಂಗಿ ಹೋರಾಟ ನಡೆಸಿ 24 ಎಸೆತಗಳಿಂದ 31 ರನ್​ ಚಚ್ಚಿ ತಂಡದ ಮೊತ್ತವನ್ನು 80ರ ಗಡಿ ದಾಟಿಸಿ ಮಾನ ಉಳಿಸಿದರು. ಒಟ್ಟಾರೆಯಾಗಿ ತಂಡದ ಪರ ಮೂರು ಮಂದಿ ಮಾತ್ರ ಎರಡಂಕಿ ಮೊತ್ತ ಕಲೆಹಾಕುವಲ್ಲಿ ಯಶಸ್ಸು ಕಂಡರು. ಸಾಯಿ ಸುದರ್ಶನ್​(12) ಮತ್ತು ರಾಹುಲ್​ ತೆವಾಟಿಯ(10) ರನ್​ ಬಾರಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ, ಬಿಸಿನೆಸ್‌ನಲ್ಲೂ ಸಚಿನ್ ಅವರದ್ದೇ ಸಿಕ್ಸರ್! ತೆಂಡೂಲ್ಕರ್‌ ಒಟ್ಟು ಆಸ್ತಿ ಎಷ್ಟು ಗೊತ್ತಾ?

VISTARANEWS.COM


on

ಕೆಟ್ ಮೈದಾನದಲ್ಲಿ ಶತಕಗಳ ಸರದಾರನಾಗಿ ಮೆರೆದ ‘ಮಾಸ್ಟರ್ ಬ್ಲಾಸ್ಟರ್’ ಸಚಿನ್ ತೆಂಡೂಲ್ಕರ್, ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ದಶಕದ ನಂತರವೂ ವ್ಯವಹಾರ ಲೋಕದ ಅಧಿಪತಿಯಾಗಿ ಮುಂದುವರಿದಿದ್ದಾರೆ. ಅಭಿಮಾನಿಗಳಿಂದ ‘ಕ್ರಿಕೆಟ್ ದೇವರು’ ಎಂದು ಆರಾಧಿಸಲ್ಪಡುವ ಸಚಿನ್, ಈಗ ಕೇವಲ ಕ್ರೀಡಾಪಟುವಾಗಿ ಉಳಿಯದೆ ಒಬ್ಬ ಚಾಣಾಕ್ಷ ಉದ್ಯಮಿ ಮತ್ತು ಹೂಡಿಕೆದಾರನಾಗಿ ಹೊರಹೊಮ್ಮಿದ್ದಾರೆ. ಏಪ್ರಿಲ್ 2026ರ ಇತ್ತೀಚಿನ ವರದಿಗಳ ಪ್ರಕಾರ, ಸಚಿನ್ ಅವರ ಒಟ್ಟು ಆಸ್ತಿ ಮೌಲ್ಯವು ಸುಮಾರು 170 ಮಿಲಿಯನ್ ಡಾಲರ್ (₹1,400 ಕೋಟಿಗೂ ಅಧಿಕ) ಎಂದು ಅಂದಾಜಿಸಲಾಗಿದೆ. 2025ರ ಸಾಲೊಂದರಲ್ಲೇ ಅವರು ಬ್ರ್ಯಾಂಡ್ ಒಪ್ಪಂದಗಳು ಮತ್ತು ಹೂಡಿಕೆಗಳ ಮೂಲಕ ಸರಿಸುಮಾರು ₹50 ಕೋಟಿ ಸಂಪಾದಿಸುವ ಮೂಲಕ ತಮ್ಮ ಆರ್ಥಿಕ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸಿದ್ದಾರೆ.

ಸಚಿನ್ ಅವರ ಈ ಬೃಹತ್ ಆದಾಯದ ಹಿಂದೆ ಅವರ ದೂರದೃಷ್ಟಿಯ ಹೂಡಿಕೆಗಳಿವೆ. ಬಳಸಿದ ಕಾರುಗಳ ವೇದಿಕೆ ‘Spinny’, ಗೇಮಿಂಗ್ ಸ್ಟಾರ್ಟ್-ಅಪ್ ‘JetSynthesys’ ಮತ್ತು ಸೋಲಾರ್ ಕ್ಷೇತ್ರದ ‘Truzon Solar’ ಸೇರಿದಂತೆ ‘Zepto’ ಮತ್ತು ‘Vahdam Teas’ ನಂತಹ ಪ್ರಮುಖ ಸಂಸ್ಥೆಗಳಲ್ಲಿ ಅವರು ಬಂಡವಾಳ ಹೂಡಿದ್ದಾರೆ. ಇಷ್ಟೇ ಅಲ್ಲದೆ, ತಮ್ಮದೇ ಆದ ‘Ten XU’ ಸ್ಪೋರ್ಟ್ಸ್‌ವೇರ್ ಬ್ರ್ಯಾಂಡ್ ಮತ್ತು ‘True Blue’ ಫ್ಯಾಷನ್ ಲೇಬಲ್ ಮೂಲಕ ಉದ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಸಚಿನ್ ಎಂಬ ಹೆಸರೇ ಒಂದು ಶಕ್ತಿಯುತ ಬ್ರ್ಯಾಂಡ್ ಆಗಿರುವುದರಿಂದ, ಅಪೋಲೋ ಟೈರ್ಸ್‌ನಿಂದ ಹಿಡಿದು ಪ್ರಮುಖ ಬ್ಯಾಂಕ್‌ಗಳವರೆಗೆ ಹಲವು ಕಂಪನಿಗಳು ಇಂದಿಗೂ ಅವರ ವಿಶ್ವಾಸಾರ್ಹ ಇಮೇಜ್ ಅನ್ನು ಬಳಸಿಕೊಳ್ಳಲು ಕೋಟಿ ಕೋಟಿ ಸಂಭಾವನೆ ನೀಡುತ್ತಿವೆ.

ಇನ್ನು ರಿಯಲ್ ಎಸ್ಟೇಟ್ ವಿಷಯಕ್ಕೆ ಬಂದರೆ, ಸಚಿನ್ ಅವರ ಆಸ್ತಿಗಳು ಯಾರಿಗೂ ಕಡಿಮೆ ಇಲ್ಲದಂತಿವೆ. ಮುಂಬೈನ ಬಾಂದ್ರಾದಲ್ಲಿರುವ ಐಷಾರಾಮಿ ಬಂಗಲೆ, ದಕ್ಷಿಣ ಮುಂಬೈನ ಫ್ಲಾಟ್ ಮತ್ತು ಅಲಿಬಾಗ್‌ನಲ್ಲಿರುವ ಆಸ್ತಿಗಳ ಒಟ್ಟು ಮೌಲ್ಯವೇ ಸುಮಾರು ₹300 ಕೋಟಿ ಮೀರಿದೆ ಎಂದು ಅಂದಾಜಿಸಲಾಗಿದೆ. ಮೈದಾನದಲ್ಲಿ ರನ್ ಮಳೆ ಸುರಿಸಿದ ಮಾದರಿಯಲ್ಲೇ, ವ್ಯವಹಾರ ಲೋಕದಲ್ಲಿ ಸರಿಯಾದ ಕಾರ್ಯತಂತ್ರ ಮತ್ತು ಹೂಡಿಕೆಯ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಸಚಿನ್ ಸಾವಿರಾರು ಕೋಟಿಗಳ ಸಾಮ್ರಾಜ್ಯವನ್ನು ಕಟ್ಟಿದ್ದಾರೆ. ಒಟ್ಟಾರೆಯಾಗಿ, ನಿವೃತ್ತಿಯ ನಂತರವೂ ಸಚಿನ್ ಅವರ ಈ ‘ಸೆಕೆಂಡ್ ಇನ್ನಿಂಗ್ಸ್’ ಯುವ ಉದ್ಯಮಿಗಳಿಗೆ ದೊಡ್ಡ ಸ್ಫೂರ್ತಿಯಾಗಿದೆ.

Continue Reading

Latest

ಹೋಮ್‌ಗ್ರೌಂಡ್‌ನಲ್ಲಿ ಆರ್‌ಸಿಬಿಗಿಂದು ಕೊನೆ ಲೀಗ್‌ ಪಂದ್ಯ! ಗುಜರಾತ್ ಟೈಟನ್ಸ್ ಸವಾಲಿಗೆ ಸಜ್ಜಾದ ವಿರಾಟ್‌ ಪಡೆ

VISTARANEWS.COM


on

ಬೆಂಗಳೂರು: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ತನ್ನ ತವರು ಮೈದಾನವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಅಂತಿಮ ಲೀಗ್ ಪಂದ್ಯವನ್ನು ಆಡಲಿದೆ. ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್ ವಿರುದ್ಧ ನಡೆಯಲಿರುವ ಈ ಹಣಾಹಣಿಯಲ್ಲಿ ಗೆಲುವಿನ ಮೂಲಕ ತವರಿನ ಪ್ರೇಕ್ಷಕರಿಗೆ ಸ್ಮರಣೀಯ ವಿದಾಯ ಹೇಳಲು ಬೆಂಗಳೂರು ಪಡೆ ಸಜ್ಜಾಗಿದೆ. ಈ ಪಂದ್ಯದ ನಂತರ ಆರ್‌ಸಿಬಿ ತನ್ನ ಮುಂದಿನ ಪಂದ್ಯಗಳಿಗಾಗಿ ರಾಯ್ಪುರಕ್ಕೆ ಪ್ರಯಾಣ ಬೆಳೆಸಲಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಭದ್ರ ನೆಲೆ ಕಂಡುಕೊಳ್ಳಲು ಈ ಗೆಲುವು ಉಭಯ ತಂಡಗಳಿಗೂ ಅತ್ಯಂತ ನಿರ್ಣಾಯಕವಾಗಿದೆ.

ಆರ್‌ಸಿಬಿ ಈ ವರ್ಷ ಚಿನ್ನಸ್ವಾಮಿ ಮೈದಾನದಲ್ಲಿ ಆಡಿದ 4 ಪಂದ್ಯಗಳ ಪೈಕಿ 3ರಲ್ಲಿ ಜಯ ಸಾಧಿಸಿ ಭರ್ಜರಿ ಫಾರ್ಮ್‌ನಲ್ಲಿದೆ. ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಅನುಭವಿಸಿದ ಸೋಲಿನ ಆಘಾತದಿಂದ ಹೊರಬಂದು, ಮತ್ತೆ ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿ ರಜತ್ ಪಾಟೀದಾರ್ ಸೈನ್ಯವಿದೆ. ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟೀದಾರ್ ಮತ್ತು ಫಿಲ್ ಸಾಲ್ಟ್ ಅಬ್ಬರಿಸುತ್ತಿದ್ದು, ತಂಡಕ್ಕೆ ಬಲಿಷ್ಠ ಅಡಿಪಾಯ ಹಾಕುತ್ತಿದ್ದಾರೆ. ವಿಶೇಷವಾಗಿ ಟಿಮ್ ಡೇವಿಡ್ ಅವರ 203.52 ರ ಸ್ಟ್ರೈಕ್ ರೇಟ್ ತಂಡದ ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಬಲ ತಂದಿದೆ. ಬೌಲಿಂಗ್‌ನಲ್ಲಿ ಹೇಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಜೋಡಿ ಎದುರಾಳಿಗಳನ್ನು ಕಟ್ಟಿಹಾಕಲು ಸನ್ನದ್ಧವಾಗಿದೆ.

ಇನ್ನೊಂದೆಡೆ, ಗುಜರಾತ್ ಟೈಟನ್ಸ್ ತಂಡವು ಸ್ಥಿರ ಪ್ರದರ್ಶನದ ಹುಡುಕಾಟದಲ್ಲಿದ್ದು, ಪ್ರಬಲ ಬೌಲಿಂಗ್ ಪಡೆಯನ್ನು ನೆಚ್ಚಿಕೊಂಡಿದೆ. ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್ ಮತ್ತು ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರನ್ನೊಳಗೊಂಡ ವೇಗದ ಪಡೆ ಆರ್‌ಸಿಬಿಯ ಸ್ಫೋಟಕ ಬ್ಯಾಟರ್‌ಗಳಿಗೆ ಬ್ರೇಕ್ ಹಾಕಲು ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಅದರಲ್ಲೂ ಪ್ರಸಿದ್ಧ್ ಕೃಷ್ಣ ತಮ್ಮ ತವರು ಮೈದಾನದಲ್ಲಿ ಹಳೆಯ ತಂಡದ ವಿರುದ್ಧ ಹೇಗೆ ಮಿಂಚಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಉಭಯ ತಂಡಗಳ ನಡುವೆ ಇದುವರೆಗೆ ನಡೆದ 6 ಮುಖಾಮುಖಿಗಳಲ್ಲಿ ಎರಡೂ ತಂಡಗಳು ತಲಾ 3 ಪಂದ್ಯಗಳನ್ನು ಗೆದ್ದು ಸಮಬಲ ಸಾಧಿಸಿರುವುದರಿಂದ, ಇಂದಿನ ಪಂದ್ಯವು ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡುವುದರಲ್ಲಿ ಸಂಶಯವಿಲ್ಲ.

Continue Reading

Latest

ತಾಯಿ ನಿಧನದ ಶೋಕದಲ್ಲೂ ತಂಡಕ್ಕಾಗಿ ಕಣಕ್ಕಿಳಿದ ಮುಖೇಶ್ ಚೌಧರಿ! ಗೆಲುವನ್ನು ಅರ್ಪಿಸಿ ಮಾನವೀಯತೆ ಮೆರೆದ ನಾಯಕ ಗಾಯಕ್ವಾಡ್

VISTARANEWS.COM


on

ವಾಂಖೆಡೆ ಮೈದಾನದಲ್ಲಿ ಏಪ್ರಿಲ್ 23ರಂದು ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 103 ರನ್‌ಗಳ ಬೃಹತ್ ಜಯ ದಾಖಲಿಸಿದೆ. ಈ ಗೆಲುವಿಗಿಂತಲೂ ಮಿಗಿಲಾಗಿ ಅಭಿಮಾನಿಗಳ ಗಮನ ಸೆಳೆದಿದ್ದು ವೇಗಿ ಮುಖೇಶ್ ಚೌಧರಿ ಅವರ ಅಪ್ರತಿಮ ವೃತ್ತಿಧರ್ಮ. ತಮ್ಮ ತಾಯಿ ಪ್ರೇಮಾ ದೇವಿ ನಿಧನರಾದ ಕೇವಲ ಎರಡೇ ದಿನಕ್ಕೆ, ತಾಯಿಯ ಅಂತ್ಯಕ್ರಿಯೆ ಮುಗಿಸಿ ಮೈದಾನಕ್ಕಿಳಿದ ಮುಖೇಶ್, ತಂಡದ ಗೆಲುವಿಗಾಗಿ ಸರ್ವಸ್ವವನ್ನೂ ಧಾರೆ ಎರೆದರು. ಅವರ ಈ ಬದ್ಧತೆ ಕ್ರೀಡಾ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದೆ.

ಪಂದ್ಯದ ನಿರ್ಣಾಯಕ ಹಂತದಲ್ಲಿ ಕ್ವಿಂಟನ್ ಡಿ ಕಾಕ್ ಅವರ ವಿಕೆಟ್ ಪಡೆದ ಮುಖೇಶ್, ಯಾವುದೇ ಅಬ್ಬರದ ಸಂಭ್ರಮಾಚರಣೆ ಮಾಡದೆ ಮೌನವಾಗಿ ಆಕಾಶದತ್ತ ಕೈ ತೋರಿಸಿ “ಅಮ್ಮ ಇದು ನಿನಗಾಗಿ” ಎಂದು ತಮ್ಮ ಪ್ರದರ್ಶನವನ್ನು ಸಮರ್ಪಿಸಿದ ಕ್ಷಣ ಭಾವುಕವಾಗಿತ್ತು. ಸುಮಾರು ಒಂದು ವರ್ಷದಿಂದ ಅನಾರೋಗ್ಯದ ವಿರುದ್ಧ ಹೋರಾಡುತ್ತಿದ್ದ ತಾಯಿಯನ್ನು ಕಳೆದುಕೊಂಡ ನೋವಿನ ನಡುವೆಯೂ, ತಂಡಕ್ಕೆ ತನ್ನ ಅವಶ್ಯಕತೆ ಇದೆ ಎಂದು ಅರಿತು ಮೈದಾನಕ್ಕೆ ಮರಳಿದ ಅವರ ಸ್ಥೈರ್ಯಕ್ಕೆ ಕ್ರಿಕೆಟ್ ಲೋಕವೇ ಶರಣಾಗಿದೆ. ಮುಖೇಶ್ ಅವರ ಶಿಸ್ತುಬದ್ಧ ಬೌಲಿಂಗ್ ಮುಂಬೈ ಪಡೆಯನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿತು.

ಇನ್ನು ಪಂದ್ಯ ಮುಗಿದ ಬಳಿಕ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಅವರು ಮುಖೇಶ್ ಅವರನ್ನು ಅಪ್ಪಿಕೊಂಡು ಸಾಂತ್ವನ ಹೇಳುವ ಮೂಲಕ ಮಾನವೀಯತೆ ಮೆರೆದರು. ಇಂತಹ ಕಠಿಣ ಪರಿಸ್ಥಿತಿಯಲ್ಲೂ ತಂಡಕ್ಕಾಗಿ ಮರಳಿದ ಮುಖೇಶ್ ಅವರ ಮಾನಸಿಕ ಶಕ್ತಿಯನ್ನು ಶ್ಲಾಘಿಸಿದ ಗಾಯಕ್ವಾಡ್, ಈ ಭರ್ಜರಿ ಗೆಲುವನ್ನು ಮುಖೇಶ್ ಮತ್ತು ಅವರ ತಾಯಿಗೆ ಅರ್ಪಿಸುವುದಾಗಿ ಘೋಷಿಸಿದರು. ನಾಯಕನ ಈ ನಿರ್ಧಾರ ಮತ್ತು ಮುಖೇಶ್ ಅವರ ಕರ್ತವ್ಯ ಪ್ರಜ್ಞೆ ಸಿಎಸ್‌ಕೆ ತಂಡದ ಒಗ್ಗಟ್ಟನ್ನು ಸಾಬೀತುಪಡಿಸಿದೆ.

Continue Reading

Latest

ಹಾರ್ದಿಕ್ ವಿರುದ್ಧ ಅಸಮಾಧಾನ: ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಸಹೋದರ ಕೃನಾಲ್ ಪಾಂಡ್ಯ.

VISTARANEWS.COM


on

ಭಾರತೀಯ ಕ್ರಿಕೆಟ್ ಲೋಕದ ಫೇಮಸ್ ‘ಪಾಂಡ್ಯ ಬ್ರದರ್ಸ್’ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವದಂತಿಗಳು ಇತ್ತೀಚಿನ ದಿನಗಳಲ್ಲಿ ಜೋರಾಗಿ ಕೇಳಿಬರುತ್ತಿವೆ. ಈ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿರುವ ದೊಡ್ಡಣ್ಣ ಕೃನಾಲ್ ಪಾಂಡ್ಯ, ಆರ್‌ಸಿಬಿ ಇನ್‌ಸೈಡರ್ ಮಿಸ್ಟರ್ ನ್ಯಾಗ್ಸ್ ಜೊತೆಗಿನ ಸಂದರ್ಶನದಲ್ಲಿ ಮಾರ್ಮಿಕವಾಗಿ ಉತ್ತರಿಸಿದ್ದಾರೆ. ತಮ್ಮ ಸಹೋದರ ಹಾರ್ದಿಕ್ ಪಾಂಡ್ಯ ಅವರೊಂದಿಗಿನ ಭಿನ್ನಾಭಿಪ್ರಾಯದ ಬಗ್ಗೆ ನೇರವಾದ ಉತ್ತರ ನೀಡದಿದ್ದರೂ, “ಕುಟುಂಬದಲ್ಲಿ ಹಲವು ಸದಸ್ಯರಿರುತ್ತಾರೆ, ಕೆಲವೊಮ್ಮೆ ಕೆಲವರನ್ನು ಮಿಸ್ ಮಾಡಿಕೊಳ್ಳಬೇಕಾಗುತ್ತದೆ” ಎಂದು ಹೇಳುವ ಮೂಲಕ ಇಬ್ಬರ ನಡುವೆ ಬಿರುಕು ಮೂಡಿರುವ ಸುಳಿವು ನೀಡಿದ್ದಾರೆ.

ಒಂದು ಕಾಲದಲ್ಲಿ ಮುಂಬೈ ಇಂಡಿಯನ್ಸ್ ಪರ ಒಟ್ಟಾಗಿ ಕಣಕ್ಕಿಳಿಯುತ್ತಿದ್ದ ಈ ಸಹೋದರರು ಈಗ ಬೇರೆ ಬೇರೆ ತಂಡಗಳಲ್ಲಿದ್ದಾರೆ. ಹಾರ್ದಿಕ್ ಮುಂಬೈ ತಂಡವನ್ನು ಮುನ್ನಡೆಸುತ್ತಿದ್ದರೆ, ಕೃನಾಲ್ ಬೆಂಗಳೂರು ತಂಡದ ಪರ ಆಡುತ್ತಿದ್ದಾರೆ. ಆದರೆ ಇತ್ತೀಚೆಗೆ ಹಾರ್ದಿಕ್ ಅವರು ನತಾಶಾ ಅವರಿಂದ ವಿಚ್ಛೇದನ ಪಡೆದ ಬಳಿಕ ಮಹಿಕಾ ಶರ್ಮಾ ಜೊತೆಗಿನ ಒಡನಾಟ ಬೆಳೆಸಿಕೊಂಡಿರುವುದು ಮತ್ತು ಆ ನಂತರ ಹಾರ್ದಿಕ್ ವರ್ತನೆಯಲ್ಲಿ ಬದಲಾವಣೆ ಆಗಿರುವುದು ಈ ಸಹೋದರರ ನಡುವಿನ ಕಿರಿಕ್‌ಗೆ ಮುಖ್ಯ ಕಾರಣ ಎಂಬ ಚರ್ಚೆಗಳು ನಡೆಯುತ್ತಿವೆ. ಈ ಹಿಂದೆ ಮುಂಬೈ ಮತ್ತು ಆರ್‌ಸಿಬಿ ಪಂದ್ಯದಲ್ಲಿ ಹಾರ್ದಿಕ್ ವಿಕೆಟ್ ಬಿದ್ದಾಗ ಕೃನಾಲ್ ಅತಿಯಾಗಿ ಸಂಭ್ರಮಿಸಿದ್ದು ಕೂಡ ಈ ವದಂತಿಗಳಿಗೆ ಪುಷ್ಟಿ ನೀಡುವಂತಿದೆ.

ಸಂದರ್ಶನದ ವೇಳೆ ಮಿಸ್ಟರ್ ನ್ಯಾಗ್ಸ್ ಅವರು ಡಬ್ಲ್ಯೂಡಬ್ಲ್ಯೂಇ (WWE) ಖ್ಯಾತಿಯ ಕೇನ್ ಮತ್ತು ಅಂಡರ್‌ಟೇಕರ್ ಅವರ ಉದಾಹರಣೆ ನೀಡಿ, “ನಿಮ್ಮಿಬ್ಬರ ಮಧ್ಯೆ ಫೈಟ್ ನಡೆಯುತ್ತಿದೆಯೇ?” ಎಂದು ಕೇಳಿದಾಗ ಕೃನಾಲ್ “ಆಲ್ ಓಕೆ” ಎಂದು ನಗುತ್ತಲೇ ಉತ್ತರಿಸಿದ್ದಾರೆ. ಆದರೆ ಅವರ ನಗು ಮತ್ತು ಮಾತುಗಳ ಹಿಂದೆ ಅಸಮಾಧಾನದ ಛಾಯೆ ಇರುವುದು ಅಭಿಮಾನಿಗಳ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಮಾತಿಗಷ್ಟೇ ಕೃನಾಲ್ ಎಲ್ಲವೂ ಸರಿಯಿದೆ ಎಂದಿದ್ದಾರೋ ಅಥವಾ ನಿಜವಾಗಿಯೂ ಇಬ್ಬರ ನಡುವಿನ ಮನಸ್ತಾಪ ಬಗೆಹರಿದಿದೆಯೋ ಎಂಬ ಕುತೂಹಲ ಈಗ ಕ್ರಿಕೆಟ್ ವಲಯದಲ್ಲಿ ತೀವ್ರವಾಗಿದೆ.

Continue Reading
Advertisement
Latest20 minutes ago

ಹುಯ್ಯಲೆದೆಯಂತೆ ಇವತ್ತು ಗುಡುಗು ಸಹಿತ ಆಲಿಕಲ್ಲು ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

Latest21 minutes ago

ಎಸ್‌.ಟಿ. ಸಮುದಾಯಕ್ಕೆ ಶೇ.17 ಮೀಸಲಾತಿ ಉಳಿಸಿಕೊಳ್ಳಲು ಹೋರಾಟ ನಡೆಸಿ; ಕಾಂಗ್ರೆಸ್‌ ಸರ್ಕಾರಕ್ಕೆ ಬಿ.ವೈ. ವಿಜಯೇಂದ್ರ ಆಗ್ರಹ

Latest40 minutes ago

ಇದು ಕದನ ವಿರಾಮವೇ?; ಹೊರ್ಮುಜ್‌ನಲ್ಲಿ ಇರಾನ್‌ನ ಮತ್ತೊಂದು ಹಡಗಿಗೆ ತಡೆಯೊಡ್ಡಿದ ಅಮೆರಿಕ

Latest53 minutes ago

ಹೊಸ ರಾಜಕೀಯ ಪಕ್ಷ ಘೋಷಿಸಿದ ಕೆಸಿಆರ್ ಪುತ್ರಿ ಕೆ.ಕವಿತಾ; ಪಕ್ಷದ ಹೆಸರು TRS

Latest1 hour ago

ಇ-ಗಸ್ತು ಪರಿಣಾಮಕಾರಿಯಾಗಿ ಬಳಸಿ ವನ್ಯಜೀವಿ ದಾಳಿ ತಪ್ಪಿಸಿ: ಈಶ್ವರ ಖಂಡ್ರೆ ಕರೆ

Latest19 hours ago

ಇನ್ನು ಮುಂದೆ ಒಳಮೀಸಲಾತಿ ಅನ್ವಯ ಹುದ್ದೆಗಳ ಭರ್ತಿ: ಸಿಎಂ ಸಿದ್ದರಾಮಯ್ಯ ಘೋಷಣೆ

Latest19 hours ago

29 ವರ್ಷಗಳ ‘ನೋ ಕಿಸ್ ಪಾಲಿಸಿ’ ಮುರಿದ ಕಾಜೋಲ್: ಆ ಒಂದು ದೃಶ್ಯಕ್ಕಾಗಿ ಕಟ್ಟುನಿಟ್ಟಿನ ನಿಯಮ ಬದಿಗಿಟ್ಟಿದ್ದೇಕೆ?

Latest19 hours ago

ಒಳ ಮೀಸಲಾತಿ ಹಂಚಿಕೆ: ಎಡಗೈ, ಬಲಗೈ ಜಾತಿಗಳಿಗೆ ತಲಾ ಶೇ. 5.25 ಸ್ಪೃಶ್ಯ ಜಾತಿಗೆ ಶೇ.4.5 ಹಂಚಿಕೆ; ಸಚಿವ ಸಂಪುಟ ಮಹತ್ವದ ನಿರ್ಧಾರ

Latest20 hours ago

ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ, ಬಿಸಿನೆಸ್‌ನಲ್ಲೂ ಸಚಿನ್ ಅವರದ್ದೇ ಸಿಕ್ಸರ್! ತೆಂಡೂಲ್ಕರ್‌ ಒಟ್ಟು ಆಸ್ತಿ ಎಷ್ಟು ಗೊತ್ತಾ?

Latest20 hours ago

ಇಂಜಿನಿಯರಿಂಗ್‌ ಶುಲ್ಕ: ಅಂತಿಮ ನಿರ್ಧಾರ ಮಾಡಿಲ್ಲ: ಸಚಿವ ಡಾ. ಎಂ.ಸಿ. ಸುಧಾಕರ್‌

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌