ಗಾಂಧಿನಗರ: ಮುಕೇಶ್ ಅಂಬಾನಿ(Mukesh Ambani) ಪುತ್ರ ಅನಂತ್ ಅಂಬಾನಿ(Anant Ambani) ಹಾಗೂ ರಾಧಿಕಾ ಮರ್ಚೆಂಟ್ (Radhika Merchant) ಅವರ ವಿವಾಹಪೂರ್ವ(Anant Ambani wedding) ಸಮಾರಂಭದಲ್ಲಿ ಟೀಮ್ ಇಂಡಿಯಾ ಸೇರಿ ಹಲವು ವಿದೇಶಿ ಆಟಗಾರರು ತಮ್ಮ ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದಾರೆ. ಮಾಜಿ ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ(MS Dhoni) ಮತ್ತು ವಿಂಡೀಸ್ನ ಡ್ವೇನ್ ಬ್ರಾವೊ(Dwayne Bravo) ಜತೆಯಾಗಿ ದಾಂಡಿಯಾ(Dandiya) ನೃತ್ಯವಾಡಿದ ವಿಡಿಯೊ ವೈರಲ್ ಆಗಿದೆ.
ಅನಂತ್ ಅಂಬಾನಿ ವಿವಾಹಪೂರ್ವ ಸಮಾರಂಭದಲ್ಲಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮ, ಜಹೀರ್ ಖಾನ್, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಕೈರಾನ್ ಪೊಲಾರ್ಡ್, ಕೃನಾಲ್ ಪಾಂಡ್ಯ , ಸುನೀಲ್ ಗವಾಸ್ಕರ್, ರಶೀದ್ ಖಾನ್, ಸ್ಯಾಮ್ ಕರನ್, ಗ್ರೇಮ್ ಸ್ಮಿತ್ ಸೇರಿ ಇನ್ನೂ ಅನೇಕ ಕ್ರಿಕೆಟಿಗರು ಪಾಲ್ಗೊಂಡಿದ್ದರು. ಗುಜರಾತ್ನ ಜಾಮ್‌ನಗರದಲ್ಲಿ ಕಳೆದ 2 ದಿನಗಳಿಂದ ಅದ್ಧೂರಿ ವಿವಾಹಪೂರ್ವ ಸಮಾರಂಭ ನಡೆದಿದ್ದು ಇಂದು ಕೊನೆಯ ದಿನವಾಗಿದೆ. ಒಟ್ಟು ಮೂರು ದಿನಗಳ ಕಾರ್ಯಕ್ರಮ ಇದಾಗಿತ್ತು.
Video of the Day is here, Our Mahi – Sakshi and DJ Bravo Playing Dandiya !! 🥳😍#MSDhoni #WhistlePodu #Dhoni @msdhoni
— TEAM MS DHONI #Dhoni (@imDhoni_fc) March 3, 2024
🎥 via @instantbolly pic.twitter.com/TQvTiATbKE
ಧೋನಿ, ಅವರ ಪತ್ನಿ ಸಾಕ್ಷಿ ಮತ್ತು ಬ್ರಾವೋ ಗುಜರಾತಿ ಹಾಡುಗಳಿಗೆ ದಾಂಡಿಯಾ ನೃತ್ಯವಾಡಿದ ವಿಡಿಯೊ ವೈರಲ್ ಆಗಿದೆ. ಧೋನಿ ಮತ್ತು ಬ್ರಾವೊ ದಾಂಡಿಯಾವನ್ನು ಪೂರ್ಣವಾಗಿ ಆನಂದಿಸುತ್ತಿರುವುದುದನ್ನು ವಿಡಿಯೊದಲ್ಲಿ ನೋಡಬಹುದಾಗಿದೆ. ಧೋನಿ ಮತ್ತು ಬ್ರಾವೊ ಐಪಿಎಲ್ನ್ಲಲಿ ಚೆನ್ನೈ ತಂಡದ ಪರ ಹಲವು ವರ್ಷ ಆಡಿದ್ದಾರೆ. ಬ್ರಾವೊ ನಿವೃತ್ತಿಯಾಗಿದ್ದರೂ ಕೂಡ ಧೋನಿ ಇನ್ನೂ ಐಪಿಎಲ್ ಆಡುತ್ತಿದ್ದಾರೆ.
ಇದನ್ನೂ ಓದಿ IPL 2024: ಅಭ್ಯಾಸ ಆರಂಭಿಸಿದ ಹಾಲಿ ಚಾಂಪಿಯನ್ ಸಿಎಸ್ಕೆ; ಆರ್ಸಿಬಿ ಮೊದಲ ಎದುರಾಳಿ
ಕಳೆದ ವರ್ಷವೇ ಧೋನಿ ಅವರು ಐಪಿಎಲ್ಗೆ(IPL 2024) ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್ಗೂ ಗುಡ್ಬೈ ಹೇಳಲಿದ್ದಾರೆ.
ಅಭ್ಯಾಸ ಆರಂಭಿಸಿದ ಚೆನ್ನೈ ತಂಡ
ಹಾಲಿ ಚಾಂಪಿಯನ್ ಆಗಿರುವ ಚೆನ್ನೈ ತಂಡ ಈಗಾಗಲೇ 17ನೇ ಆವೃತ್ತಿಗಾಗಿ ಅಭ್ಯಾಸ ಆರಂಭಿಸಿದೆ. ಶನಿವಾರ ತಂಡದ ಹಲವು ಆಟಗಾರರು ಚೆನ್ನೈಯಲ್ಲಿ ಅಭ್ಯಾಸ ಶಿಬಿರದಲ್ಲಿ ಕಾಣಿಸಿಕೊಂಡಿದ್ದರು. ಧೋನಿ ಅವರು ಇನ್ನೆರಡು ದಿನದಲ್ಲಿ ಈ ಅಭ್ಯಾಸ ಕ್ಯಾಂಪ್ ಸೇರಲಿದ್ದಾರೆ. ಈ ಬಾರಿಯ ಆವೃತ್ತಿಗಾಗಿ ಆಟಗಾರರ ಮಿನಿ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಖರೀದಿಸಿ ತಂಡವನ್ನು ಬಲಿಷ್ಠಗೊಳಿಸಿದೆ. ಕಳೆದ ಬಾರಿಯ ಟೂರ್ನಿಯಲ್ಲಿ ಬೆರಳೆಣಿಕೆಯ ಅನುಭವಿ ಆಟಗಾರರನ್ನು ಹೊಂದಿದ್ದರೂ ಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಈ ಬಾರಿ ಬಲಿಷ್ಠವಾಗಿ ಗೋಚರಿಸಿದ ಚೆನ್ನೈ ತಂಡ ಮತ್ತೆ ಕಪ್ ಗೆಲ್ಲುವುದು ಖಚಿತ ಎಂದು ಟೂರ್ನಿ ಆರಂಭಕ್ಕೂ ಮುನ್ನವೇ ಅಭಿಮಾನಿಗಳು ಭವಿಷ್ಯ ನುಡಿಯಲಾರಂಭಿಸಿದ್ದಾರೆ. ಮಾರ್ಚ್ 22ರಿಂದ ಆರಂಭಗೊಳ್ಳಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಚೆನ್ನೈ ತಂಡ ತನ್ನ ಬದ್ಧ ಎದುರಾಳಿ ಆರ್ಸಿಬಿ ವಿರುದ್ಧ ಪಂದ್ಯವನ್ನಾಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.