Site icon Vistara News

MS Dhoni: ಸಿಂಗಂ-3 ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡ ಎಂ.ಎಸ್​. ಧೋನಿ; ಫೋಟೊ ವೈರಲ್​

MS Dhoni

#image_title

ಮುಂಬಯಿ: ಟೀಮ್​ ಇಂಡಿಯಾದ ಮಾಜಿ ಆಟಗಾರ ಮಹೇಂದ್ರ ಸಿಂಗ್(MS Dhoni)​ ಧೋನಿ 16ನೇ ಆವೃತ್ತಿಯ ಐಪಿಎಲ್‌ಗಾಗಿ(ipl 2023) ಅಭ್ಯಾಸ ನಡೆಸುತ್ತಿದ್ದಾರೆ. ಈ ಮಧ್ಯೆ ಧೋನಿ ಅವರು ಪೊಲೀಸ್ ಅಧಿಕಾರಿಯ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದು ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮಹೇಂದ್ರ ಸಿಂಗ್​ ಧೋನಿ ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಶ್ರೇಣಿಯಲ್ಲಿದ್ದಾರೆ. ಅವರು ಹಲವು ಬಾರಿ ಸೇನಾ ಸಮವಸ್ತ್ರವನ್ನು ಧರಿಸಿರುವುದು ಕಂಡುಬಂದಿದೆ. ಆದರೆ ಈ ಬಾರಿ ಜಾಹೀರಾತಿಗಾಗಿ ಧೋನಿ ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದಾರೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕೈಯಲ್ಲಿ ಗನ್​ ಹಿಡಿದು ಸೂಪರ್​ ಕಾಪ್​ ತಮಿಳಿನ ಸಿಂಗಂ ಸಿನೆಮಾದ ರೀತಿಯಲ್ಲಿ ಧೋನಿ ಬರುತ್ತಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಕಂಡ ಅಭಿಮಾನಿಗಳು ಧೋನಿ ನಾಯಕ ನಟನಾಗಿ ನಟಿಸಿರುವ ಸಿಂಗಂ-3(MS Dhoni for Singham 3) ಸಿನಿಮಾ ಶೀಘ್ರದಲ್ಲೇ ಬರಲಿದೆ ಎಂದು ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲ ಅಭಿಮಾನಿಗಳು ಧೋನಿ ಏಕೆ ಪೊಲೀಸ್ ಅಧಿಕಾರಿಯ ಯೂನಿಫಾರ್ಮ್‌ ಧರಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ MS Dhoni : ಧೋನಿ ಬ್ಯಾನರ್‌ನಡಿ ತಮಿಳು ಸಿನಿಮಾ: ‘ಎಲ್‌ಜಿಎಂ – ಲೆಟ್ಸ್ ಗೆಟ್ ಮ್ಯಾರೀಡ್’ ಟೈಟಲ್‌ ಅನಾವರಣ!

ಸದ್ಯ ಧೋನಿ ಅವರು ಚೆನ್ನೈನಲ್ಲಿ ಮುಂಬರುವ ಐಪಿಎಲ್​ಗಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಜತೆಗೆ ತಂಡದ ಆಟಗಾರರನ್ನು ಸಂಪೂರ್ಣವಾಗಿ ರೆಡಿ ಮಾಡುತ್ತಿದ್ದಾರೆ. ಇನ್ನೊಂದೆಡೆ ಈ ಬಾರಿಯ ಐಪಿಎಲ್​ ಬಳಿಕ ಧೋನಿ ಎಲ್ಲ ಮಾದರಿಯ ಕ್ರಿಕೆಟ್​ಗೆ ಗುಡ್​ ಬೈ ಹೇಳಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.

Exit mobile version