Site icon Vistara News

MS Dhoni: ಸೆಕ್ಯೂರಿಟಿ ಗಾರ್ಡ್‌ಗೆ ಬೈಕ್​ನಲ್ಲಿ ಲಿಫ್ಟ್​ ನೀಡಿದ ಧೋನಿ; ವಿಡಿಯೊ ವೈರಲ್​

ms dhoni bike ride

ರಾಂಚಿ: ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ಸೆಕ್ಯೂರಿಟಿ ಗಾರ್ಡ್‌ಗೆ(Security Guard) ಬೈಕ್​ನಲ್ಲಿ ಲಿಫ್ಟ್​ ನೀಡಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಲಾರಂಭಿಸಿದೆ. ಧೋನಿಯ ಈ ನಡೆಗೆ ಅನೇಕ ನೆಟ್ಟಿಗರು ಪ್ರಶಂಸೆಯ ಸುರಿಮಳೆಯನ್ನೇ ಸುರಿಸಿದ್ದಾರೆ. ಅಚ್ಚರಿ ಎಂದರೆ ಈ ವಿಡಿಯೊ ಸುಮಾರು 5 ವರ್ಷಗಳ ಹಿಂದಿನದ್ದು ಎಂದು ತಿಳಿದುಬಂದಿದೆ. ಅಂದು ಬೆಳಕಿಗೆ ಬಾರದ ಈ ವಿಡಿಯೊ(viral video) ಇದೀಗ ಫುಲ್​ ವೈರಲ್​ ಆಗಿದೆ.

ಧೋನಿ ಅವರಿಗೆ ಬೈಕ್​ ಎಂದರೆ ಅಚ್ಚುಮೆಚ್ಚು ಹಲವು ಬಾರಿ ಅವರು ಬೈಕ್​ನಲ್ಲಿ ಏಕಾಂಗಿಯಾಗಿ ಪ್ರಯಾಣಿಸಿದ ವಿಡಿಯೊ ವೈರಲ್​ ಆಗಿತ್ತು. ಅವರು ಬೈಕ್​ ರೈಡಿಂಗ್​ ಮಾಡಲೆಂದೇ ತಮ್ಮ ರಾಂಚಿಯಲ್ಲಿರುವ ನಿವಾಸದಲ್ಲಿ ಬೈಕ್​ ಟ್ರ್ಯಾಕ್​ ಕೂಡ ನಿರ್ಮಾಣ ಮಾಡಿದ್ದಾರೆ. ಲಾಡ್​ ಡೌನ್​ ಸಮಯದಲ್ಲಿ ಮಗಳ ಜತೆ ಇಲ್ಲಿ ಬೈಕ್ ರೈಡಿಂಗ್​ ಮಾಡುತ್ತಿರುವ ಫೋಟೊ ಮತ್ತು ವಿಡಿಯೊವನ್ನು ​ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇತ್ತೀಚೆಗೆ ಮುಕ್ತಾಯ ಕಂಡ 16ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ಧೋನಿ ಸಾರಥ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ 5ನೇ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. 16ನೇ ಆವೃತ್ತಿಯ ಐಪಿಎಲ್​ ಬಳಿಕ ಧೋನಿ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ ಎಂದು ಭಾರಿ ಸುದ್ದಿಯಾಗಿತ್ತು. ಆದರೆ ಧೋನಿ ತಮ್ಮ ನಿವೃತ್ತಿ ನಿರ್ಧಾರವನ್ನು ಮುಂದೂಡಿದ್ದು ಮುಂದಿನ ಆವೃತ್ತಿಯಲ್ಲಿ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಅವರು ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಕೆಯ ಹಾದಿಯಲ್ಲಿದ್ದಾರೆ.

ಇದನ್ನೂ ಓದಿ Viral Video: ‘ಕ್ಯಾಂಡಿ’ ಮೇಲೆ ಧೋನಿಗೆ ‘ಕ್ರಷ್’‌, ಇವರು ಆಡುವ ಗೇಮ್‌ ‌ಮೂರೇ ಗಂಟೆಯಲ್ಲಿ 36 ಲಕ್ಷ ಡೌನ್‌ಲೋಡ್‌!

ವಿಶ್ವ ಕಪ್​ನಲ್ಲಿ ಭಾರತ ತಂಡಕ್ಕೆ ಮೆಂಟರ್​ ಆಗಲಿದ್ದಾರೆ ಧೋನಿ?

28 ವರ್ಷಗಳ ಬಳಿಕ ಭಾರತ ಕ್ರಿಕೆಟ್​ ತಂಡಕ್ಕೆ ಏಕ ದಿನ ವಿಶ್ವ ಕಪ್​​(ICC World Cup 2023) ಗೆಲ್ಲಿಸಿ ಕೊಟ್ಟ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು, ಭಾರತದ ಆತಿಥ್ಯದಲ್ಲೇ ನಡೆಯುವ ಏಕದಿನ ವಿಶ್ವ ಕಪ್​ ವೇಳೆ ಟೀಮ್​ ಇಂಡಿಯಾದ(Team India Cricket) ಮೆಂಟರ್​ ಆಗಿ ಕರ್ತವ್ಯ ನಿರ್ವಹಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಧೋನಿ ಅವರನ್ನು ಮೇಂಟರ್(MS Dhoni Mentor)​ ಆಗಿ ಆಯ್ಕೆ ಮಾಡಲು ಬಿಸಿಸಿಐ ಎಲ್ಲ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ MS Dhoni: ಧೋನಿಗೂ ಇತ್ತು ಮೂಢನಂಬಿಕೆ ಮೇಲೆ ವಿಶ್ವಾಸ; ರಹಸ್ಯ ಬಯಲು ಮಾಡಿದ ಸೆಹವಾಗ್​

ಮಹೇಂದ್ರ ಸಿಂಗ್​ ಧೋನಿ ಅವರ ನಾಯಕತ್ವದಲ್ಲಿ ಟಿ20, ಏಕದಿನ ವಿಶ್ವ ಕಪ್​ ಮತ್ತು ಐಸಿಸಿ ಚಾಂಪಿಯನ್ಸ್​ ಟ್ರೋಫಿ ಗೆದ್ದ ಬಳಿಕ ಭಾತರ ಇದುವರೆಗೂ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಧೋನಿ ನಿವೃತ್ತಿ ಬಳಿಕ ಎರಡು ನಾಯಕರನ್ನು ಟೀಮ್​ ಇಂಡಿಯಾ ಕಂಡರೂ ಐಸಿಸಿ ಟ್ರೋಫಿ ಮಾತ್ರ ನುಂಗಲಾರದ ತುತ್ತಾಗಿಯೇ ಉಳಿದುಕೊಂಡಿದೆ. ಇದೀಗ ಈ ಸಮಸ್ಯೆಯನ್ನು ಹೋಗಲಾಡಿಸಲು ಧೋನಿ ಅವರ ಮೊರೆ ಹೋಗಲು ಬಿಸಿಸಿಐ ನಿರ್ಧರಿಸಿದೆ. ಅವರನ್ನು ವಿಶ್ವ ಕಪ್​ ಟೂರ್ನಿಯಲ್ಲಿ ತಂಡದ ಮೆಂಟರ್​ ಆಗಿ ನೇಮಿಸಲು ಮುಂದಾಗಿದೆ.

Exit mobile version