Site icon Vistara News

MS Dhoni: ಆಹಾರ ಸೇವಿಸಲು ಪಾಕ್​ಗೆ ತೆರಳಿ ಎಂದ ಧೋನಿ; ದೇಶಾಭಿಮಾನ ತೋರಿದ ಅಭಿಮಾನಿ

MS Dhoni

ರಾಂಚಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ(MS Dhoni) ಪಾಕಿಸ್ತಾನಿ ಆಹಾರದ(Pakistan Food) ಅಭಿಮಾನಿಯಾಗಿದ್ದಾರೆ ಎನ್ನುವುದು ತಿಳಿದುಬಂದಿದೆ. ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುವ ವೇಳೆ ಧೋನಿ ಈ ವಿಚಾರವನ್ನು ತಿಳಿಸಿದ್ದಾರೆ. ಜತೆಗೆ ಅಭಿಮಾನಿಗೆ ಪಾಕ್​ ಆಹಾರವನ್ನು ಸೇವಿಸುವಂತೆ ಸಲಹೆಯನ್ನೂ ನೀಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಅಭಿಮಾನಿಯೊಬ್ಬರು ಧೋನಿ ಬಳಿ ನಿಮ್ಮಗೆ ಇಷ್ಟದ ಆಹಾರ ಯಾವುದು ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಧೋನಿ, ಪಾಕಿಸ್ತಾನದ ಆಹಾರ ಪದ್ಧತಿ ಬಲು ಇಷ್ಟ. ನೀವು ಕೂಡ ಒಮ್ಮೆ ಪಾಕ್​ಗೆ ಭೇಡಿ ನೀಡಿ ಅಲ್ಲಿಒನ ಆಹಾರವನ್ನು ಸೇವಿಸಿ ಎಂದು ಹೇಳಿದ್ದಾರೆ. ಪಾಕ್​ ಎನ್ನುವಾಗಲೇ ಅಭಿಮಾನಿ ಜೋರಾಗಿ ನಕ್ಕಿದ್ದಾರೆ. ಇದೆಲ್ಲ ವಿಡಿಯೊದಲ್ಲಿ ಸೆರೆಯಾಗಿದೆ.

ಅಷ್ಟಕ್ಕೂ ಧೋನಿ ಅವರು ಪಾಕಿಸ್ತಾನಕ್ಕೆ ಹೋಗಿ ಯಾವಾಗ ಆಹಾರ ಸೇವಿಸಿದರು ಎನ್ನುವ ಕುತೂಹಲ ಮತ್ತು ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ. ಧೋನಿ ಅವರು ಭಾರತ ತಂಡದ ಭಾಗವಾಗಿ ಈ ಹಿಂದೆ ಪಾಕಿಸ್ತಾನಕ್ಕೆ ಭೇಟಿ ನೀಡಿದ ವೇಳೆ ಅಲ್ಲಿನ ಸ್ಥಳೀಯ ಆಹಾರವನ್ನು ಸವಿದಿದ್ದರು. ಇದು ಧೋನಿಗೆ ಇಷ್ಟವಾಗಿತ್ತು. ಇದೇ ಕಾರಣಕ್ಕೆ ಅವರು ಪಾಕ್​ ಆಹಾರ ಇಷ್ಟ ಎಂದಿದ್ದಾರೆ.

ದೇಶಾಭಿಮಾನ ತೋರಿದ ಅಭಿಮಾನಿ

ಧೋನಿ ಅವರು ಅಭಿಮಾನಿಗೆ ಆಹಾರ ಸೇವಿಸಲು ಒಮ್ಮೆ ಪಾಕಿಸ್ತಾನಕ್ಕೆ ಹೋಗಬೇಕು ಎಂದು ಹೇಳಿದಾಗ ಇದನ್ನು ಈ ಅಭಿಮಾನಿ ತಿರಸ್ಕರಿಸಿದ್ದಾರೆ. “ನೀವು ಒಳ್ಳೆಯ ಆಹಾರವನ್ನು ಸೂಚಿಸಿದರೂ ನಾನು ಅಲ್ಲಿಗೆ ಹೋಗುವುದಿಲ್ಲ, ನನಗೆ ಆಹಾರವೆಂದರೆ ಇಷ್ಟ, ಆದರೆ ನಾನು ಅಲ್ಲಿಗೆ ಹೋಗುವುದಿಲ್ಲ” ಎಂದು ಹೇಳುವ ಮೂಲಕ ದೇಶಾಭಿಮಾನ ತೋರಿದ್ದಾರೆ.

ನಿವೃತ್ತಿ ಬಳಿಕ ಸೇನೆಯಲ್ಲಿ ಕೆಲಸ ಮಾಡುವೆ…

ಧೋನಿ(MS Dhoni) ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಕೆಳವು ವರ್ಷಗಳಾಗಿವೆ. ಕೇವಲ ಐಪಿಎಲ್​ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಮುಂದಿನ ವರ್ಷ ನಡೆಯುವ ಟೂರ್ನಿಯ ಬಳಿಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ನಿವೃತ್ತಿ ಬಳಿಕ ಏನು ಮಾಡಲಿದ್ದೀರ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಧೋನಿ. ಸದ್ಯಕ್ಕೆ ನಾನು ಕ್ರಿಕೆಟ್​ ಬಗ್ಗೆ ಮಾತ್ರ ಯೋಚಿಸುತ್ತಿದ್ದೇನೆ. ಆದರೆ ಒಂದಂತು ನಿಜ, ಕ್ರಿಕೆಟ್​ನಿಂದ ನಿವೃತ್ತಿಯಾದ ಬಳಿಕ ಕೆಲ ಕಾಲ ಆರ್ಮಿಯಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಅದು ನನ್ನ ಜೀವನದ ಪ್ರಮುಖ ಗುರಿ ಮಾಹಿ ಹೇಳಿದ್ದರು.

ಇದನ್ನೂ ಓದಿ MS Dhoni: ಉದ್ದನೆಯ ಕೇಶ ವಿನ್ಯಾಸದ ಹಿಂದಿನ ಕಾರಣ ತಿಳಿಸಿದ ಧೋನಿ

“ನಾನು ಇನ್ನೂ ಕ್ರಿಕೆಟ್ ಆಡುತ್ತಿದ್ದೇನೆ. ಕ್ರಿಕೆಟ್ ನಂತರ ನಾನು ಏನು ಮಾಡುತ್ತೇನೆ ಎಂದು ನೋಡಲು ತುಂಬಾ ಆಸಕ್ತಿದಾಯಕವಾಗಿದೆ. ನಾನು ಖಚಿತವಾಗಿ ಭಾವಿಸುತ್ತೇನೆ, ನಾನು ಸೇನೆಯೊಂದಿಗೆ ಸ್ವಲ್ಪ ಹೆಚ್ಚು ಸಮಯ ಕಳೆಯಲು ಬಯಸುತ್ತೇನೆ, ಏಕೆಂದರೆ ಕಳೆದ ಕೆಲವು ವರ್ಷಗಳಿಂದ ನಾನು ಅದನ್ನು ಮಾಡಲು ಸಾಧ್ಯವಾಗಲಿಲ್ಲ” ಎಂದು ಧೋನಿ ಹೇಳಿದ್ದರು. ಧೋನಿ ಭಾರತದ ಅರೆ ಸೇನಾಪಡೆಯಲ್ಲಿ ಗೌರವ ಲೆಫ್ಟಿನೆಂಟ್‌ ಕರ್ನಲ್‌ ಆಗಿದ್ದಾರೆ. 

Exit mobile version