Site icon Vistara News

MS Dhoni: ಅಭ್ಯಾಸದ ವೇಳೆ ಹಲವು ಹೆಲಿಕಾಪ್ಟರ್ ಶಾಟ್ ಹೊಡೆದ ಧೋನಿ; ವಿಡಿಯೊ ವೈರಲ್​

MS Dhoni Practices Helicopter Shot

ಚೆನ್ನೈ: ವಿಶ್ವ ಕ್ರಿಕೆಟ್​ನಲ್ಲಿ ಹೊಸ ಹೊಸ ಬ್ಯಾಟಿಂಗ್ ಶಾಟ್​ಗಳು ಪರಿಚಯ ಆಗುತ್ತಲೇ ಇವೆ. ಇದರಲ್ಲಿ ಮಹೇಂದ್ರ ಸಿಂಗ್​ ಧೋನಿ(MS Dhoni) ಪರಿಚಯಿಸಿದ ‘ಹೆಲಿಕಾಪ್ಟರ್ ಶಾಟ್’(helicopter shot) ಕೂಡ ಒಂದು. ಅನೇಕರು ಈ ಶಾಟ್​ ಹೊಡೆಯಲು ಪ್ರಯತ್ನಿಸಿದರೂ ಸಫಲರಾಗಿದ್ದು ಮಾತ್ರ ಕೆಲವರಷ್ಟೇ. ಆದರೂ ಧೋನಿಯ ರೇಂಜ್​ಗೆ ಈ ಶಾಟ್​ ಪರಿಪೂರ್ಣವಾಗಿ ಯಾರಿಂದಲೂ ಹೊಡೆಯಲು ಸಾಧ್ಯವಿಲ್ಲ. ಧೋನಿ ಈ ಶಾಟ್​ ಹೊಡೆಯುವುದನ್ನು ನೋಡುವುದೇ ಕಣ್ಣಿಗೆ ಹಿತ. ಇದೀಗ 17ನೇ ಆವೃತ್ತಿಯ ಐಪಿಎಲ್​ನಲ್ಲಿಯೂ ಧೋನಿ ತಮ್ಮ ನೆಚ್ಚಿನ ಹೆಲಿಕಾಪ್ಟರ್ ಶಾಟ್(MS Dhoni helicopter shot) ಹೊಡೆಯಲು ಸಕಲ ಸಿದ್ಧತೆ ನಡೆಸಿದ್ದಾರೆ. ಬುಧವಾರ ನಡೆದ ನೆಟ್‌ ಪ್ರ್ಯಾಕ್ಟೀಸ್​ನಲ್ಲಿ ಧೋನಿ ಹಲವು ಹೆಲಿಕಾಪ್ಟರ್ ಶಾಟ್ ಹೊಡೆದಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಧೋನಿ ಅವರು ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಬೌಲಿಂಗ್​ ಕೋಚ್​ ಆಗಿರುವ ಡ್ವೇನ್​ ಬ್ರಾವೊ ಅವರ ಎಸೆತಕ್ಕೆ ತಮ್ಮ ನೆಚ್ಚಿನ ಹೆಲಿಕಾಪ್ಟರ್ ಶಾಟ್ ಮೂಲಕ ಸಿಕ್ಸರ್ ಬಾರಿಸಿದರು. ಸಿಕ್ಸರ್​ ಬಾರಿಸಿದ ತಕ್ಷಣ ಧೋನಿ ಸಂಭ್ರಮಾಚರಿಸಿದರೆ, ಅತ್ತ ಬ್ರಾವೊ ಸಿಕ್ಸರ್​ ಚಚ್ಚಿಸಿಕೊಂಡ ಆಘಾತದಲ್ಲಿ ತಲೆ ಮೇಲೆ ಕೈ ಹೊತ್ತುಕೊಂಡಿದ್ದಾರೆ. ಈ ಎಲ್ಲ ದೃಶ್ಯವನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ IPL 2024: ದೇಶದ 50 ನಗರಗಳಲ್ಲಿ ಐಪಿಎಲ್‌ ಫ್ಯಾನ್‌ ಪಾರ್ಕ್‌; ಕರ್ನಾಟಕ ಇದೆಯೇ?

ಧೋನಿ ಅವರು ಇಂದು ನಡೆದ ನೆಟ್‌ ಪ್ರ್ಯಾಕ್ಟೀಸ್​ನಲ್ಲಿ ಹೆಚ್ಚಾಗಿ ಹೆಲಿಕಾಪ್ಟರ್ ಶಾಟ್ ಹೊಡೆತಗಳ ಅಭ್ಯಾಸವನ್ನೇ ಮಾಡಿದರು. ಅವರ ಅಭ್ಯಾಸವನ್ನು ಗಮನಿಸುವಾಗ ಈ ಬಾರಿಯ ಐಪಿಎಲ್​ನಲ್ಲಿ ಅವರ ಬ್ಯಾಟ್​​ನಿಂದ ಹಲವು ಹೆಲಿಕಾಪ್ಟರ್ ಹಾರಾಟವಾಗುವ ಸಾಧ್ಯತೆಯೊಂದು ಕಂಡುಬಂದಿದೆ.


ಎಂ.ಎಸ್.ಧೋನಿ, ಕ್ಯಾಪ್ಟನ್‌ ಕೂಲ್‌, ಮಾಹಿ, ತಾಲಾ… ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುವ ಮಹೇಂದ್ರ ಸಿಂಗ್‌ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಧೋನಿ(MS Dhoni) ಕೂಡ ತಮ್ಮ ಅಭಿಮಾನಿಗಳ ಮೇಲೆ ಹೆಚ್ಚಿನ ಪ್ರೀತಿ ತೋರುತ್ತಾರೆ. ಅಭಿಮಾನಿಗಳ ಒತ್ತಾಸೆಯಕ್ಕೆ ಮಣಿದು ತಮ್ಮ ಐಪಿಎಲ್​ ನಿವೃತ್ತಿಯನ್ನು ಕೂಡ ಮುಂದೂಡಿದ್ದರು. ಈ ಬಾರಿ ನಿವೃತ್ತಿಯಾಗುವುದು ಖಚಿತ.

ಹಾಲಿ ಚಾಂಪಿಯನ್​ ಆಗಿರುವ ಚೆನ್ನೈ(chennai super kings) ತಂಡ ಆರ್​ಸಿಬಿ ವಿರುದ್ಧ ಮಾರ್ಚ್ 22ರಂದು ನಡೆಯುವ ಉದ್ಘಾಟನ ಪಂದ್ಯವನ್ನಾಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ಕಳೆದ ಬಾರಿಯ ಐಪಿಎಲ್ ಟೂರ್ನಿಯುದ್ದಕ್ಕೂ ಧೋನಿ ಕಾಲಿನ ಗಾಯಕ್ಕೆ ತುತ್ತಾಗಿದ್ದರೂ ಆಡಿದ್ದರು. ನೋವು ನಿವಾರಕ ಪ್ಲಾಸರ್​ಗಳನ್ನು ಧರಿಸಿ ಆಡಿದ್ದರು. ಟೂರ್ನಿ ಮುಗಿದ ಬಳಿಕ ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ತಮ್ಮ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ಉತ್ತಮ ಫಿಟ್​ನೆಸ್​ ಹೊಂದಿರುವ ಧೋನಿ ಉದ್ದನೆಯ ಕೂದಲು ಕೂಡ ಬಿಟ್ಟಿದ್ದು ಕ್ರಿಕೆಟ್​ಗೆ ಪದಾರ್ಪಣೆ ಮಾಡುವಾಗ ಇದ್ದ ಲುಕ್​ನಲ್ಲಿ ತಮ್ಮ ಕೊನೆಯ ಐಪಿಎಲ್​ ಆಡಲು ಸಿದ್ಧರಾಗಿ ನಿಂತಿದ್ದಾರೆ.

Exit mobile version