Site icon Vistara News

MS Dhoni : ಧೋನಿಯ ಹಳೆಯ ಜಾಬ್ ಆಫರ್ ಲೆಟರ್ ವೈರಲ್; ಸಂಬಳ ನೋಡಿ ಅಭಿಮಾನಿಗಳಿಗೆ ಅಚ್ಚರಿ!

MS Dhoni

ಚೆನ್ನೈ: ಎಂಎಸ್ ಧೋನಿ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು. ಪ್ರಸ್ತುತ, ಧೋನಿ ಅವರ ನಿವ್ವಳ ಆದಾಯ 1040 ಕೋಟಿ ರೂಪಾಯಿ ಎಂದು ವರದಿಯೊಂದು ಹೇಳಿದೆ. ವಿರಾಟ್​ ಕೊಹ್ಲಿ ಧೋನಿಗಿಂತ ಒಂದು ಹೆಜ್ಜೆ ಮುಂದಿದ್ದು. 1050 ಕೋಟಿ ರೂ.ಗಳ ನಿವ್ವಳ ಆಸ್ತಿ ಹೊಂದಿದ್ದಾರೆ. ಧೋನಿ ಭಾರತ ಕ್ರಿಕೆಟ್​ ತಂಡವನ್ನು ಮುನ್ನಡೆಸಿದ ಶ್ರೇಷ್ಠ ನಾಯಕರಲ್ಲಿ ಒಬ್ಬರೆಂದು ಕರೆಯಲ್ಪಡುವ ಎಂಎಸ್ ಬಿಸಿಸಿಐನಿಂದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದರು . ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಾತ್ರವಲ್ಲ ಐಪಿಎಲ್​ನಲ್ಲಿ ಸಿಎಸ್​ಕೆ ತಂಡವನ್ನು ಮುನ್ನಡೆಸಿದ್ದಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ಮಹೇಂದ್ರ ಸಿಂಗ್ ಧೋನಿಗೆ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ.

ಏತನ್ಮಧ್ಯೆ, ಇಂಡಿಯಾ ಸಿಮೆಂಟ್ಸ್ ಸಂಸ್ಥೆಯ ಉಪಾಧ್ಯಕ್ಷ ಹುದ್ದೆಗೆ ಧೋನಿಗೆ ನೀಡಲಾದ ಹಳೆಯ ಆಫರ್ ಲೆಟರ್ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಕ್ರಿಕೆಟ್ ಅಭಿಮಾನಿಗಳಿಗೆ ಆಶ್ಚರ್ಯವೆಂದರೆ, ಈ ಕೆಲಸಕ್ಕಾಗಿ ಭಾರತದ ಮಾಜಿ ನಾಯಕನಿಗೆ ನೀಡಲಾದ ಸಂಬಳ ಕೇವಲ 43,000 ರೂಪಾಯಿ. ಅಷ್ಟೊಂದು ಸಣ್ಣ ಮೊತ್ತಕ್ಕೆ ಅವರು ಸ್ಟಾರ್ ಆಟಗಾರ ಕೆಲಸ ಮಾಡಿದ್ದಾರೆಯೇ ಎಂಬ ಪ್ರಶ್ನೆಗಳು ಎದ್ದಿವೆ.

ಎಂಎಸ್ ಧೋನಿಗೆ ಆಫರ್ ಲೆಟರ್​ನಲ್ಲಿ ಹೈಲೈಟ್ ಮಾಡಲಾದ ಇತರ ವೈಶಿಷ್ಟ್ಯಗಳೆಂದರೆ ಚೆನ್ನೈನಲ್ಲಿದ್ದಾಗ 20,400 ರೂಪಾಯಿಗಳ ಎಚ್​ಆರ್​ಎ ನೀಡಲಾಗಿತ್ತು. ಚೆನ್ನೈನಲ್ಲಿ ತಿಂಗಳಿಗೆ 8,400 ರೂಪಾಯಿ, ಬೇರೆಡೆ 8,000 ರೂಪಾಯಿ ತಿಂಗಳಿಗೆ 60,000 ರೂ.ಗಳ ವಿಶೇಷ ಭತ್ಯೆ, ಮತ್ತು ಕೊನೆಯದಾಗಿ ಶಿಕ್ಷಣ . ಪತ್ರಿಕೆ ವೆಚ್ಚಗಳು 175 ರೂಪಾಯಿ ನೀಡಲಾಗಿತ್ತು.

ಇಂಡಿಯಾ ಸಿಮೆಂಟ್ಸ್ ಕಂಪನಿ ಬಿಲಿಯನೆರ್ ಎನ್ ಶ್ರೀನಿವಾಸನ್ ಒಡೆತನದ ಕಂಪನಿಯಾಗಿದ್ದು. ಅವರೇ ಸಿಎಸ್​ಕೆ ಫ್ರಾಂಚೈಸಿಯ ಮಾಲೀಕರಾಗಿದ್ದಾರೆ. ಎಂಎಸ್ ಧೋನಿಗೆ ತಿಂಗಳಿಗೆ 43,000 ರೂ.ಗಳ ಕೆಲಸವನ್ನು ನೀಡಿದ ವರ್ಷವೆ ಅವರನ್ನು ಚೆನ್ನೈ 8.82 ಕೋಟಿ ರೂಪಾಯಿ ನೀಡಿ ತಂಡದಲ್ಲಿ ಉಳಿಸಿಕೊಂಡಿತ್ತು.

ಇದನ್ನೂ ಓದಿ : MS Dhoni : ಧೋನಿ ಮತ್ತು ಜಡೇಜಾ ನಡುವೆ ಮನಸ್ತಾಪ ಇದೆಯೇ? ಅಂಬಾಟಿ ರಾಯುಡು ಏನು ಹೇಳ್ತಾರೆ ಕೇಳಿ

ಈ ಪತ್ರವನ್ನು ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಭ್ರಷ್ಟಾಚಾರದ ಆರೋಪದ ಮೇಲೆ ನೀರವ್ ಮೋದಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿಷೇಧಿಸಿತ್ತು. ಇದೀಗ ಭಾರತಿಂದ ಪರಾರಿಯಾಗಿ ಇಂಗ್ಲೆಂಡ್​ನಲ್ಲಿದ್ದಾರೆ.

Exit mobile version