Site icon Vistara News

MS Dhoni: ಈಡೇರಿದ ಶತಾಯುಷಿ ಅಭಿಮಾನಿಯ ಆಸೆ; ಧೋನಿ ಭೇಟಿಯಾಗಿ ವಿಶೇಷ ಉಡುಗೊರೆ ಪಡೆದ ರಾಮದಾಸ್

MS Dhoni

ಚೆನ್ನೈ: ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ಹಾಗೂ ಮಹೇಂದ್ರ ಸಿಂಗ್​ ಧೋನಿಯ(MS Dhoni) ಅಪಟ್ಟ ಅಭಿಮಾನಿಯಾಗಿರುವ 103 ವರ್ಷದ(103-year-old CSK fan) ಎಸ್ ರಾಮದಾಸ್(S Ramdas) ಅವರು ಕೊನೆಗೂ ತಮ್ಮ ಬಯಕೆಯಂತೆ ಧೋನಿ ಅವರನ್ನು ಭೇಟಿ ಮಾಡಿದ್ದಾರೆ. ಇದೇ ವೇಳೆ ಧೋನಿ ಈ ಶತಾಯುಷಿ ಅಭಿಮಾನಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಈ ವಿಡಿಯೊವನ್ನು ಚೆನ್ನೈ ಸೂಪರ್​ ಕಿಂಗ್ಸ್​ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ.

ಕೆಲವು ದಿನಗಳ ಹಿಂದೆ ಎಸ್ ರಾಮದಾಸ್ ಅವರು ಮಗನ ಬಳಿ ಮಾತನಾಡುವ ವೇಳೆ, ಚೆನ್ನೈ ಸೂಪರ್ ಕಿಂಗ್ಸ್​ನ ಪಂದ್ಯ ಮತ್ತು ಧೋನಿಯನ್ನು ನೋಡಲು ರಾಜಧಾನಿ ದೆಹಲಿಯವರೆಗೂ ನಡೆದುಕೊಂಡು ಹೋಗಲು ಸಿದ್ಧ ಎಂದು ಹೇಳಿದ್ದರು. ಧೋನಿಯನ್ನು ಮತ್ತು ಚೆನ್ನೈ ಪಂದ್ಯವನ್ನು ನೋಡುವ ಅಪ್ಪನ ಈ ಬಯಕೆಯನ್ನು ಈಡೇರಿಸುವುದಾಗಿ ಮಗ ಮಾತು ಕೊಟ್ಟಿದ್ದರು. ಚೆನ್ನೈನಲ್ಲಿ ನಡೆಯುವ ಪಂದ್ಯದ ಟಿಕೆಟ್​ ಖರೀದಿಸಿ ಪಂದ್ಯ ತೋರಿಸುತ್ತೇನೆ ಎಂದು ಹೇಳಿದ್ದರು. ಕೊಟ್ಟ ಮಾತಿನಂತೆ ಮಗ ಅಪ್ಪನಿಗೆ ಚೆಪಾಕ್​ನಲ್ಲಿ ನಡೆದ ಚೆನ್ನೈ ಮತ್ತು ಪಂಜಾಬ್​ ವಿರುದ್ಧದ ಪಂದ್ಯಕ್ಕೆ ಕರೆದುಕೊಂಡು ಹೋಗಿದ್ದಾರೆ.

ಪಂದ್ಯ ಮುಕ್ತಾಯಕ ಬಳಿಕ ಈ ವಿಶೇಷ ಅಭಿಮಾನೊಯನ್ನು ಧೋನಿ ಡ್ರೆಸ್ಸಿಂಗ್​ ರೋಮ್​ನಲ್ಲಿ ಭೇಟಿಯಾಗಿದ್ದಾರೆ. ಧೋನಿ ತಮ್ಮ ಜೆರ್ಸಿಯಲ್ಲಿ “ನಿಮ್ಮ ಈ ಬೆಂಬಲಕ್ಕೆ ಧನ್ಯವಾದಗಳು ತಾತ” ಎಂದು ಬರೆದು ತಮ್ಮ ಹಸ್ತಾಕ್ಷರ ಹಾಕಿ ಜೆರ್ಸಿಯನ್ನು ರಾಮದಾಸ್​ಗೆ ನೀಡಿದ್ದಾರೆ. ಇದೇ ವೇಳೆ ರಾಮದಾಸ್ ನಿಮ್ಮನ್ನು ನೋಡಿ ತುಂಬಾ ಖಷಿಯಾಯಿತು. ನೀವೊಬ್ಬರು ಗ್ರೇಟ್​ ಕ್ರಿಕೆಟರ್​ ಎಂದು ಹಾರೈಸಿದರು. ರಾಮ್​ದಾಸ್​ ಜತೆ ಅರ ಪತ್ನಿಯೂ ಜತೆಗಿದ್ದರು. ಚೆನ್ನೈ ಫ್ರಾಂಚೈಸಿ ವತಿಯಿಂದ ರಾಮದಾಸ್ 103 ಎಂದು ಬರೆದ ಚೆನ್ನೈ ತಂಡದ ಜೆರ್ಸಿಯನ್ನು ವಿಶೇಷ ಉಡುಗೊರೆಯಾಗಿ ನೀಡಲಾಯಿತು.

ಇದನ್ನೂ ಓದಿ IPL 2024 Points Table: ರೋಚಕ 1 ರನ್ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಹೈದರಾಬಾದ್​

ಬ್ರಿಟಿಷ್ ಮಿಲಿಟರಿಯ ಸೈನ್ಯದ ಭಾಗವಾಗಿದ್ದ ರಾಮದಾಸ್ ಕ್ರಿಕೆಟ್ ಆಡಲು ಹೆದರುತ್ತಿದ್ದರಂತೆ. ಆದರೆ ಸಿಎಸ್‌ಕೆ ಜರ್ಸಿ ಧರಿಸಿ ಟಿವಿ ಮುಂದೆ ಕುಳಿತು ಐಪಿಎಲ್ ಆಟವನ್ನು ನೋಡಲು ಇಷ್ಟಪಡುತ್ತೇನೆ. ಒಮ್ಮೆಯಾದರೂ ಧೋನಿಯನ್ನು ಭೇಟಿಯಾಗಬೇಕು ಎಂದು ಹೇಳಿದ್ದ ವಿಡಿಯೊವನ್ನು ಕೂಡ ಚೆನ್ನೈ ಫ್ರಾಂಚೈಸಿ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿತ್ತು.

ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ಹೀಗಾಗಿ ಧೋನಿ ಅವರ ಬ್ಯಾಟಿಂಗ್​ ಕುಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಪ್ರತಿ ಪಂದ್ಯದ ವೇಳೆಯೂ ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತಾರೆ.

Exit mobile version