Site icon Vistara News

IPL 2023 : ಚೆನ್ನೈ ತಲುಪಿದ ಎಮ್​ಎಸ್​ ಧೋನಿ, ಅದ್ಧೂರಿ ಸ್ವಾಗತ ನೀಡಿದ ಯೆಲ್ಲೋ ಆರ್ಮಿ

MS Dhoni reached Chennai, Yellow Army gave a grand welcome

#image_title

ಚೆನ್ನೈ: ಭಾರತ ತಂಡದ ಮಾಜಿ ನಾಯಕ ಹಾಗೂ ಐಪಿಎಲ್​ನ ಸ್ಟಾರ್​ ಆಟಗಾರ ಮಹೇಂದ್ರ ಸಿಂಗ್​ ಧೋನಿ ಮುಂದಿನ ಆವೃತ್ತಿಯ ಐಪಿಎಲ್​ಗಾಗಿ ಚೆನ್ನೈ ತಲುಪಿದ್ದಾರೆ. ಅಲ್ಲಿ ಅವರಿಗೆ ಭರ್ಜರಿ ಸ್ವಾಗತ ದೊರಕಿದೆ. ಈ ಮೂಲಕ ಮಾರ್ಚ್​ ತಿಂಗಳ ಅಂತ್ಯದಲ್ಲಿ ಆರಂಭವಾಗಲಿರುವ ಐಪಿಎಲ್​ಗೆ ಅವರು ಸಿದ್ಧತೆ ಆರಂಭಿಸಿದ್ದಾರೆ. ಆದರೆ, ಅವರಿಗೆ ಚೆನ್ನೈನಲ್ಲಿ ದೊರಕಿದ ಸ್ವಾಗತಕ್ಕೆ ಎಲ್ಲರೂ ಅಚ್ಚರಿಗೆ ಒಳಗಾಗಿದ್ದಾರೆ. ಧೋನಿ ಚೆನ್ನೈಗೆ ಬಂದಿರುವ ಫೋಟೋವನ್ನು ಚೆನ್ನೈ ಸೂಪರ್​ ಕಿಂಗ್ಸ್ ತಂಡ ತನ್ನ ಅಧಿಕೃತ ಟ್ವಿಟ್​ ಖಾತೆಯಲ್ಲಿ ಪ್ರಕಟಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್​ ಟ್ವೀಟ್​ನಲ್ಲಿ ಏನಿದೆ?

41 ವರ್ಷದ ಮಹೇಂದ್ರ ಸಿಂಗ್​ ಧೋನಿ ಐಪಿಎಲ್​ನ ಎರಡನೇ ಯಶಸ್ವಿ ನಾಯಕ. ಅವರು ಚೆನ್ನೈ ತಂಡಕ್ಕೆ ನಾಲ್ಕು ಟ್ರೋಫಿಗಳನ್ನು ತಂದುಕೊಟ್ಟಿದ್ದಾರೆ. 2008ರಲ್ಲಿ ಅವರು ಚೆನ್ನೈ ತಂಡವನ್ನು ಸೇರಿಕೊಂಡ ಬಳಿಕ ಆ ತಂಡದ ಅವಿಭಾಜ್ಯ ಅಂಗ ಎನಿಸಿಕೊಂಡಿದ್ದರು. ಜತೆಗೆ ತಮಿಳುನಾಡಿನಲ್ಲಿ ದೊಡ್ಡ ಮಟ್ಟದ ಅಭಿಮಾನಿ ಬಗಳವನ್ನೂ ಹೊಂದಿದ್ದಾರೆ.

2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಫೈನಲ್​ನಲ್ಲಿ ಕೋಲ್ಕೊತಾ ನೈಟ್​ ರೈಡರ್ಸ್​ ತಂಡವನ್ನು ಸೋಲಿಸಿ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಆದರೆ, 2022ರಲ್ಲಿ ಜಡೇಜಾಗೆ ನಾಯಕತ್ವ ನೀಡಲಾಗಿತ್ತು. ಆದರೆ, ತಂಡ 9ನೇ ಸ್ಥಾನ ಪಡೆದುಕೊಂಡಿತ್ತು.

ಇದನ್ನೂ ಓದಿ : Deepak Chahar : ದೀಪಕ್​ ಚಾಹರ್​ ಐಪಿಎಲ್​ಗೆ ಮೊದಲ ಫಿಟ್​, ಸಿಎಸ್​ಕೆ ಪರ ಆಡಲಿದ್ದಾರೆ ಮಾರಕ ವೇಗಿ

2023ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಮಾರ್ಚ್​ 31ರಂದು ನಡೆಯುವ ಮೊದಲ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್​ ಗುಜರಾತ್​ ಟೈಟನ್ಸ್ ವಿರುದ್ಧ ನಡೆಯಲಿದೆ. ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಈ ಪಂದ್ಯ ಅಯೋಜನೆಗೊಂಡಿದೆ. ಇದೇ ವೇಳೆ ಈ ಬಾರಿ ಹೋಮ್​ ಮತ್ತು ಅವೇ ಮಾದರಿಯೂ ಬಂದಿದೆ. ಹೀಗಾಗಿ ಚೆನ್ನೈ ತಂಡ ಮತ್ತೆ ಚೆಪಾಕ್​ ಸ್ಟೇಡಿಯಮ್​ನಲ್ಲಿ ಆಡಲಿದೆ.

Exit mobile version