Site icon Vistara News

MS Dhoni : ಅಜ್ಜಿ ಮನೆಗೆ ಹೋದ ಧೋನಿ ಸಿಕ್ಕಿತು ವಿಶೇಷ ಸ್ವಾಗತ, ಯಾವ ಊರು ಅದು?

MS Dhoni

ಬೆಂಗಳೂರು: ಎಂಎಸ್ ಧೋನಿ (MS Dhoni) ಅಂತಾರಾಷ್ಟ್ರೀಯ ಕ್ರಿಕೆಟ್ ಆಡದಿರಬಹುದು. ಆದರೆ, ಅವರ ಒಂದು ವಿಡಿಯೊ ಇಂಟರ್ನೆಟ್​ಗೆ ಬಂದರೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಶ್ವಕಪ್ ಫೈನಲ್​ಗೆ ಪ್ರವೇಶಿಸುವ ಮೂಲಕ ಭಾರತ ತಂಡವು ಫುಲ್ ಸುದ್ದಿಯಲ್ಲಿರುವ ಜತೆಗೆ ಧೋನಿಯೂ ಸುದ್ದಿಯಲ್ಲಿದ್ದಾರೆ. ಯಾಕೆಂದರೆ ಸಿಎಸ್​ಕೆ ನಾಯಕ ಪ್ರಸ್ತುತ ಉತ್ತರಾಖಂಡದ ತಮ್ಮ ಹುಟ್ಟೂರಾದ ಲ್ವಾಲಿ ಎಂಬ ಹಳ್ಳಿಗೆ ಪತ್ನಿ ಸಾಕ್ಷಿ ಧೋನಿ ಅವರೊಂದಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಹಳ್ಳಿಯ ಮಂದಿಯ ಜತೆಗೆ ಕುಳಿತು ಮಾತನಾಡುವ ವಿಡಿಯೊ ವೈರಲ್ ಆಗಿದೆ.

ಎಂಎಸ್ ಧೋನಿ ಅಜ್ಜಿ ಮನೆಗೆ ಬರುತ್ತಿದ್ದಂತೆ ಅವರನ್ನು ಗುರುತಿಸಿದ ಗ್ರಾಮಸ್ಥರು ತಕ್ಷಣವೇ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದಾರೆ. ಲೆಜೆಂಡರಿ ಕ್ರಿಕೆಟಿಗನೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಎಂದಿನಂತೆ, ವಿಕೆಟ್ ಕೀಪರ್ ಬ್ಯಾಟರ್​ ಗ್ರಾಮಸ್ಥರ ವಿನಂತಿಯಂತೆ ಫೋಟೋ ಕ್ಲಿಕ್ಕಿಸಲು ಒಪ್ಪಿಕೊಂಡಿದ್ದಾರೆ. ಧೋನಿಯ ಈ ಸನ್ನೆ ಶೀಘ್ರದಲ್ಲೇ ವೈರಲ್ ಆಯಿತು. ಧೋನಿಯ ಅಭಿಮಾನಿಗಳು ಮತ್ತೊಮ್ಮೆ ಅವರ ಸರಳತೆ ಮತ್ತು ವಿನಮ್ರತೆಗೆ ಮೆಚ್ಚಿ ಮಾತನಾಡಿದರು.

ಎಂ.ಎಸ್. ಧೋನಿ, ಜಗತ್ತು ಸುತ್ತುವ ವೇಳೆ ತಮ್ಮ ಉತ್ಸಾಹ ಪ್ರದರ್ಶಿಸುತ್ತಾರೆ. 41 ವರ್ಷದ ಅವರು ಭಾರತದ ನಾನಾ ಕಡೆಗೆ ಪ್ರಯಾಣ ಮಾಡುತ್ತಿರುತ್ತಾರೆ. ಧೋನಿ ಆಗಾಗ್ಗೆ ತಮ್ಮ ಊರಿಗೆ ಭೇಟಿ ನೀಡುತ್ತಾರೆ. ಏಕೆಂದರೆ ಅದು ಅವರಿಗೆ ಶಾಂತಿ ಮತ್ತು ನೆಮ್ಮದಿ ನೀಡುತ್ತದೆ.

ಐಪಿಎಲ್ 2024 ಋತುವಿನವರೆಗೆ ಧೋನಿ ಯಾವುದೇ ಕ್ರಿಕೆಟ್​ನಲ್ಲಿ ಪಾಲ್ಗೊಳ್ಳದ ಕಾರಣ, ಅವರು ಅಲ್ಮೋರಾ ಬಳಿಯ ಲ್ವಾಲಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಇನ್​​ಸ್ಟಾಗ್ರಾಮ್​ನಲ್ಲಿ ಈ ಪೋಸ್ಟ್ ಹಂಚಿಕೊಂಡಿರುವ ಸಾಕ್ಷಿ ಧೋನಿ, ” ಧೋನಿಗಳ ನಡುವೆ ಸಂಭ್ರಮದ ದಿನ! ನನ್ನನ್ನು ನಂಬಿ, ಇಲ್ಲಿ ಇನ್ನೂ ಅನೇಕರು ಇದ್ದಾರೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : MS Dhoni: ಧೋನಿ ಕುಟುಂಬದೊಂದಿಗೆ ದೀಪಾವಳಿ ಆಚರಿಸಿದ ರಿಷಭ್​ ಪಂತ್​

ಸಿಎಸ್​​ಕೆ ನಾಯಕನ ಬಗ್ಗೆ ಮಾತನಾಡುವುದಾದರೆ ಅವರು ಇತ್ತೀಚೆಗೆ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮತ್ತು ಪ್ರಸ್ತುತ ಪುನಶ್ಚೇತನಗೊಳ್ಳುತ್ತಿದ್ದಾರೆ. ಡಿಸೆಂಬರ್ 19ರಂದು ಐಪಿಎಲ್ ಮಿನಿ ಹರಾಜು ನಡೆಯಲಿದ್ದು, ಧೋನಿ ಸಿಎಸ್​​ಕೆ ಪರ ಮತ್ತೊಂದು ಐಪಿಎಲ್ ಋತುವಿನಲ್ಲಿ ಆಡುವ ಬಗ್ಗೆ ಕರೆ ನೀಡಲಿದ್ದಾರೆ. ಮಿನಿ ಹರಾಜಿಗೆ ಮೊದಲು ಮಾತ್ರ ನಿರ್ಧಾರವನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.

ಎಂಎಸ್ ಧೋನಿ ಉತ್ತರಾಖಂಡ್ ಸಂಪರ್ಕ

ಜನರಿಗೆ ಇದು ಗೊತ್ತಿಲ್ಲ. ಆದರೆ ಎಂಎಸ್ ಧೋನಿ ಪೂರ್ವಜರ ಮನೆ ಉತ್ತರಾಖಂಡದಲ್ಲಿದೆ. ಧೋನಿಯ ತಂದೆ ಪಾನ್ ಸಿಂಗ್ 1970 ರ ದಶಕದಲ್ಲಿ ರಾಂಚಿಯ ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಆಗ ಲ್ವಾಲಿ ಗ್ರಾಮವು ಇನ್ನೂ ಅಭಿವೃದ್ಧಿ ಹೊಂದಿರಲಿಲ್ಲ. ಅವರ ಕುಟುಂಬಕ್ಕೆ ನೆಲೆಯಾಗಿತ್ತು. ಅಲ್ಮೋರಾ ಜಿಲ್ಲಾ ಕೇಂದ್ರದಿಂದ ಸುಮಾರು 75 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿನ ಜನ ಸಮುದಾಯವು ಮೂಲಸೌಕರ್ಯಗಳ ಕೊರತೆಯಿಂದಾಗಿ ವಲಸೆ ಹೊಗುತ್ತಿದೆ.

Exit mobile version