ರಾಂಚಿ: ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್ ಧೋನಿ(MS Dhoni) ಮನೆಯ ಯಾವುದೇ ವಿಶೇಷ ಕಾರ್ಯಕ್ರಮದಲ್ಲೂ, ರಿಷಭ್ ಪಂತ್(Rishabh Pant) ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಇದೀಗ ತಮ್ಮ ಅಣ್ಣನ ಸ್ಥಾನದಲ್ಲಿರುವ ಧೋನಿ ಅವರ ಮನೆಯಲ್ಲಿ ಪಂತ್ ಅವರು ದೀಪಾವಳಿ(Diwali 2023) ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪಂತ್ ಮತ್ತು ಧೋನಿ ಸಾಂಪ್ರದಾಯಿಕ ಶೈಲಿಯ ಕುರ್ತಾವನ್ನು ಧರಿಸಿ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಧೋನಿ ಅವರ ಪತ್ನಿ ಸಾಕ್ಷಿ ಸಿಂಗ್(Sakshi Dhoni) ಕೂಡ ಜತೆಗಿದ್ದರು. ಈ ಫೋಟೊ ವೈರಲ್ ಆಗಿದೆ.
ಕ್ರಿಸ್ಮಸ್ ಪಾರ್ಟಿ ಬಳಿಕ ಅಪಘಾತ
ಕಳೆದ ವರ್ಷ ಧೋನಿ ಪರಿವಾರದೊಂದಿಗೆ ಪಂತ್ ಅವರು ದುಬೈಯಲ್ಲಿ ಕ್ರಿಸ್ಮಸ್ ಪಾರ್ಟಿಯಲ್ಲಿ ಪಾಲ್ಗೊಂಡು ಮರಳಿ ಭಾರತಕ್ಕೆ ಬಂದು ತಾಯಿಗೆ ಹೊಸ ವರ್ಷದ ಸರ್ಪ್ರೈಸ್ ನೀಡಲೆಂದು ದೆಹಲಿಯಿಂದ ಡೆಹ್ರಾಡೂನ್ಗೆ ತೆರಳುತ್ತಿದ್ದ ವೇಳೆ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಸುಟ್ಟ ಗಾಯಗಳು ಹಾಗೂ ಮಂಡಿಯ ಗಾಯಗೊಂಡಿಗೆ ರಿಷಭ್ ಪಂತ್ ಪಾರಾಗಿದ್ದರು. ಡೆಹ್ರಾಡೂನ್ನಲ್ಲಿ ಆರಂಭದಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನೀಡಲಾಗಿತ್ತು. ಪ್ರಸ್ತುತ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದು ಮುಂದಿನ ವರ್ಷ ಕ್ರಿಕೆಟ್ಗೆ ಮರಳುವ ವಿಶ್ವಾಸದಲ್ಲಿದ್ದಾರೆ.
ಇದನ್ನೂ ಓದಿ MS Dhoni: ಅಭಿಮಾನಿಯ ಬಿಎಮ್‌ಡಬ್ಲ್ಯೂ ಕಾರ್‌ನಲ್ಲಿ ಸಹಿ ಹಾಕಿದ ಧೋನಿ; ವಿಡಿಯೊ ವೈರಲ್
ಪಂತ್ ಕ್ರಿಕೆಟ್ ಕಮ್ಬ್ಯಾಕ್ಗೆ ಮುಹೂರ್ತ ಫಿಕ್ಸ್!
ಕಳೆದ ವರ್ಷ ಡಿಸೆಂಬರ್ ಅಂತ್ಯದಲ್ಲಿ ಭೀಕರ ಕಾರು ಅಪಘಾತದಲ್ಲಿ ಪವಾಡ ಸದೃಶ ರೀತಿಯಲ್ಲಿ ಪಾರಾದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರಿಷಭ್ ಪಂತ್(Rishabh Pant Birthday) ಕ್ರಿಕೆಟ್ ಕಬ್ಬ್ಯಾಕ್ಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ನವೆಂಬರ್ ನವೆಂಬರ್ 23ರಿಂದ ನಡೆಯಲಿರುವ ವಿಜಯ್ ಹಜಾರೆ ಏಕದಿನ ಟ್ರೋಫಿ ಅಥವಾ ಜನವರಿ 5ರಿಂದ ಆರಂಭಗೊಳ್ಳುವ ರಣಜಿ ಟ್ರೋಫಿಯಲ್ಲಿ ತವರು(Pant likely to play domestic cricket) ರಾಜ್ಯ ದೆಹಲಿ ಪರ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ.
ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಪುನಶ್ಚೇತನ ಶಿಬಿರದಲ್ಲಿ ಫಿಟ್ನೆಸ್ ತರಬೇತಿ ಪಡೆಯುತ್ತಿರುವ ಪಂತ್ ಈಗಾಗಲೇ ಬ್ಯಾಟಿಂಗ್ ಮತ್ತು ಕೀಪಿಂಗ್ ಅಭ್ಯಾಸ ನಡೆಸಿದ ವಿಡಿಯೊಗಳು 2 ತಿಂಗಳ ಹಿಂದೆ ವೈರಲ್ ಆಗಿತ್ತು. ಅಲ್ಲದೆ ಕರ್ನಾಟಕದ JSW ವಿಜಯನಗರದಲ್ಲಿ ನಡೆದ ಕ್ರಿಕೆಟ್ ಅಭ್ಯಾಸ ಪಂದ್ಯವೊಂದರಲ್ಲಿ ಪಂತ್ ಬ್ಯಾಟಿಂಗ್ ನಡೆಸಿದ್ದರು. ತಮ್ಮ ಎಂದಿನ ಶೈಲಿಯಲ್ಲೇ ಸಿಕ್ಸರ್ ಮತ್ತು ಬೌಂಡರಿ ಕೂಡ ಬಾರಿಸಿ ಮಿಂಚಿದ್ದರು.
Rishabh Pant's batting practice, recovery has been excellent.
— Johns. (@CricCrazyJohns) August 16, 2023
– Great news for Indian cricket. pic.twitter.com/KThpdkagDz
ಬಹುತೇಕ ಚೇತರಿಕೆ ಕಂಡಿರುವ ಅವರ ಫಿಟ್ನೆಸ್ ಮೇಲೆ ಬಿಸಿಸಿಐ ವೈದ್ಯಕಿಯ ತಂಡ ನಿಗಾ ಇರಿಸಿದೆ. ಪಂತ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳ ಬೇಕಾದರ ದೇಶೀಯ ಕ್ರಿಕೆಟ್ನಲ್ಲಿ ಆಡಿ ತಮ್ಮ ಫಿಟ್ಸೆನ್ ಸಾಬೀತುಪಡಿಸಬೇಕಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿರುವುದಾಗಿ ಇನ್ಸೈಡ್ ಸ್ಪೋರ್ಟ್ಸ್ಗೆ ವರದಿ ಮಾಡಿದೆ.
ವಿಜಯ್ ಹಜಾರೆಯಲ್ಲಿ ಆಡುವ ಸಾಧ್ಯತೆ
“ಹಾಲಿ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯಲ್ಲಿ ಪಂತ್ ಆಡುವ ನಿರೀಕ್ಷೆಯಲ್ಲಿದ್ದರು. ಆದರೆ ಸಂಪೂರ್ಣ ಫಿಟ್ ಆಗದ ಕಾರಣ ಅವರನ್ನು ಈ ಟೂರ್ನಿಗೆ ಪರಿಗಣನೆ ಮಾಡಿಲ್ಲ. ಆದರೆ, ನವೆಂಬರ್ 23ರಿಂದ ನಡೆಯಲಿರುವ ವಿಜಯ್ ಹಜಾರೆ ಏಕದಿನ ಟ್ರೋಫಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಒಂದೊಮ್ಮ ಇದು ಕೂಡ ಸಾಧ್ಯವಾಗದಿದ್ದರೆ, ಜನವರಿ 5ರಿಂದ ನಡೆಯಲಿರುವ ರಣಜಿ ಟ್ರೋಫಿಯಲ್ಲಿ ಆಡುವುದು ಖಚಿತ” ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.
ಆಫ್ಘನ್ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಕಣಕ್ಕೆ
ಏಕದಿನ ವಿಶ್ವಕಪ್ ,ಮುಗಿದ ಬಳಿಕ ಭಾರತ ತಂಡ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಆಡಲಿದೆ. ಇದು ಮುಕ್ತಾಯ ಕಂಡ ಬೆನ್ನಲ್ಲೇ ಡಿಸೆಂಬರ್ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಆದರೆ ಪಂತ್ ಈ ಸರಣಿಗೆ ಫಿಟ್ ಆಗುವ ಸಾಧ್ಯತೆ ಕಡಿಮೆ ಇದೆ. 2024ರ ಜನವರಿ 11ರಿಂದ ಅಫಫಾನಿಸ್ತಾನ(IND vs AFG series) ವಿರುದ್ಧ ನಡೆಯಲಿರುವ 3 ಪಂದ್ಯಗಳ ಟಿ20 ಸರಣಿ ವೇಳೆಗೆ ಅವರು ಫಿಟ್ ಆಗಿ ತಂಡದ ಪರ ಆಡುವ ನಿರೀಕ್ಷೆ ಇದೆ. ಪಂತ್ ಅಫಘಾನಿಸ್ತಾನ ಪರ ಆಡಿದರೆ, ಜನವರಿ 25ರಿಂದ ನಡೆಯಲಿರುವ ಪ್ರವಾಸಿ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಂತ್ ಆಡಲಿದ್ದಾರೆ. ಒಟ್ಟಾರೆ ಪಂತ್ ಅವರ ಕಮ್ಬ್ಯಾಕ್ಗೆ ಅಭಿಮಾನಿಗಳು ಕಾತರಗೊಂಡಿದ್ದಾರೆ.