ಚೆನ್ನೈ : ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ೨೦೨೩ನೇ ಆವೃತ್ತಿಯ ಐಪಿಎಲ್ ಬಳಿಕ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎಂಬುದಾಗಿ ವರದಿಯಾಗಿದೆ. ೨೦೨೨ನೇ ಆವೃತ್ತಿಯಲ್ಲಿ ಅವರು ನಿವೃತ್ತಿ ಘೋಷಿಸಲಿದ್ದಾರೆ ಎಂಬುದಾಗಿ ಹೇಳಲಾಗಿದ್ದರೂ, ಕೊನೆ ಹಂತದಲ್ಲಿ ೨೦೨೩ರ ಆವೃತ್ತಿಯಲ್ಲೂ ಆಡುವುದಾಗಿ ಹೇಳಿದ್ದರು. ಸಿಎಸ್‌ಕೆ ಅಭಿಮಾನಿಗಳ ಸಮ್ಮುಖದಲ್ಲಿಯೇ ವಿದಾಯ ಹೇಳುವುದೇ ಅವರ ಉದ್ದೇಶ ಎನ್ನಲಾಗಿದೆ.
೨೦೨೩ರ ಐಪಿಎಲ್ ಮೂಲ ಮಾದರಿಯಂತೆ “ಹೋಮ್ ಆಂಡ್ ಅವೇ’ ರೀತಿ ನಡೆಯಲಿದೆ. ತವರಿನ ಚರಣ ಹಾಗೂ ಎದುರಾಳಿ ತಂಡದ ನೆಲದಲ್ಲಿ ಫ್ರಾಂಚೈಸಿಗಳು ಆಡಬೇಕಾಗಿದೆ. ಹೀಗಾಗಿ ಸಿಎಸ್‌ಕೆ ತಂಡ ಚೆನ್ನೈನಲ್ಲೂ ಹಲವಾರು ಪಂಧ್ಯಗಳಲ್ಲಿ ಪಾಲ್ಗೊಳ್ಳಲಿದೆ. ಈ ಅವಧಿಯಲ್ಲಿ ಆಡಿ ವಿದಾಯ ಹೇಳುವುದು ಮಹೇಂದ್ರ ಸಿಂಗ್ ಧೋನಿ ಅವರ ಉದ್ದೇಶ ಎನ್ನಲಾಗಿದೆ.
ಮಹೇಂದ್ರ ಸಿಂಗ್ ಧೋನಿ ಅವರಿಗೆ ತಮ್ಮ ರಾಜ್ಯ ಜಾರ್ಖಂಡ್‌ಗಿಂತ ಹೆಚ್ಚಾಗಿ ತಮಿಳುನಾಡಿನಲ್ಲಿದ್ದಾರೆ. ಅವರನ್ನು ತಮಿಳುನಾಡಿನಲ್ಲಿ ಅಭಿಮಾನದಿಂದ ‘ತಲಾ’ ಎಂದೇ ಕರೆಯುತ್ತಾರೆ. ಅವರಿಗೂ ಸಿಎಸ್‌ಕೆ ಅಭಿಮಾನಿಗಳೆಂದರೆ ನೆಚ್ಚು. ಹೀಗಾಗಿ ಅಲ್ಲಿನ ಅಭಿಮಾನಿಗಳಿಗೆ ಧನ್ಯವಾದ ಹೇಳುವುದು ಅವರ ಗುರಿ.
“ಮುಂದಿನ ವರ್ಷವೇನಾದರೂ ಚೆನ್ನೈನಲ್ಲಿ ಆಡುವ ಅವಕಾಶ ಲಭಿಸಿದರೆ ಅಲ್ಲಿಗೆ ಹೋಗಿ ಆಡಬೇಕು ಹಾಗೂ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಬೇಕು. ಇದೀಗ ಮುಂಬಯಿಯಲ್ಲಿ ಆಡುತ್ತಿದ್ದೇನೆ. ಇಲ್ಲಿಯೂ ಸಾಕಷ್ಟು ಪ್ರೀತಿ ದೊರೆಯುತ್ತಿದೆ. ಆದರೆ ಸಿಎಸ್‌ಕೆ ಅಭಿಮಾನಿಗಳ ಮುಂದೆ ಆಡುವ ಅನುಭವವೇ ಬೇರೆ,” ಎಂದು ಕಳೆದ ಆವೃತ್ತಿಯ ಐಪಿಎಲ್ ವೇಳೆ ಧೋನಿ ಹೇಳಿದ್ದರು. ಇದೀಗ ಟೂರ್ನಿ ಚೆನ್ನೈಗೆ ಮರಳಿದ್ದು ಅವರು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | ʼಕೂಲ್ ಕ್ಯಾಪ್ಟನ್ʼ ಮಹೇಂದ್ರ ಸಿಂಗ್ ಧೋನಿ ಜನ್ಮದಿನಕ್ಕೆ ಅವರ ಸಾಧನೆಗಳ ಮೆಲುಕು