Site icon Vistara News

ಎಂಎಸ್ ಧೋನಿ: ದಿ ಅನ್​​ಟೋಲ್ಡ್​ ಸ್ಟೋರಿ ಮೇ 12ರಂದು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ

MS Dhoni: The Untold Story to re-release in theatres on May 12

#image_title

ಬೆಂಗಳೂರು: ಸುಶಾಂತ್ ಸಿಂಗ್ ರಜಪೂತ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ‘ಎಂ.ಎಸ್.ಧೋನಿ: ದಿ ಅನ್ಟೋಲ್ಡ್ ಸ್ಟೋರಿ’ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಮೇ 12 ರಂದು ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಏಳು ವರ್ಷಗಳ ನಂತರ, ಭಾರತದ ಮಾಜಿ ನಾಯಕ (MS Dhoni) ಜೀವನ ಯಶಸ್ವಿ ಕ್ಷಣಗಳನ್ನು ದೊಡ್ಡ ಪರದೆಯ ಮೇಲೆ ನೋಡಿ ಆನಂದಿಸಲು ಅಭಿಮಾನಿಗಳಿಗೆ ತಯಾರಕರು ಅವಕಾಶ ಕಲ್ಪಿಸುತ್ತಿದ್ದಾರೆ.

ನೀರಜ್ ಪಾಂಡೆ ನಿರ್ದೇಶನದ ಈ ಚಿತ್ರದಲ್ಲಿ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಕೂಲ್​ ಕ್ಯಾಪ್ಟನ್​ ಮಹೇಂದ್ರ ಸಿಂಗ್ ಧೋನಿಯ ಪಾತ್ರವನ್ನು ನಿರ್ವಹಿಸಿದ್ದರು. ಚಿತ್ರವು ರಾಂಚಿ ಮೂಲದ ಕ್ರಿಕೆಟಿಗನ ಬದುಕಿನ ಪಯಣ, ಅವರ ಯಶಸ್ಸು, ಅವರ ಕ್ರಿಕೆಟ್ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನವನ್ನು ಮಜಲುಗಳನ್ನು ಪ್ರಸ್ತುತಪಡಿಸಿದೆ.

ದೇಶದ ಜನರ ಹೃದಯಗಳನ್ನು ಗೆದ್ದಿದ್ದ ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ 133.04 ಕೋಟಿ ರೂಪಾಯಿ ಗಳಿಸಿತ್ತು. ಇದೀಗ ಮತ್ತೆ ಚಿತ್ರ ಬಿಡುಗಡೆಯಾಗುವ ಮೂಲಕ ಮತ್ತಷ್ಟು ಹಣ ಗಳಿಕೆ ಮಾಡುವ ಸಾಧ್ಯತೆಗಳಿವೆ. ಈ ಚಿತ್ರ ಈಗಾಗಲೇ ಒಟಿಟಿ ವೇದಿಕೆಯಲ್ಲಿ ಲಭ್ಯವಿದೆ. ಹೀಗಾಗಿ ಮತ್ತೆ ಯಶಸ್ಸು ಗಳಿಸಲಿದೆ ಎಂಬುದು ಪ್ರಶ್ನೆಯಾಗಿದೆ. ಅದರೆ, ಧೋನಿಗೆ ದೇಶಾದ್ಯಂತ ದೊಡ್ಡ ಮಟ್ಟದ ಅಭಿಮಾನಿಗಳು ಇರುವ ಕಾರಣ ಕನಿಷ್ಠ ಗಳಿಕೆಯನ್ನು ನಿರಿಕ್ಷೆ ಮಾಡಬಹುದಾಗಿದೆ.

ಇದನ್ನೂ ಓದಿ : Rashimka Mandanna : ವಿರಾಟ್ ಕೊಹ್ಲಿ ತಮ್ಮ ನೆಚ್ಚಿನ ಕ್ರಿಕೆಟರ್ ಎಂದ ರಶ್ಮಿಕಾ ಮಂದಣ್ಣ

ಸಿನಿಮಾ ಬಿಡುಗಡೆಯ ಕುರಿತು ಸ್ಟಾರ್​ ಸ್ಟುಡಿಯೊ ಟ್ವಿಟರ್ ಪ್ರಕಟಣೆ ಹೊರಡಿಸಿದೆ. “ಜಬ್ ಮಹಿ ಫಿರ್ ಪಿಚ್ ಪೆ ಆಯೇಗಾ, ಪುರಾ ಇಂಡಿಯಾ ಸರ್ಫ್ “ಧೋನಿ! ಧೋನಿ! ಧೋನಿ!” ಚಿಲಾಯೇಗಾ. ಎಂ.ಎಸ್.ಧೋನಿ: ದಿ ಅನ್ಟೋಲ್ಡ್ ಸ್ಟೋರಿ ಮೇ 12 ರಂದು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದೆ.

ಧೋನಿ ಐಪಿಎಲ್​ನಲ್ಲಿ ಬ್ಯುಸಿ

ಎಂಎಸ್ ಧೋನಿ ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2023 ರಲ್ಲಿ ಚೆನ್ನೈ ತಂಡದ ನಾಯಕತ್ವ ವಹಿಸಿಕೊಂಡು ಆಡುತ್ತಿದ್ದಾರೆ. ತಂಡವನ್ನು ಪ್ಲೇಆಫ್​ ಹಂತಕ್ಕೆ ಕೊಂಡೊಯ್ಯಲು ಶ್ರಮಿಸುತ್ತಿದ್ದಾರೆ. ಏತನ್ಮಧ್ಯೆ, ಲಖನೌನಲ್ಲಿ ಬುಧವಾರ ನಡೆದ ಎಸ್​ಎಸ್​​ಜಿ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹೀಗಾಗಿ ತಲಾ ಒಂದು ಅಂಕಗಳನ್ನು ಹಂಚಿಕೊಳ್ಳುವಂತಾಗಿದೆ.

ಎಂಎಸ್ ಧೋನಿ ಬಳಗ 10 ಪಂದ್ಯಗಳಲ್ಲಿ 5 ಗೆಲುವು ಮತ್ತು 4 ಸೋಲುಗಳೊಂದಿಗೆ ಐಪಿಎಲ್ ಪಾಯಿಂಟ್ಸ್ ಟೇಬಲ್​ನಲ್ಲಿ ಮೂರನೇ ಸ್ಥಾನದಲ್ಲಿದೆ, 11 ಅಂಕಗಳು ಮತ್ತು 0.329 ನೆಟ್ ರನ್ ರೇಟ್ ಹೊಂದಿದೆ ಸಿಎಸ್​ಕೆ. ಲೀಗ್ ಹಂತದ ಅಭಿಯಾನದಲ್ಲಿ ಇನ್ನೂ ನಾಲ್ಕು ಪಂದ್ಯಗಳನ್ನು ಆಡಬೇಕಿದ್ದು, ಪ್ಲೇಆಫ್​ಗೆ ಅರ್ಹತೆ ಪಡೆಯುವ ಗುರಿ ಹೊಂದಿದೆ.

ಇವೆಲ್ಲದರ ನಡುವೆ ಧೋನಿಯ ನಿವೃತ್ತಿಯ ವಿಚಾರವೂ ಸುದ್ದಿಯಲ್ಲಿದೆ. ಹೀಗಾಗಿ ಅವರಿಗೆ ಗೆಲುವಿನ ಬೀಳ್ಕೊಡುಗೆ ಕೊಡಲು ತಂಡವೂ ಸಜ್ಜಾಗಿದೆ. ಎಂಎಸ್ ಧೋನಿ ನೇತೃತ್ವದ ಸಿಎಸ್​ಕೆ ಮೇ 6 ರ ಶನಿವಾರ ಸಾಂಪ್ರದಾಯಿಕ ಎದುರಾಳಿ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲಿದೆ.

Exit mobile version