Site icon Vistara News

MS Dhoni: ಧೋನಿ ವಿಕೆಟ್​ ಕೀಪರ್​ ಆದ ಹಿಂದಿದೆ ಒಂದು ರೋಚಕ ಸ್ಟೋರಿ

mahendra singh dhoni wicket keeping

ಬೆಂಗಳೂರು: ಅತ್ಯಂತ ಸಂದಿಗ್ಧ ಸಮಯದಲ್ಲಿ ಭಾರತ ಕ್ರಿಕೆಟ್‌ನ ನಾಯಕತ್ವವನ್ನು ವಹಿಸಿಕೊಂಡು ತಂಡವನ್ನು ಹೊಸ ಎತ್ತರಕ್ಕೇರಿಸಿದ್ದ ಮಹೇಂದ್ರ ಸಿಂಗ್‌ ಧೋನಿ(MS Dhoni) ಅವರು ವಿಕೆಟ್​ ಹಿಂದೆ ನಿಂತರೆ ಎಂತಹ ಬ್ಯಾಟ್ಸ್​ಮೆನ್​ಗೂ ಕ್ರೀಸ್​ ಬಿಟ್ಟು ಒಂದು ಇಂಚು ಅಲುಗಾಡಲು ಭಯವಾಗುತ್ತಿತ್ತು. ಕಣ್​ ರೆಪ್ಪೆ ಮಿಟುಕಿಸುವಷ್ಟರಲ್ಲಿ ಅವರು ಬೇಲ್ಸ್​ ಹಾರಿಸುತ್ತಿದ್ದರು. ಕಣ್ಣಿಗೆ ಬಟ್ಟೆ ಕಟ್ಟಿದ್ದರೂ ವಿಕೆಟ್​ಗೆ ಚೆಂಡನ್ನು ಎಸೆಯುವು ಮಟ್ಟಿಗೆ ವಿಕೆಟ್​ ಕೀಪಿಂಗ್​ನಲ್ಲಿ ಪಳಗಿದ್ದರು. ಅವರು ವಿಕೆಟ್​ ಕೀಪರ್​ ಆಗಿದ್ದೇ ಎಂದು ರೋಚಕ. ಈ ವಿಚಾರ ಏನೆಂಬುದನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.

2007ರಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡ ಧೋನಿ 2014ರವರೆಗೆ ಕ್ರಿಕೆಟ್‌ನ ಮೂರೂ ಮಾದರಿಗೂ ತಂಡದ ನಾಯಕರಾಗಿದ್ದರು. 2015ರ ಆರಂಭದಿಂದ ಟಿ20 ಮತ್ತು ಏಕದಿನಕ್ಕೆ ಮಾತ್ರ ನಾಯಕರಾಗಿದ್ದರು. 2007 ಟಿ20 ವಿಶ್ವಕಪ್‌ನಲ್ಲಿ ಅತ್ಯದ್ಭುತವಾಗಿ ಭಾರತವನ್ನು ಗೆಲ್ಲಿಸಿದ್ದು, 2011ರ ಏಕದಿನ ವಿಶ್ವಕಪ್‌ನಲ್ಲಿ ಪ್ರಶಸ್ತಿ ಎತ್ತಿದ್ದು, 2013ರಲ್ಲಿ ಏಕದಿನ ಚಾಂಪಿಯನ್ಸ್‌ ಟ್ರೋಫಿ ಗೆದ್ದಿದ್ದು ಧೋನಿ ನಾಯಕತ್ವದ ಸ್ಮರಣೀಯ ಗಳಿಗೆಗಳು. ಅವರ ನೇತೃತ್ವದಲ್ಲೇ ಭಾರತ ತಂಡ ಮೊದಲ ಬಾರಿಗೆ ಟೆಸ್ಟ್‌, ಏಕದಿನ, ಟಿ20ಯಲ್ಲಿ ನಂ.1 ಆಗಿತ್ತು ಎನ್ನುವುದು ಗಮನಾರ್ಹ ಸಂಗತಿ.

ಧೋನಿ ಅವರು ವಿಕೆಟ್​ ಕೀಪರ್​ ಆದ್ದದ್ದೇ ಒಂದು ರೋಚಕ ಸಂಗತಿ. ಬೈಕ್ ಓಡಿಸುವ ಆಸೆಗಾಗಿ ಮುಗಿಬಿದ್ದು ಧೋನಿ ವಿಶ್ವದ ಶ್ರೇಷ್ಠ ವಿಕೆಟ್​ ಕೀಪರ್​ ಆಗಿದ್ದಾರೆ ಎಂದರೆ ಯಾರು ನಂಬಲು ಅಸಾಧ್ಯ. ಆದರೆ ಇದನ್ನೂ ನಂಬಲೇ ಬೇಕು. ಈ ಸತ್ಯವನ್ನು ಧೋನಿಯೇ ಬಿಚ್ಚಿಟ್ಟಿದ್ದಾರೆ.

ಆಗಿನ್ನು ಧೋನಿಗೆ 16 ವರ್ಷ. ಪ್ರೌಡ ಶಿಕ್ಷಣ ಪಡೆಯುತ್ತಿದ್ದ ಕಾಲವದು. ಆದರೆ ಧೋನಿ ಅವರು ಓದುತ್ತಿದ್ದ ಅದೇ ಕಾಲೇಜಿನ ಪದವಿ ವಿದ್ಯಾರ್ಥಿಯೊಬ್ಬ ಬೈಕ್​ನಲ್ಲಿ ಕಾಲೇಜಿಗೆ ಬರುತ್ತಿದ್ದ. ಈ ಬೈಕ್​ ಓಡಿಸಬೇಕೆಂಬುದು ಧೋನಿಯ ಬಯಕೆಯಾಗಿತ್ತು. ತಮ್ಮ ಆಸೆಯನ್ನು ಈ ಸೀನಿಯರ್​ ಬಳಿ ಧೋನಿ ಹೇಳಿಕೊಂಡರು. ಆದರೆ ಆತ ಒಂದು ಸವಾಲ್​ ಹಾಕಿದ್ದ. ಒಂದೂ ಬಾಲ್​ ಕೂಡ ಬೈಕ್​ಗೆ ಟಚ್​ ಆಗದಂತೆ ಹಿಡಿದರೆ ಬೈಕ್​ ಓಡಿಸಲು ಕೊಡುವುದಾಗಿ ಹೇಳಿದ್ದ. ಈ ಸಾವಲಿಗೆ ಜೈ ಅಂದಿದ್ದ ಧೋನಿ ಎದ್ದೂ ಬಿದ್ದು ಬೈಕ್​ಗೆ ಒಂದೂ ಚೆಂಡು ಟಚ್​ ಆಗದಂತೆ ಕೀಪಿಂಗ್​ ನಡೆಸುತ್ತಿದ್ದರು. ಪ್ರತಿ ಬಾರಿಯೂ ಈ ಸವಾಲು ಎದುರಿಸಿ ಧೋನಿ ಬೈಕ್​ ಓಡಿಸುತ್ತಿದ್ದರಂತೆ. ಇದೇ ನೋಡಿ ಮಾಹಿಯನ್ನು ವಿಕೆಟ್ ಕೀಪರ್ ಆಗುವಂತೆ ಪ್ರೇರೇಪಿಸಿದ್ದು. ಹೀಗಂತ ಧೋನಿ ಅವರೇ ಸಂದರ್ಶನವೊಂದರಲ್ಲಿ ತಾವು ವಿಕೆಟ್​ ಕೀಪರ್ ಆದ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ Viral News: ಸಹೋದರ ಜತೆ ಮೊದಲ ಬಾರಿಗೆ ಕಾಣಿಸಿಕೊಂಡ ಎಂ.ಎಸ್​ ಧೋನಿ


ಧೋನಿ ಅವರಿಗೆ ಬೈಕ್​ ಎಂದರೆ ಅಚ್ಚುಮೆಚ್ಚು ಅವರ ಬಳಿಕ ಅತ್ಯಂತ ದುಬಾರಿ ಬೆಲೆಯ ಕಾರು ಮತ್ತು ಬೈಕ್​ಗಳಿಗೆ ಬಿಡುವಿನ ವೇಳೆ ಧೋನಿ ಹೆಚ್ಚಾಗಿ ಬೈಕ್​ನಲ್ಲೇ ಸುತ್ತಾಟ ನಡೆಸುತ್ತಿರುತ್ತಾರೆ. ಧೋನಿ ಅವರು ಭಾರತ ತಂಡದ ಪರ ಆಡುತ್ತಿದ್ದ ವೇಳೆ ಯಾವುದೇ ಸಹ ಆಟಗಾರನಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಬೈಕ್​ ರೂಪದಲ್ಲಿ ಸಿಕ್ಕರೆ ಮೈದಾನದಲ್ಲಿ ಒಂದು ರೌಂಡ್​ ಹಾಕದಿದ್ದರೆ ಅವರಿಗೆ ಸಮಧಾನವೇ ಆಗುತ್ತಿರಲಿಲ್ಲ. ಅವರು ಮೈದಾನದಲ್ಲಿ ಬೈಕ್​ ಓಡಿಸಿದ ಅದೆಷ್ಟೋ ನಿದರ್ಶನಗಳು ನಮ್ಮ ಕಣ್ಣ ಮುಂದಿದೆ.

Exit mobile version