ರಾಂಚಿ: ಟೀಮ್ ಇಂಡಿಯಾದ ಮಾಜಿ ಆಟಗಾರ ಎಂ.ಎಸ್ ಧೋನಿ ಮತ್ತು ಸಾಕ್ಷಿ ಸಿಂಗ್(Sakshi Dhoni) ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 15 ವರ್ಷ ಕಳೆದಿದೆ. ಜುಲೈ 4, 2010ರಲ್ಲಿ ಧೋನಿ ಅವರು ಸಾಕ್ಷಿ ಅವರನ್ನು ಡೆಹರಾಡೂನ್ನಲ್ಲಿ ವಿವಾಹವಾಗಿದ್ದರು. ಇದೀಗ ದಂಪತಿ ಕೇಕ್ ಕತ್ತರಿಸಿ(Wedding Anniversary MS Dhoni & Sakshi) ತಮ್ಮ 15ನೇ ವರ್ಷದ ವಿವಾಹ ವಾರ್ಷಿಕೋತ್ಸವ(ms dhoni wedding anniversary) ಆಚರಿಸಿದ್ದಾರೆ. ಈ ವಿಡಿಯೊವನ್ನು ಚೆನ್ನೈ ಸೂಪರ್ ಕಿಂಗ್ಸ್ ತನ್ನ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಸಾಮಾಜಿಕ ಜಾಲಾತಾಣದಿಂದ ದೂರ ಉಳಿದಿರುವ ಧೋನಿ, ತಮ್ಮ ಯಾವುದೇ ಶುಭ ಸಮಾಚಾರವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಬಯಸುವುದಿಲ್ಲ. ಆದರೂ ಚೆನ್ನೈ ಸೂಪರ್ ಕಿಂಗ್ಸ್ ಟ್ವಿಟರ್ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, “ನಮ್ಮ ರಾಜ ಮತ್ತು ರಾಣಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು” ಎಂದಿದೆ. ಧೋನಿ ಅಭಿಮಾನಿ ಬಳಗದಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳು ಬಂದಿದೆ.
ಧೋನಿ ಕೇಕ್ ಕತ್ತರಿಸಿ ಪತ್ನಿಗೆ ತಿನ್ನಿಸುವ ಮೂಲಕ ತಮ್ಮ 15ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಸಂಭ್ರಮಿಸಿದರು. ಈ ಜೋಡಿಗೆ ಝಿವಾ ಎಂಬ ಮುದ್ದಾಗ ಮಗಳಿದ್ದಾಳೆ. ಐಪಿಎಲ್ ವೇಳೆ ಗ್ಯಾಲರಿಯಲ್ಲಿ ಕುಳಿತು ಅಪ್ಪನಿಗೆ ಚಿಯರ್ ಅಪ್ ಮಾಡುವ ದೃಶ್ಯಗಳು ಹಲವು ಬಾರಿ ವೈರಲ್ ಆಗಿತ್ತು.
ಧೋನಿ ಆಗಸ್ಟ್ 15 2020ರಂದು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದರ. ಸದ್ಯ ಐಪಿಎಲ್ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಹಿಂದೊಮ್ಮೆ ಧೋನಿ ಅವರು ನನ್ನ ಪತ್ನಿಗೆ ಟ್ರಾವೆಲ್ ಎಂದರೆ ಬಲು ಇಷ್ಟ. ಕ್ರಿಕೆಟ್ ನಿವೃತ್ತಿ ಬಳಿಕ ನಾನು ಖಂಡಿತಾ ಹಲವು ದೇಶಕ್ಕೆ ಪ್ರವಾಸ ಮಾಡುವ ಎಲ್ಲ ಯೋಜನೆಗಳನ್ನು ರೂಪಿಸಿದ್ದೇನೆ ಎಂದು ಹೇಳಿದ್ದರು. ಬಿಡುವಿನ ವೇಳೆಯಲ್ಲಿ ಪತ್ನಿ ಮತ್ತು ಮಗಳ ಜತೆ ಧೋನಿ ಆಗಾಗ ವಿದೇಶಕ್ಕೆ ಭೇಟಿ ನೀಡುತ್ತಾ ಪ್ರವಾಸವನ್ನು ಎಂಜಾಯ್ ಮಾಡುತ್ತಿರುತ್ತಾರೆ.
ಇದನ್ನೂ ಓದಿ MS Dhoni Instagram Post: ಭಾರತ 2ನೇ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಅಚ್ಚರಿಯ ಪೋಸ್ಟ್ ಮಾಡಿದ ಧೋನಿ
ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಧೋನಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಐಪಿಎಲ್ಗೂ ವಿದಾಯ ಹೇಳುವ ಮೂಲಕ ಎಲ್ಲ ಕ್ರಿಕೆಟ್ಗೆ ಗುಡ್ ಬೈ ಹೇಳಲಿದ್ದಾರೆ ಎನ್ನಲಾಗಿತ್ತು. ಚೆನ್ನೈ ತಂಡ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಆದರೆ ಧೋನಿ ಮಾತ್ರ ಐಪಿಎಲ್ ವಿದಾಯ ಹೇಳಿಲ್ಲ. ಮುಂದಿನ ಆವೃತ್ತಿಯಲ್ಲಿಯೂ ಆಡುವ ನಿರೀಕ್ಷೆಯಲ್ಲಿದ್ದಾರೆ.
2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ 275 ರನ್ಗಳು ಬೇಕಾಗಿದ್ದವು. ಅಂತೆಯೇ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ 97 ರನ್ ಬಾರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಸೆಹ್ವಾಗ್ ಸೊನ್ನೆಗೆ ಔಟಾಗಿದ್ದರೆ ಸಚಿನ್ ಕೊಡಗೆ 18 ರನ್. ಆದರೆ, ಕೊನೇ ಹಂತದಲ್ಲಿ ಕ್ರೀಸ್ಗೆ ತಳವೂರಿ ಆಡಿದ್ದ ನಾಯಕ ಧೋನಿ ಅಜೇಯ 91 ರನ್ ಬಾರಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದರು. ಅಂತೆಯೇ ಇನಿಂಗ್ಸ್ನ ಕೊನೇ ಓವರ್ನಲ್ಲಿ ಲಂಕಾ ಬೌಲರ್ ನುವಾನ್ ಕುಲಶೇಖರ ಅವರ ಎಸೆತಕ್ಕೆ ಸಿಕ್ಸರ್ ಬಾರಿಸಿದ್ದರು. ಅದು ಭಾರತದ ವಿಜಯ ರನ್ ಆಗಿತ್ತು.