Site icon Vistara News

MS Dhoni: ‘ಬೋಲೆ ಜೋ ಕೋಯಲ್’ ಹಾಡು ಹಾಡುತ್ತಾ ಬೈಸಿಕಲ್ ತುಳಿದ ಧೋನಿ; ವಿಡಿಯೊ ವೈರಲ್​

MS Dhoni

ಮುಂಬಯಿ: ಎಂ.ಎಸ್.ಧೋನಿ(MS Dhoni), ಕ್ಯಾಪ್ಟನ್‌ ಕೂಲ್‌, ಮಾಹಿ, ತಾಲಾ… ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುವ ಮಹೇಂದ್ರ ಸಿಂಗ್‌ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಪ್ರಸ್ತುತ ಐಪಿಎಲ್​ನ(IPL 2024) ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ತಂಡದ ಆಟಗಾರ ಜಾಹೀರಾತೊಂದರಲ್ಲಿ ವಿಶೇಷವಾಗಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಭಾರತದಲ್ಲಿ ತಯಾರಿಸಿದ ಇ-ಮೊಟೊರಾಡ್ ಡೂಡಲ್ ವಿ-3 ಎಲೆಕ್ಟ್ರಿಕ್ ಬೈಸಿಕಲ್ ಜಾಹೀರಾತಿನಲ್ಲಿ ಧೋನಿ ಫಲ್ಗುಣಿ ಪಾಠಕ್ ಅವರ ಪ್ರಸಿದ್ಧ ಗೀತೆ -“ಬೋಲೆ ಜೋ ಕೋಯಲ್ ರಾಟೆ ಮಿ”(MS Dhoni Sings Bole Jo Koyal) ಎಂದು ಹಾಡುತ್ತಾ ಸೈಕಲ್​ ತುಳಿದಿದ್ದಾರೆ. ಈ ವಿಡಿಯೊ ವೈರಲ್​ ಆಗಿದ್ದು ಇದನ್ನು ಕಂಡು ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

ಈ ವಿಡಿಯೊ ಕಂಡ ಧೋನಿ ಅಭಿಮಾನಿಯೊಬ್ಬ ಧೋನಿ ಅವರು ಭಾರತ ತಂಡದ ಪರ ಆಡುತ್ತಿದ್ದ ಸಂದರ್ಭ ಡ್ರೆಸಿಂಗ್​ ರೂಮ್​ನಲ್ಲಿ ಇದೇ ಹಾಡಿಗೆ ನೃತ್ಯ ಮಾಡುತ್ತಿರುವ ಹಳೆಯ ವಿಡಿಯೊವನ್ನು ಪೋಸ್ಟ್ ಮಾಡಿದ್ದಾನೆ. ಈ ವಿಡಿಯೊ ಕೂಡ ವೈರಲ್​ ಆಗಿದೆ.

ಕಳೆದ ಬಾರಿಯ ಐಪಿಎಲ್ ಟೂರ್ನಿಯುದ್ದಕ್ಕೂ ಧೋನಿ ಕಾಲಿನ ಗಾಯಕ್ಕೆ ತುತ್ತಾಗಿದ್ದರೂ ಆಡಿದ್ದರು. ನೋವು ನಿವಾರಕ ಪ್ಲಾಸರ್​ಗಳನ್ನು ಧರಿಸಿ ಆಡಿದ್ದರು. ಟೂರ್ನಿ ಮುಗಿದ ಬಳಿಕ ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ತಮ್ಮ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ಉತ್ತಮ ಫಿಟ್​ನೆಸ್​ ಹೊಂದಿರುವ ಧೋನಿ ಉದ್ದನೆಯ ಕೂದಲು ಕೂಡ ಬಿಟ್ಟಿದ್ದು ಕ್ರಿಕೆಟ್​ಗೆ ಪದಾರ್ಪಣೆ ಮಾಡುವಾಗ ಇದ್ದ ಲುಕ್​ನಲ್ಲಿ ತಮ್ಮ ಕೊನೆಯ ಐಪಿಎಲ್​ ಆಡುತ್ತಿದ್ದಾರೆ. ಚೆನ್ನೈ ತಂಡವನ್ನು 5 ಬಾರಿ ಚಾಂಪಿಯನ್​ ಪಟ್ಟಕ್ಕೇರಿದ ಹಿರಿಮೆಯೂ ಧೋನಿ ಅವರದ್ದಾಗಿದೆ.

ಇದನ್ನೂ ಓದಿ MS Dhoni : ಧೋನಿ ನಾಯಕನಾಗಲು ನಾನೇ ಕಾರಣ; ಗುಟ್ಟು ಬಹಿರಂಗ ಮಾಡಿದ ಸಚಿನ್​

ನಿವೃತ್ತಿ ಬಳಿಕ ಏನು ಮಾಡಲಿದ್ದೀರ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಧೋನಿ. ಸದ್ಯಕ್ಕೆ ನಾನು ಕ್ರಿಕೆಟ್​ ಬಗ್ಗೆ ಮಾತ್ರ ಯೋಚಿಸುತ್ತಿದ್ದೇನೆ. ಆದರೆ ಒಂದಂತು ನಿಜ, ಕ್ರಿಕೆಟ್​ನಿಂದ ನಿವೃತ್ತಿಯಾದ ಬಳಿಕ ಕೆಲ ಕಾಲ ಆರ್ಮಿಯಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಅದು ನನ್ನ ಜೀವನದ ಪ್ರಮುಖ ಗುರಿ ಎಂದು ಮಾಹಿ ಹೇಳಿದ್ದರು.

“ನಾನು ಇನ್ನೂ ಕ್ರಿಕೆಟ್ ಆಡುತ್ತಿದ್ದೇನೆ. ಕ್ರಿಕೆಟ್ ನಂತರ ನಾನು ಏನು ಮಾಡುತ್ತೇನೆ ಎಂದು ನೋಡಲು ತುಂಬಾ ಆಸಕ್ತಿದಾಯಕವಾಗಿದೆ. ನಾನು ಖಚಿತವಾಗಿ ಭಾವಿಸುತ್ತೇನೆ, ನಾನು ಸೇನೆಯೊಂದಿಗೆ ಸ್ವಲ್ಪ ಹೆಚ್ಚು ಸಮಯ ಕಳೆಯಲು ಬಯಸುತ್ತೇನೆ, ಏಕೆಂದರೆ ಕಳೆದ ಕೆಲವು ವರ್ಷಗಳಿಂದ ನಾನು ಅದನ್ನು ಮಾಡಲು ಸಾಧ್ಯವಾಗಲಿಲ್ಲ” ಎಂದು ಧೋನಿ ಹೇಳಿದ್ದರು. ಈ ವಿಡಿಯೊ ವೈರಲ್ ಆಗಿತ್ತು. ಧೋನಿಯ ದೇಶ ಪ್ರೇಮಕ್ಕೆ ಅವರ ಅಭಿಮಾನಿಗಳು ಸಲಾಂ ಹೇಳಿದ್ದರು.

ಸೇನಾ ತರಬೇತಿ ಪಡೆದಿರುವ ಮಹೇಂದ್ರ ಸಿಂಗ್‌ ಧೋನಿ 2019ರಲ್ಲಿ ಜುಲೈ 31ರಿಂದ ಆಗಸ್ಟ್​ 15ರ ವರೆಗೆ ಕಾಶ್ಮೀರದಲ್ಲಿ ಸೇನಾ ಕರ್ತವ್ಯ ನಿರ್ವಹಿಸಿದ್ದರು. ಪ್ಯಾರಾಚೂಟ್‌ ರೆಜಿಮೆಂಟ್‌ನ 106ನೇ ಬೆಟಾಲಿಯನ್‌ನೊಂದಿಗೆ ಗಸ್ತು, ನಿಗಾ ಕಾರ್ಯಾಚರಣೆ ಸೇರಿದಂತೆ ಸೇನೆಯ ವಿವಿಧ ವಿಭಾಗದಲ್ಲಿ ಧೋನಿ ಕೆಲಸ ನಿರ್ವಹಿಸಿದ್ದರು. ಧೋನಿ ಭಾರತದ ಅರೆ ಸೇನಾಪಡೆಯಲ್ಲಿ ಗೌರವ ಲೆಫ್ಟಿನೆಂಟ್‌ ಕರ್ನಲ್‌ ಆಗಿದ್ದಾರೆ.

Exit mobile version