Site icon Vistara News

Viral Video; ಮಗಳೊಂದಿಗೆ ಮುದ್ದಾಗಿ ಹೊಸ ವರ್ಷ ಆಚರಿಸಿದ ಧೋನಿ

MS Dhoni

ದುಬೈ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ(MS Dhoni) ಅವರು ದುಬೈನಲ್ಲಿ ತಮ್ಮ ಕುಟುಂಬ ಸದಸ್ಯರ ಜತೆ ರಜೆಯ ದಿನಗಳನ್ನು ಕಳೆಯುತ್ತಿದ್ದಾರೆ. ಪತ್ನಿ ಸಾಕ್ಷಿ ಹಾಗೂ ಮಗಳು ಝಿವಾ ಅವರೊಂದಿಗೆ ಧೋನಿ ಹೊಸ ವರ್ಷವನ್ನು ಆಚರಿಸಿದ ವಿಡಿಯೊ ವೈರಲ್ ಆಗಿದೆ. ಈ ವಿಡಿಯೊವನ್ನು ಧೋನಿ ಪತ್ನಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸಾಕ್ಷಿ ಅವರು ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ದುಬೈನಲ್ಲಿ ಹೊಸ ವರ್ಷ ಆಚರಿಸಿದ ವಿಡಿಯೊವನ್ನು ಪೋಸ್ಟ್ ಮಾಡಿ ನ್ಯೂ ಇಯರ್​ ವೈಬ್​ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೊದಲ್ಲಿ ಧೋನಿ ಸಂಭ್ರಮಿಸಿದ ದೃಶ್ಯಗಳು ಹಾಗೂ ಧೋನಿಗೆ ಮಗಳು ಝಿವಾ ನೀಡಿದ ಸಿಹಿ ಮುತ್ತು ಹೀಗೆ ಸುಂದರ ಕ್ಷಣಗಳನ್ನು ನೋಡಬಹುದಾಗಿದೆ.

ಹೊಸ ವರ್ಷಕ್ಕೆ ಮುಂಚಿತವಾಗಿ ಧೋನಿ ಮತ್ತು ಅವರ ಪತ್ನಿ ಸಾಕ್ಷಿ, ಬಾಲಿವುಡ್ ನಟಿ ಕೃತಿ ಸನೋನ್ ಮತ್ತು ನೂಪುರ್ ಸನೋನ್ ಅವರೊಂದಿಗೆ ಪಾರ್ಟಿ ಮಾಡಿದ್ದ ಫೋಟೊಗಳು ವೈರಲ್ ಆಗಿತ್ತು. ಐಪಿಎಲ್​ ಟೂರ್ನಿ ಆರಂಭಕ್ಕೂ ಮುನ್ನ ಧೋನಿ ತಮ್ಮ ಬಿಡುವನ್ನು ದುಬೈನಲ್ಲಿ ಕಳೆಯುತ್ತಿದ್ದಾರೆ. ದುಬೈನಿಂದ ತವರಿಗೆ ಮರಳಿದ ಬಳಿಕ ಧೋನಿ ಐಪಿಎಲ್​ಗಾಗಿ ಅಭ್ಯಾಸದ ಕಾರ್ಯಚಟುವಟಿಕೆ ಆರಂಭಿಸಲಿದ್ದಾರೆ.

ಹೊಸ ಕೇಶ ವಿನ್ಯಾಸದ ಅನುಭವ…

ಇತ್ತೀಚೆಗಷ್ಟೇ ಧೋನಿ ಸಂದರ್ಶನವೊಂದರಲ್ಲಿ ತಮ್ಮ ಹೊಸ ಕೇಶ ವಿನ್ಯಾಸದಿಂದ ಅನುಭವಿಸುವ ಕಷ್ಟವನ್ನು ತಿಳಿಸಿದ್ದರು. ಮೊದಲು ನಾನು ಜಾಹೀರಾತು ಚಿತ್ರಗಳಿಗೆ ಹೋಗುತ್ತಿದ್ದಾಗ, ಸಾಮಾನ್ಯವಾಗಿ 20 ನಿಮಿಷಗಳಲ್ಲಿ ಕೂದಲು, ಮೇಕಪ್ ಎಲ್ಲದರಲ್ಲೂ ಸಿದ್ಧವಾಗುತ್ತಿದ್ದೆ. ಆದರೆ, ಈಗ 1 ಗಂಟೆ, 5 ನಿಮಿಷಗಳು ತೆಗೆದುಕೊಳ್ಳುತ್ತದೆ. ಇದು ಸ್ವಲ್ಪ ಬೇಸರವಾಗಿದೆ. ನನ್ನ ಎಲ್ಲಾ ಅಭಿಮಾನಿಗಳು ಹೇರ್ ಸ್ಟೈಲ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಸ್ವಲ್ಪ ಸಮಯದವರೆಗೆ ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.

ಐಪಿಎಲ್​ ನಿವೃತ್ತಿ ಬಳಿಕ…

ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಕೆಳವು ವರ್ಷಗಳಾಗಿವೆ. ಕೇವಲ ಐಪಿಎಲ್​ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಮುಂದಿನ ವರ್ಷ ನಡೆಯುವ ಟೂರ್ನಿಯ ಬಳಿಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ನಿವೃತ್ತಿ ಬಳಿಕ ಏನು ಮಾಡಲಿದ್ದೀರ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಧೋನಿ. ಸದ್ಯಕ್ಕೆ ನಾನು ಕ್ರಿಕೆಟ್​ ಬಗ್ಗೆ ಮಾತ್ರ ಯೋಚಿಸುತ್ತಿದ್ದೇನೆ. ಆದರೆ ಒಂದಂತು ನಿಜ, ಕ್ರಿಕೆಟ್​ನಿಂದ ನಿವೃತ್ತಿಯಾದ ಬಳಿಕ ಕೆಲ ಕಾಲ ಆರ್ಮಿಯಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಅದು ನನ್ನ ಜೀವನದ ಪ್ರಮುಖ ಗುರಿ ಮಾಹಿ ಹೇಳಿದ್ದರು.

Exit mobile version