Site icon Vistara News

Mukesh Kumar : ಆಸ್ಟ್ರೇಲಿಯಾ ವಿರುದ್ಧ ಸರಣಿಯ ನಡುವೆಯೇ ಮದುವೆಯಾದ ಮುಕೇಶ್​ ಕುಮಾರ್​

mukehs kumar

ಬೆಂಗಳೂರು: ಭಾರತ ತಂಡದ ಮಧ್ಯಮ ವೇಗದ ಬೌಲರ್ ಮುಖೇಶ್ ಕುಮಾರ್ ಬುಧವಾರ ಉತ್ತರ ಪ್ರದೇಶದ ಗೋರಖ್​ಪುರದಲ್ಲಿ ವಿವಾಹವಾದರು. ಅವರು ಅದಕ್ಕಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂರನೇ ಪಂದ್ಯದಲ್ಲಿ ಬಿಡುವು ಪಡೆದುಕೊಂಡದ್ದರು.

30 ವರ್ಷದ ಕ್ರಿಕೆಟಿಗ ತನ್ನ ಪತ್ನಿ ದಿವ್ಯಾ ಸಿಂಗ್ ಎಂಬುವರನ್ನು ಮದುವೆಯಾಗಿದ್ದಾರೆ. ಅವರ ಮದುವೆಯ ಅರಶಿನ ಶಾಸ್ತ್ರ ಕಾರ್ಯಕ್ರಮದ ವಿಡಿಯೊಗಳು ವೈರಲ್ ಆಗಿವೆ. ಸಮಾರಂಭದಲ್ಲಿ ಅವರಿಬ್ಬರೂ ನೃತ್ಯ ಮಾಡಿ ಗಮನ ಸೆಳೆದಿದ್ದರು. ಮುಕೇಶ್ ಕುಮಾರ್ ಅವರ ಮದುವೆಯಲ್ಲಿ ಶೆರ್ವಾನಿ ಧರಿಸಿದ ಸ್ಟೈಲಿಶ್ ಆಗಿ ಪ್ರವೇಶ ಮಾಡಿದ್ದರು. ಈ ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈರಲ್ ಆಯಿತು ಡ್ಯಾನ್ಸ್

ನವೆಂಬರ್ 28 ರಂದು ಮುಖೇಶ್ ಕುಮಾರ್ ಮತ್ತು ಅವರ ಪತ್ನಿ ನಡೆಸಿದ ಹಲ್ದಿ ಸಮಾರಂಭದ ನೃತ್ಯ ಮಾಡಿದ್ದರು. ಇದು ನೆಟ್ಟಿಗರ ಗಮನ ಸೆಳೆಯಿತು/ ಸಾಂಪ್ರದಾಯಿಕ ನಡೆದ ಕಾರ್ಯಕ್ರಮದದಲ್ಲಿ ದಂಪತಿ ಭೋಜ್ಪುರಿ ರಾಗಕ್ಕೆ ನೃತ್ಯ ಮಾಡಿದರು. ಈ ನೃತ್ಯವು ದೇಶಾದ್ಯಂತದ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ಗಳಿಸಿತು.

ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ, ಹಲ್ದಿ ಸಮಾರಂಭದಲ್ಲಿ ಮುಖೇಶ್ ತನ್ನ ನೃತ್ಯ ಕೌಶಲ್ಯವನ್ನು ಪ್ರದರ್ಶಿಸಿದರು. ಅವನ ದಿವ್ಯಾ ಸಿಂಗ್​ ಅವರೂ ಉತ್ಸಾಹದಿಂದ ನೃತ್ಯದಲ್ಲಿ ಮಾಡಿದ್ದರು ಹತ್ತಿರದ ಸಂಬಂಧಿಗಳು ಮತ್ತು ಸ್ನೇಹಿತರು ಮದುವೆಯ ಸಂಭ್ರಮದ ವಾತಾವರಣವನ್ನು ಹೆಚ್ಚಿಸಿದ್ದರು.

ಎಕಾನಮಿ ಬೌಲರ್​

ತಮ್ಮ ಬೌಲಿಂಗ್ ಕೌಶಲಗಳಿಎ ಹೆಸರುವಾಸಿಯಾದ ಮುಖೇಶ್ ಕುಮಾರ್, ವಿಶೇಷವಾಗಿ ಎಕಾನಮಿ ಸ್ಪೆಲ್​ಗಳನ್ನು ನೀಡುವೆಲ್ಲಿ ನಿಸ್ಸೀಮರು. ಯಾರ್ಕರ್ಗಳನ್ನು ಕರಗತ ಮಾಡಿಕೊಂಡಿರುವ ಅವರು ಪ್ರತಿಭೆಯ ಇನ್ನೊಂದು ಮುಖವನ್ನು ಮದುವೆ ಸಮಾರಂಭದಲ್ಲಿ ಪ್ರದರ್ಶಿಸಿದರು. ಮದುವೆಯ ಸಿದ್ಧತೆಗಳ ನಡುವೆ, ಮುಖೇಶ್ ಕ್ರಿಕೆಟ್​ನಿಂದ ವಿರಾಮ ತೆಗೆದುಕೊಂಡರು, ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ 20 ಪಂದ್ಯಕ್ಕೆ ಮೊದಲು ಬಿಸಿಸಿಐನಿಂದ ಅನುಮತಿ ಪಡೆದು ಮನೆಗೆ ತೆರಳಿದ್ದರು. ಅವರ ಬದಲಿ ದೀಪಕ್ ಚಹರ್ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿತ್ತು.

ಇದನ್ನೂ ಓದಿ : Rinku Singh : ರಿಂಕು ಸಿಂಗ್​ ಉತ್ತಮ ಫಿನಿಶರ್ ಅಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ ಆಶೀಶ್​ ನೆಹ್ರಾ

ಪ್ರಸ್ತುತ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ಟಿ 20 ಐ ಸರಣಿಯಲ್ಲಿ ಮುಖೇಶ್ ಅವರ ಪ್ರದರ್ಶನವು ಏರಿಳಿತಗಳ ಮಿಶ್ರಣವಾಗಿದೆ. ಮೊದಲ ಪಂದ್ಯದಲ್ಲಿ ಅವರು ನಾಲ್ಕು ಓವರ್​ಗಳಲ್ಲಿ ಕೇವಲ 29 ರನ್​ಗಳನ್ನು ಬಿಟ್ಟುಕೊಟ್ಟು ಉತ್ತಮ ಸ್ಪೆಲ್ ಪ್ರದರ್ಶಿಸಿದರೆ, ಎರಡನೇ ಟಿ20 ಐ ಪಂದ್ಯದಲ್ಲಿ 49 ರನ್​ಗಳನ್ನು ನೀಡಿದರು. ಅವರು ರಾಯ್ಪುರದಲ್ಲಿ ನಡೆಯಲಿರುವ ಮುಂಬರುವ ನಾಲ್ಕನೇ ಟಿ20 ಯಲ್ಲಿ ಪಂದ್ಯಕ್ಕೆ ಮರಳುವ ನಿರೀಕ್ಷೆಯಿದೆ.

ಮುಕೇಶ್ ಕುಮಾರ್ 7 ಟಿ20, 3 ಏಕದಿನ ಹಾಗೂ 1 ಟೆಸ್ಟ್ ಪಂದ್ಯವನ್ನಾಡಿದ್ದಾರೆ. ಈ ವರ್ಷದ ಆರಂಭದಲ್ಲಿ ವೆಸ್ಟ್ ಇಂಡೀಸ್​ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಮುಖೇಶ್ ಕುಮಾರ್ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಪ್ರದರ್ಶಿಸಿದ ಅಸಾಧಾರಣ ಬೌಲಿಂಗ್ ಕೌಶಲ್ಯದಿಂದಾಗಿ ಅವರು ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅವರು 40 ಪಂದ್ಯಗಳಲ್ಲಿ ಒಟ್ಟು 151 ವಿಕೆಟ್​​ಗಳನ್ನು ಪಡೆದಿದ್ದಾರೆ.

Exit mobile version