Site icon Vistara News

Mukesh Kumar: ಧೋನಿ ನೀಡಿದ ಸಲಹೆಗೆ ಬೆಲೆ ಕಟ್ಟಲು ಅಸಾಧ್ಯ; ಮುಖೇಶ್​ ಕುಮಾರ್​

mukesh kumar and dhoni

ಬೆಂಗಳೂರು: ವೆಸ್ಟ್​ ಇಂಡೀಸ್​(IND vs WI) ವಿರುದ್ಧದ ಕ್ರಿಕೆಟ್​ ಸರಣಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಬಂಗಾಳದ ವೇಗಿ ಮುಖೇಶ್​ ಕುಮಾರ್(Mukesh Kumar)​ ಅವರು ಐಪಿಎಲ್​(IPL 2023) ವೇಳೆ ಮಹೇಂದ್ರ ಸಿಂಗ್​ ಧೋನಿ(ms dhoni) ಅವರು ನೀಡಿದ ಸಲಹೆಯನ್ನು ನೆನಪಿಸಿಕೊಂಡಿದ್ದಾರೆ. ಧೋನಿ ನೀಡಿ ಸಲಹೆಗೆ ಬೆಲೆ ಕಟ್ಟಲಾಗದು ಎಂದು ಹೇಳಿದ್ದಾರೆ.

“ಭಾರತ ಕ್ರಿಕೆಟ್​ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್​ ಧೋನಿ ಅವರನ್ನು ಭೇಟಿಯಾಗಬೇಕು, ಅವರ ಬಳಿ ಒಂದೆರಡು ಪ್ರಶ್ನೆಗಳನ್ನು ಕೇಳಬೇಕಿತ್ತು ಎಂದುಕೊಂಡಿದ್ದೆ. ಇದು ಈ ಬಾರಿ ಐಪಿಎಲ್​ನಲ್ಲಿ ನನಸಾಯಿತು. ಅವರಲ್ಲಿ ಮೊದಲ ಪ್ರಶ್ನೆಯಾಗಿ ಒಬ್ಬ ಕ್ಯಾಪ್ಟನ್‌ ಮತ್ತು ವಿಕೆಟ್‌ಕೀಪರ್‌ ಆಗಿ ಬೌಲರ್‌ನಿಂದ ಏನನ್ನು ಬಯಸುವಿರಿ? ಎಂದು ಕೇಳಿದೆ. ಇದಕ್ಕೆ ಅತ್ಯಂತ ಕೂಲ್​ ಆಗಿ ನನ್ನ ಹೆಗಲ ಮೇಲೆ ಕೈ-ಹಾಕಿದ ಅವರು, ಹೊಸತನವನ್ನು ಪ್ರಯತ್ನ ಮಾಡುವವರೆಗೂ ಏನನ್ನೂ ಕಲಿಯಲು ಸಾಧ್ಯವಿಲ್ಲ. ಏನು ಮಾಡಬೇಕು ಅಂದುಕೊಂಡಿರುವಿರೊ ಅದನ್ನು ಮೊದಲು ಮಾಡಿ. ಫಲಿತಾಂಶ ಏನೇ ಆಗಿರಲಿ ಮೊದಲು ಪ್ರಯತ್ನ ಪಡಬೇಕು’ ಎಂದು ಸಲಹೆ ನೀಡಿದ್ದಾಗಿ ಮುಖೇಶ್​ ತಿಳಿಸಿದ್ದಾರೆ.

ಇದನ್ನೂ ಓದಿ IPL 2023 : ಮಹೇಂದ್ರ ಸಿಂಗ್​ ಧೋನಿಗೆ ವಿಶೇಷ ಕೊಡುಗೆ ನೀಡಿದ ಅಭಿಮಾನಿ, ಏನದು?

ಐಪಿಎಲ್ ವೇಳೆ ಧೋನಿ ನೀಡಿದ ಸಲಹೆಯಂತೆಯೇ ನಾನು ಕ್ರಿಕೆಟ್​ನಲ್ಲಿ ಮುಂದುವರಿಯಲು ಬಯಸುತ್ತೇನೆ. ಅವರ ಈ ಅಮೂಲ್ಯ ಸಲಹೆಗೆ ಬೆಲೆ ಕಟ್ಟಲು ಅಸಾಧ್ಯ ಎಂದು ಮುಖೇಶ್​ ಕುಮಾರ್​ ಅಂದು ಧೋನಿ ನೀಡಿದ ಕ್ರಿಕೆಟ್​ ಸಲಹೆಯನ್ನು ನೆನಪಿಸಿಕೊಂಡಿದ್ದಾರೆ.

ಸೇನೆಗೆ ಸೇರಲು ಬಯಸಿದ್ದ ಮುಕೇಶ್​

ಕ್ರಿಕೆಟ್​ ಆಟದಲ್ಲಿ ಅಪಾರ ಆಸಕ್ತಿ ಇದ್ದರೂ ಕುಟುಂಬಕ್ಕೆ ಆಧಾರವಾಗುವ ನಿಟ್ಟಿನಲ್ಲಿ ಮುಖೇಶ್​ ಸೇನೆಗೆ ಸೇರಲು ಬಯಸಿದ್ದರು. ಅದರಂತೆ ಸೇನಾ ನೇಮಕಾತಿಗೂ ಅರ್ಜಿ ಸಲ್ಲಿಸಿದ್ದರು. ಆದರೆ ಇಲ್ಲಿ ವಿಫಲರಾದ ಬಳಿಕ ಧೃಡ ನಿರ್ಧಾರ ಕೈಗೊಂಡ ಅವರು ತಮ್ಮ ಕಷ್ಟದ ಮಧ್ಯೆಯೂ ಕ್ರಿಕೆಟ್​ ಆಟದಲ್ಲಿಯೇ ಮುಂದುವರಿಯಲು ಆರಂಭಿಸಿದರು. ಇದರ ಪ್ರತಿ ಫಲ ಇದೀಗ ದೊರೆತಿದೆ. ಅದೆಷ್ಟೋ ಕ್ರಿಕೆಟ್​ ಆಟಗಾರರ ಕನಸಾದ ಟೀಮ್​ ಇಂಡಿಯಾದಲ್ಲಿ, ಮುಕೇಶ್​ ಸ್ಥಾನ ಪಡೆದಿದ್ದಾರೆ. ಕಳೆದ ಲಂಕಾ ವಿರುದ್ಧದ ಟಿ20 ಸರಣಿಗೆ ಅವರು ಆಯ್ಕೆಯಾಗಿದ್ದರೂ ಆಡುವ ಬಳಗದಲ್ಲಿ ಅವಕಾಶ ಪಡೆಯಲಿಲ್ಲ. ಇದೀಗ ವಿಂಡೀಸ್​ ವಿರುದ್ಧದ ಮೂರೂ ಮಾದರಿಯ ಸರಣಿಯಲ್ಲಿ ಆಯ್ಕೆ ಆಗಿರುವ ಅವರಿಗೆ ಆಡುವ ಅವಕಾಶ ಸಿಗುವಂತಾಗಲಿ.

ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉ.ನಾ), ಕೆಎಸ್ ಭರತ್ (ವಿ.ಕೀ), ಇಶಾನ್ ಕಿಶನ್ (ವಿ.ಕೀ), ಆರ್ ಅಶ್ವಿನ್, ಆರ್ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್, ನವದೀಪ್ ಸೈನಿ.

ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿ.ಕೀ), ಇಶಾನ್ ಕಿಶನ್ (ವಿ.ಕೀ), ಹಾರ್ದಿಕ್ ಪಾಂಡ್ಯ (ಉ.ನಾ), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಯದೇವ್ ಉನಾದ್ಕತ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.

ಟಿ20 ತಂಡ: ಇಶಾನ್​ ಕಿಶನ್​, ಶುಭಮನ್​ ಗಿಲ್​, ಯಶಸ್ವಿ ಜೈಸ್ವಾಲ್​, ತಿಲಕ್​ ವರ್ಮ, ಸೂರ್ಯಕುಮಾರ್​ ಯಾದವ್​, ಸಂಜು ಸ್ಯಾಮ್ಸನ್​, ಹಾರ್ದಿಕ್​​ ಪಾಂಡ್ಯ(ನಾಯಕ), ಅಕ್ಷರ್​ ಪಟೇಲ್, ಯಜುವೇಂದ್ರ ಚಹಲ್​, ಕುಲ್​ದೀಪ್​ ಯಾದವ್​, ರವಿ ಬಿಷ್ಟೋಯಿ, ಆರ್ಶ್​ದೀಪ್​ ಸಿಂಗ್​, ಉಮ್ರಾನ್​ ಮಲಿಕ್​, ಆವೇಶ್​ ಖಾನ್​, ಮುಖೇಶ್​ ಕುಮಾರ್​.

Exit mobile version