Site icon Vistara News

Fire Accident : ಮುಂಬೈ ಅಗ್ನಿ ಅವಘಡದಲ್ಲಿ ಐಪಿಎಲ್​ ಮಾಜಿ ಆಟಗಾರನ ಸಹೋದರಿ, ಸೋದರಳಿಯನ ಸಾವು

Paul valthaty

ಮುಂಬಯಿ: ಇಲ್ಲಿನ ಕಾಂದಿವಲಿಯಲ್ಲಿ (ಪಶ್ಚಿಮ) ಸೋಮವಾರ ಸಂಜೆ ನಡೆದ ಅಗ್ನಿ ಅವಘಡದಲ್ಲಿ ಐಪಿಎಲ್ ಮಾಜಿ ಆಟಗಾರ ಪಾಲ್ ವಾಲ್ತಾಟಿ ಅವರ ಸಹೋದರಿ ಮತ್ತು ಎಂಟು ವರ್ಷದ ಸೋದರಳಿಯ ಮೃತಪಟ್ಟಿದ್ದಾರೆ. ನೆಲಮಹಡಿ ಹಾಗೂ ಎಂಟು ಅಂತಸ್ತಿನ ಕಟ್ಟಡದಲ್ಲಿ ಅನಾಹುತ ನಡೆದಿದ್ದು, ಇನ್ನೂ ಮೂವರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಮಹಾವೀರ್ ನಗರದ ಪವನ್ ಧಾಮ್ ದೇವಾಲಯದ ಸಮೀಪವಿರುವ ವೀಣಾ ಸಂತೂರ್ ಕಟ್ಟಡದಲ್ಲಿ ಘಟನೆ ನಡೆದಿದೆ.

ಪಾಲ್ ವಾಲ್ತಾಟಿ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದಾರೆ. ಅವರ ಸಹೋದರಿ ಗ್ಲೋರಿ ರಾಬರ್ಟ್ಸ್ (43) ಮತ್ತು ಅವರ ಮಗ ಜೋಶುವಾ ಬೆಂಕಿ ಅನಾಹುತದ ವೇಳೆ ಹೊಗೆ ತುಂಬಿದ ಮಹಡಿಗಳಲ್ಲಿ ಸಿಲುಕಿಕೊಂಡಿದ್ದರು. ರಾಬರ್ಟ್ಸ್ ನಾಲ್ಕನೇ ಮಹಡಿಯಲ್ಲಿರುವ 420 ಮತ್ತು 421 ಫ್ಲ್ಯಾಟ್ ಗಳಲ್ಲಿ ವಾಸಿಸುತ್ತಿದ್ದರು. ಅದೇ ಕಟ್ಟಡದಲ್ಲಿ ಪಾಲ್​ ವಾಲ್ತಾಟಿ ಕೂಡ ವಾಸಿಸುತ್ತಿದ್ದರು. ಕಟ್ಟಡದ ಫ್ಲಾಟ್ 121 ರ ಅಡುಗೆಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ದುರ್ಘಟನೆ ಸಂಭವಿಸಿದೆ.

ಹಲವರಿಗೆ ಸಹಾಯ ಮಾಡಿದ್ದ ಪಾಲ್ ವಾಲ್ತಾಟಿ

ಬೆಂಕಿ ಕಾಣಿಸಿಕೊಂಡ ತಕ್ಷಣ ಪಾಲ್ ವಾಲ್ತಾಟಿ ಅವರು ಕಟ್ಟಡದಿಂದ ಕೆಳಕ್ಕೆ ಬಂದಿದ್ದರು. ಅವರು ಹೊಗೆಯ ನಡುವೆ ಸಿಲುಕಿದವರನ್ನು ಕೆಳಗಿಳಿಸಲು ಹಲವರಿಗೆ ಸಹಾಯ ಮಾಡಿದ್ದರು. ಆದರೆ, ಅವರ ಸಹೋದರಿ ಮತ್ತು ಮಗುವನ್ನು ರಕ್ಷಿಸಲು ಅವರಿಗೆ ಸಾಧ್ಯವಾಗಲಿಲ್ಲ ” ಎಂದು ಹೌಸಿಂಗ್ ಸೊಸೈಟಿಯ ಕಾರ್ಯದರ್ಶಿ ನಿಲೇಶ್ ದೇಸಾಯಿ ಹೇಳುತ್ತಾರೆ.

ಗಾಯಗೊಂಡ ಜನರೊಂದಿಗೆ ಜೋಶುವಾ ಮತ್ತು ಗ್ಲೋರಿಯನ್ನು ಶತಾಬ್ದಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಮಧ್ಯಾಹ್ನ 12.15 ರ ಸುಮಾರಿಗೆ, ಪಿಂಕೇಶ್ ಜೈನ್ ಒಡೆತನದ ಎಫ್ ವಿಂಗ್​ನ ಮೊದಲ ಮಹಡಿಯಲ್ಲಿರುವ ಫ್ಲ್ಯಾಟ್ 121 ರ ಅಡುಗೆಮನೆಯಲ್ಲಿ ಬೆಂಕಿ ಪ್ರಾರಂಭವಾಯಿತು. ಅದು ಬೇಗನೆ ಎದುರಿನ ಮಹಡಿಗಳಿಗೆ ಹರಡಿತು. ಸಂಜೆ 4.30ರ ಸುಮಾರಿಗೆ ಅಗ್ನಿಶಾಮಕ ಇಲಾಖೆ ಬೆಂಕಿಯನ್ನು ನಂದಿಸಿತು. ಎಫ್ ವಿಭಾಗದ ನಾಲ್ಕನೇ ಮಹಡಿಯು ವಾಲ್ಹಾಟಿ ಕುಟುಂಬಕ್ಕೆ ಸೇರಿತ್ತು.

ಈ ಸುದ್ದಿಯನ್ನೂ ಓದಿ

ಅಫಘಾನಿಸ್ತಾನ​ ವಿರುದ್ಧ ಸೋತು ಸುಣ್ಣವಾದ ಪಾಕ್ ತಂಡಕ್ಕೆ ಅಂಕಪಟ್ಟಿಯಲ್ಲಿ ಎಷ್ಟನೇ ಸ್ಥಾನ?

ಕುಟುಂಬದ ಸದಸ್ಯರೊಬ್ಬರ ಪ್ರಕಾರ, ಲೋರಿ ತನ್ನ ಅನಾರೋಗ್ಯ, ಹಾಸಿಗೆ ಹಿಡಿದ ಪೋಷಕರನ್ನು ನೋಡಲು ಭೇಟಿ ನೀಡುತ್ತಿದ್ದರು. ಬೆಂಕಿ ಕಾಣಿಸಿಕೊಂಡಾಗ ಇಡೀ ಕುಟುಂಬ ಅಪಾರ್ಟ್​​ಮೆಂಟ್​ನಲ್ಲಿತ್ತು. ಪಾಲ್ ವಾಲ್ತಾಟಿ ತನ್ನ ಹೆಂಡತಿ, ಮಕ್ಕಳು ಮತ್ತು ಗ್ಲೋರಿಯ ಹಿರಿಯ ಮಗಳೊಂದಿಗೆ ಕೆಳಕ್ಕೆ ಧಾವಿಸಿದನು. ಗ್ಲೋರಿ ಮತ್ತು ಅವಳ ಮಗ ಮತ್ತು ಅವರ ಇಬ್ಬರು ಮನೆಕೆಲಸದವರು ಓಡಿಹೋಗಲು ಪ್ರಯತ್ನಿಸುವಾಗ ಮೆಟ್ಟಿಲುಗಳ ನಡಉವೆ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲಾಗಿದೆ.

ಇಬ್ಬರು ನರ್ಸ್​ಗಳಾದ ರಾಜೇಶ್ವರಿ ಅಧೆ (24) ಮತ್ತು ಲಕ್ಷ್ಮಿ ಬುರಾ (40) ತೀವ್ರ ಸುಟ್ಟ ಗಾಯಗಳಿಂದ ಶತಾಬ್ದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯ ವೈದ್ಯರ ಪ್ರಕಾರ, ರಾಜೇಶ್ವರಿಗೆ 80-90% ಸುಟ್ಟಗಾಯಗಳಾಗಿದ್ದರೆ, ಲಕ್ಷ್ಮಿಗೆ 50-60% ಸುಟ್ಟಗಾಯಗಳಾಗಿದ್ದವು.

Exit mobile version