Site icon Vistara News

IPL 2023 : ಹೈದರಾಬಾದ್​ ತಂಡಕ್ಕೆ 193 ರನ್​ಗಳ ಸ್ಪರ್ಧಾತ್ಮಕ ಸವಾಲೊಡ್ಡಿದ ಮುಂಬೈ ಇಂಡಿಯನ್ಸ್​

IPL 2023Mumbai Indians gave a competitive challenge of 193 runs to the Hyderabad team

#image_title

ಹೈದರಾಬಾದ್​: ಬ್ಯಾಟರ್​ಗಳ ಸಂಘಟಿತ ಹೋರಾಟದ ನೆರವು ಪಡೆದ ಮುಂಬಯಿ ಇಂಡಿಯನ್ಸ್​ ತಂಡ ಐಪಿಎಲ್​ 16ನೇ ಆವೃತ್ತಿಯ 25ನೇ ಪಂದ್ಯದಲ್ಲಿ ಸನ್ ರೈಸರ್ಸ್​ ಹೈದರಾಬಾದ್​ ತಂಡಕ್ಕೆ 193 ರನ್​ಗಳ ಸವಾಲೊಡ್ಡಿದೆ. ಕ್ಯಾಮೆರಾನ್​ ಗ್ರೀನ್ (64 ರನ್​, 40 ಎಸೆತ, 2 ಸಿಕ್ಸರ್​, 6 ಫೋರ್​​) ಅರ್ಧ ಶತಕ ಬಾರಿಸಿ ತಂಡಕ್ಕೆ ದೊಡ್ಡ ಮೊತ್ತ ಪೇರಿಸಲು ನೆರವಾದರು. ತಿಲಕ್​ ವರ್ಮಾ (37) ಹಾಗೂ ಇಶಾನ್​ ಕಿಶನ್​ (38) ತಮ್ಮ ಕೊಡುಗೆಗಳನ್ನು ಕೊಟ್ಟರು. ಹೈದರಾಬಾದ್ ತಂಡದ ಪರ ನಾಯಕ ಏಡೆನ್​ ಮಾರ್ಕ್ರಮ್​ ಮೂರು ಅಧ್ಬುತ ಕ್ಯಾಚ್​ಗಳನ್ನು ಹಿಡಿದು ಮಿಂಚಿದರು.

ಇಲ್ಲಿನ ರಾಜೀವ್​ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಎಸ್​ಆರ್​​ಎಚ್​ ತಂಡ ಮೊದಲು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲ ಬ್ಯಾಟ್​ ಮಾಡಿದ ರೋಹಿತ್ ಶರ್ಮಾ ನೇತೃತ್ವದ ಮುಂಬಯಿ ಬಳಗ ನಿಗದಿತ 20 ಓವರ್​​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 195 ರನ್​ ಬಾರಿಸಿತು.

ಬ್ಯಾಟಿಂಗ್​ ಆರಂಭಿಸಿದ ಮುಂಬಯಿ ಇಂಡಿಯನ್ಸ್​ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಆದರೆ, ರೋಹಿತ್​ ಶರ್ಮಾ 28 ರನ್​ಗಳಿಗೆ ಟಿ ನಟರಾಜನ್​ಗೆ ವಿಕೆಟ್​ ಒಪ್ಪಿಸಿದರು. ಹೀಗಾಗಿ 1 ವಿಕೆಟ್​ ಕಳೆದುಕೊಂಡು 41 ರನ್​ ಬಾರಿಸಿತು. ಮತ್ತೊಂದು ಬದಿಯಲ್ಲಿ ಇಶಾನ್​ ಕಿಶನ್​ ನಿಧಾನಗತಿಯಲ್ಲಿ ಆಡಿ 31 ಎಸೆತಗಳಿಗೆ 38 ರನ್ ಬಾರಿಸಿ ಔಟಾದರು. ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಸೂರ್ಯಕುಮಾರ್​ ಯಾದವ್​ ಮತ್ತೆ ವೈಫಲ್ಯ ಕಂಡರಲ್ಲದೆ, 7 ರನ್​ ಬಾರಿಸಿ ಔಟಾದರು. ಎಸ್​ಆರ್​ಎಚ್​ ತಂಡದ ನಾಯಕ ಏಡೆನ್​ ಮಾರ್ಕ್ರಮ್​ ಹಿಡಿದ ಅದ್ಭುತ ಕ್ಯಾಚ್​ಗೆ ಅವರು ಬಲಿಯಾದರು. ಯುವ ಬ್ಯಾಟರ್ ತಿಲಕ್​ ವರ್ಮಾ ಈ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿದರು. 17 ಎಸೆತಗಳಿಗೆ 2 ಫೋರ್​ 4 ಸಿ್ಕಸರ್​ಗಳ ಸಮೇತ 37 ರನ್​ ಬಾರಿಸಿ ಔಟಾದರು.

ಗ್ರಿನ್​ ಅಬ್ಬರ

ಮುಂಬೈ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಆಸ್ಟ್ರೇಲಿಯಾ ತಂಡದ ಆಲ್​ರೌಂಡರ್​ ಕ್ಯಾಮೆರಾನ್​ ಗ್ರೀನ್​ ಅಬ್ಬರದ ಪ್ರದರ್ಶನ ನೀಡಿದರು. ಎಸ್​​ಆರ್​ಎಚ್​ ಬೌಲರ್​ಗಳನ್ನು ಸತತವಾಗಿ ದಂಡಿಸಿದ ಅವರು …. ರನ್ ಗಳಿಸಿದರು. ಅವರು ಸ್ಫೋಟಕ ಬ್ಯಾಟಿಂಗ್​ನಿಂದಾಗಿ ಮುಂಬಯಿ ತಂಡಕ್ಕೆ ದೊಡ್ಡ ಮೊತ್ತ ಪೇರಿಸಲು ನೆರವಾಯಿತು.

Exit mobile version