ನವದೆಹಲಿ: ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ಮುಂಬಯಿ ಇಂಡಿಯನ್ಸ್ ತಂಡದ ನಾಯಕನನ್ನಾಗಿ ಮಾಡಿರುವುದು ಆ ತಂಡದ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಇದೀಗ ಅವರೆಲ್ಲರಿಗೂ ಖುಷಿಯ ವಿಚಾರವೊಂದಿದೆ. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕ್ರಿಕೆಟ್ ಮೈದಾನಕ್ಕೆ ಸದ್ಯಕ್ಕೆ ಮರಳುವುದಿಲ್ಲ ಎಂದು ಹೇಳಲಾಗಿದೆ. ಅವರು ಅದಕ್ಕಾಗಿ ಸಾಕಷ್ಟು ಸಮಯ ಕಾಯಬೇಕಾಗಬಹುದು. ಈ ಹಿಂದೆ ಊಹಿಸಿದಂತೆ, ಹಾರ್ದಿಕ್ ಮುಂದಿನ ವರ್ಷ ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಸೀಮಿತ ಓವರ್ಗಳ ಸರಣಿಗೆ ಮರಳಬೇಕಿತ್ತು. ಅದು ಕೂಡ ಸಾಧ್ಯವಾಗದಿರಬಹುದು. ಪಿಟಿಐ ವರದಿಯ ಪ್ರಕಾರ, ಅವರು ಐಪಿಎಲ್ 2024 ರ ಸಂಪೂರ್ಣ ಅವಧಿಗೆ ಹೊರಗುಳಿಯಬಹುದು.
ಹಾರ್ದಿಕ್ ಅವರ ಫಿಟ್ನೆಸ್ ಸ್ಥಿತಿಯ ಬಗ್ಗೆ ಸದ್ಯ ಯಾವುದೇ ಅಪ್ಡೇಟ್ ಇಲ್ಲ. ಹೀಗಾಗಿ ಐಪಿಎಲ್ ಆರಂಭಕ್ಕೆ ಮೊದಲು ಅವರು ಲಭ್ಯವಿರುತ್ತಾರೆಯೇ ಎಂಬ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಎದುರಾಗಿದೆ” ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ. ವಿಶ್ವಕಪ್ ವೇಳೆ ಹಾರ್ದಿಕ್ ಪಾದದ ಗಾಯಕ್ಕೆ ತುತ್ತಾಗಿದ್ದರು. ಅಂದಿನಿಂದ ಅವರ ಫಿಟ್ನೆಸ್ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ.
ಮುಂಬೈ ಇಂಡಿಯನ್ಸ್ಗೆ ಸಂಕಷ್ಟ
ಹಾರ್ದಿಕ್ ಅವರ ವಿಳಂಬ ಮರಳುವಿಕೆ ಈಗ ಟೀಮ್ ಇಂಡಿಯಾ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಸಂಕಟಗಳನ್ನು ಹೆಚ್ಚಿಸುತ್ತದೆ. ಪಾದದ ಗಾಯದಿಂದಾಗಿ ಸೂರ್ಯಕುಮಾರ್ ಯಾದವ್ ಮತ್ತು ಅಲಭ್ಯತೆಯಿಂದಾಗಿ ಟಿ 20 ವಿಶ್ವಕಪ್ಗೆ ಮುಂಚಿನ ಕೊನೆಯ ಸರಣಿಯಲ್ಲಿ ಇಬ್ಬರೂ ಟಿ 20 ಐ ಪ್ರಮುಖ ಆಟಗಾರರು ಇರುವುದಿಲ್ಲ.
ಇದನ್ನೂ ಓದಿ: Pakistan Cricket : ಭಾರತದ ಕ್ರಿಕೆಟ್ ಮಾದರಿಯನ್ನು ನಕಲು ಮಾಡಲು ಮುಂದಾದ ಪಾಕಿಸ್ತಾನ
ಮುಂಬೈ ಇಂಡಿಯನ್ಸ್ ತಂಡವು ಕೆಲವು ದಿನಗಳ ಹಿಂದೆ ರೋಹಿತ್ ಶರ್ಮಾ ಅವರನ್ನು ನಾಯಕ ಸ್ಥಾನದಿಂದ ತೆಗೆದುಹಾಕಿ ಅವರ ಸ್ಥಾನಕ್ಕೆ ಹಾರ್ದಿಕ್ ಅವರನ್ನು ನೇಮಿಸಿದೆ. ಹೀಗಾಗಿ ಆ ತಂಡವು ಕಠಿಣ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಇಡೀ ಹಾರ್ದಿಕ್ ಪಾಂಡ್ಯ ಪರಿಸ್ಥಿತಿಯನ್ನು ಈಗ ಹೇಗೆ ನಿಭಾಯಿಸಲಾಗುತ್ತದೆ ಎಂಬುದನ್ನು ನೋಡಬೇಕಾಗಿದೆ.
ಗಾಯದ ಸಮಸ್ಯೆಯಲ್ಲಿ ಭಾರತದ ಸ್ಫೋಟಕ ಬ್ಯಾಟರ್
ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಗಾಯದ ಸಮಸ್ಯೆ ಮುಂದುವರಿಸಿದೆ. ತಂಡದ ಮತ್ತೊಬ್ಬ ಆಟಗಾರ ಗಾಯದ ಸಮಸ್ಯೆಯಿಂದ ಹೊರಗುಳಿಯಲಿದ್ದಾರೆ. ವಿಶ್ವದ ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಪಾದದ ಗಾಯದಿಂದಾಗಿ ಫೆಬ್ರವರಿವರೆಗೆ ತಂಡದಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಇದರರ್ಥ ಸ್ಟಾರ್ ಬ್ಯಾಟರ್ ವಿಶ್ವ ಕಪ್ ಮೊದಲಿಗೆ ಇರುವ ನಿರ್ಣಾಯಕ ಅಫಘಾನಿಸ್ತಾನ ವಿರುದ್ಧದ ಟಿ 20 ಐ ಸರಣಿಯಿಂದ ಹೊರಗುಳಿಯಲಿದ್ದಾರೆ.
ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿಗಳ ಪ್ರಕಾರ, ಸೂರ್ಯಕುಮಾರ್ ಅವರ ಪಾದದ ಮೇಲೆ ಗ್ರೇಡ್ 2 ಸ್ನಾಯು ಮುರಿತ ಉಂಟಾಗಿದೆ. ಅವರಿಗೆ ಸುಮಾರು 7 ವಾರಗಳ ಕಾಲ ಆಟದಿಂದ ದೂರ ಉಳಿಯುವ ಅವಶ್ಯಕತೆ ಇದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3ನೇ ಟಿ20 ಪಂದ್ಯದ ವೇಳೆ ಸೂರ್ಯಕುಮಾರ್ ಅವರ ಪಾದ ಉಳುಕಿಸಿಕೊಂಡಿದ್ದರು. ತಕ್ಷಣವೇ ಭಾರತ ತಂಡದ ಫಿಸಿಯೋಗಳು ಅವರಿಗೆ ಚಿಕಿತ್ಸೆ ನೀಡಿದ್ದರು.
“ಅವರು ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಅವರು ತಮ್ಮ ಪುನಶ್ಚೇತನಕ್ಕಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ವರದಿ ಮಾಡಬೇಕಾಗುತ್ತದೆ. ಅವರು ಖಂಡಿತವಾಗಿಯೂ ಅಫ್ಘಾನಿಸ್ತಾನ ಸರಣಿಯಿಂದ ಹೊರಗುಳಿಯಲಿದ್ದಾರೆ,” ಎಂದು ಮೂಲವೊಂದು ತಿಳಿಸಿದೆ.