ಮುಂಬಯಿ: ಭಾನುವಾರ ತವರಿನ ವಾಂಖೇಡೆ ಅಂಗಳದಲ್ಲಿ ಸನ್‌ರೈಸರ್ ಹೈದರಾಬಾದ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ರೋಹಿತ್ ಪಡೆ ಇಲ್ಲಿ ದೊಡ್ಡ ಗೆಲುವನ್ನು ದಾಖಲಿಸಿದರಷ್ಟೇ ಮುನ್ನಡೆ ಸಾಧ್ಯ. ಮುಂಬೈ ರನ್‌ರೇಟ್ ಇನ್ನೂ ಮೈನಸ್‌ನಲ್ಲಿ ಇರುವುದರಿಂದ ಒತ್ತಡ ಹೆಚ್ಚು. ಆರ್‌ಸಿಬಿ, ರಾಜಸ್ಥಾನ್ ತಂಡಗಳೆರಡು ಮುಂಬೈಗೆ ಭಾರೀ ಪೈಪೋಟಿ ನೀಡುತ್ತಿವೆ. ಮುಂಬೈ ಈ ಪಂದ್ಯದಲ್ಲಿ ಗೆದ್ದರೂ ರಾತ್ರಿ ನಡೆಯುವ ಆರ್‌ಸಿಬಿ ಪಂದ್ಯದ ಫಲಿತಾಂಶದ ವರೆಗೂ ಕಾಯಬೇಕಿದೆ.
ಸನ್ರೈಸರ್ಸ್ ಹೈದರಾಬಾದ್ ತನ್ನ ಹಿಂದಿನ ಪಂದ್ಯದಲ್ಲಿ ವಿರುದ್ಧ ಅವಮಾನಕರ ಸೋಲು ಅನುಭವಿಸಿದ್ದು, ಇದೀಗ ಲೀಗ್ ಹಂತದ ಕೊನೇ ಪಂದ್ಯದಲ್ಲಿ ಆಡುತ್ತಿದೆ. ವಿರಾಟ್ ಕೊಹ್ಲಿ ಅವರ ಮಾಸ್ಟರ್ ಕ್ಲಾಸ್ ಆಟದಿಂದಾಗಿ ಎಸ್ಆರ್ಎಚ್ ಸೋಲು ಕಂಡಿತ್ತು. ಹೀಗಾಗಿ ಆಡಿರುವ 13 ಪಂದ್ಯಗಳಲ್ಲಿ 8 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಹೀಗಾಗಿ ಈ ಪಂದ್ಯದಲ್ಲಿ ಎಸ್ಆರ್ಎಚ್ ತಂಡಕ್ಕೆ ಕಳೆದುಕೊಳ್ಳಲು ಏನೂ ಇಲ್ಲ. ಹೀಗಾಗಿ ಈ ಪಂದ್ಯದಲ್ಲಿ ಅಬ್ಬರದ ಆಟ ಪ್ರದರ್ಶನ ಮಾಡುವ ಸಾಧ್ಯತೆಗಳಿವೆ.
ಇದನ್ನೂ ಓದಿ IPL 2023 : ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದ ಎಲ್ಎಸ್ಜಿ, ಆರ್‌ಸಿಬಿ ಭವಿಷ್ಯವೇನು?
ಇತ್ತಂಡಗಳ ಮುಖಾಮುಖಿ
ಒಟ್ಟು ಪಂದ್ಯಗಳು- 20
ಮುಂಬಯಿ ಇಂಡಿಯನ್ಸ್ ಜಯ- 11
ಎಸ್ಆರ್ಎಚ್ ಜಯ- 09
ತಂಡಗಳು ಇಂತಿವೆ
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಸಂದೀಪ್ ವಾರಿಯರ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಡೀವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ, ಟಿಮ್ ಡೇವಿಡ್, ಮೊಹಮ್ಮದ್ ಅರ್ಷದ್ ಖಾನ್, ರಮಣ್ದೀಪ್ ಸಿಂಗ್, ಹೃತಿಕ್ ಶೋಕೀನ್, ಅರ್ಜುನ್ ತೆಂಡೂಲ್ಕರ್, ಟ್ರಿಸ್ಟಾನ್ ಸ್ಟಬ್ಸ್, ಕುಮಾರ್ ಕಾರ್ತಿಕೇಯ, ಜೇಸನ್ ಬೆಹ್ರೆನ್ಡಾರ್ಫ್, ಆಕಾಶ್ ಮಧ್ವಾಲ್, ಕ್ಯಾಮರೂನ್ ಗ್ರೀನ್, ರಿಲೆ ಮೆರಿಡಿತ್, ಪಿಯೂಷ್ ಚಾವ್ಲಾ, ಡುವಾನ್ ಜಾನ್ಸೆನ್, ವಿಷ್ಣು ವಿನೋದ್, ಶಮ್ಸ್ ಮುಲಾನಿ, ನೇಹಲ್ ವಧೇರಾ, ರಾಘವ್ ಗೋಯಲ್.
ಇದನ್ನೂ ಓದಿ IPL 2023 : ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದ ಎಲ್ಎಸ್ಜಿ, ಆರ್‌ಸಿಬಿ ಭವಿಷ್ಯವೇನು?
ಸನ್ ರೈಸರ್ಸ್ ಹೈದರಾಬಾದ್: ಅಬ್ದುಲ್ ಸಮದ್, ಉಮ್ರಾನ್ ಮಲಿಕ್, ವಾಷಿಂಗ್ಟನ್ ಸುಂದರ್, ರಾಹುಲ್ ತ್ರಿಪಾಠಿ, ಅಭಿಷೇಕ್ ಶರ್ಮಾ, ಕಾರ್ತಿಕ್ ತ್ಯಾಗಿ, ಟಿ ನಟರಾಜನ್, ಭುವನೇಶ್ವರ್ ಕುಮಾರ್, ಐಡೆನ್ ಮಾರ್ಕ್ರಮ್, ಮಾರ್ಕೊ ಜಾನ್ಸೆನ್, ಗ್ಲೆನ್ ಫಿಲಿಪ್ಸ್, ಫಜಲ್ಹಾಕ್ ಫಾರೂಕಿ, ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ಹೆನ್ರಿಕ್ ಕ್ಲಾಸೆನ್, ಆದಿಲ್ ರಶೀದ್, ಮಯಾಂಕ್ ಮಾರ್ಕಂಡೆ, ವಿವ್ರಂತ್ ಶರ್ಮಾ, ಸಮರ್ಥ್ ವ್ಯಾಸ್, ಸನ್ವೀರ್ ಸಿಂಗ್, ಉಪೇಂದ್ರ ಸಿಂಗ್ ಯಾದವ್, ಮಯಾಂಕ್ ದಾಗರ್, ನಿತೀಶ್ ಕುಮಾರ್ ರೆಡ್ಡಿ.