Site icon Vistara News

IPL 2024 : ಇಶಾನ್​ ಕಿಶನ್​​ ಸೇರಿದಂತೆ ಆಟಗಾರರಿಗೆ ಶಿಕ್ಷೆ ವಿಧಿಸಿದ ಮುಂಬಯಿ ಇಂಡಿಯನ್ಸ್​ , ವಿಡಿಯೊ ಇದೆ

IPL 2024

ಬೆಂಗಳೂರು: ಐದು ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್ (Mumbai Indian’s) ತಂಡ ಐಪಿಎಲ್​ 2024ರಲ್ಲಿ (IPL 2024) ಸತತ ಮೂರು ಸೋಲಿಗೆ ಒಳಗಾಗುವ ಮೂಲಕ ಬೇಸರದಲ್ಲಿದೆ. ಏತನ್ಮಧ್ಯೆ ತಂಡ ಸ್ಟಾರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ (Ishan Kishan) ಮತ್ತು ಸ್ಪಿನ್ನರ್ ಕುಮಾರ್ ಕಾರ್ತಿಕೇಯ (Kumar Kartikeya) ಸೇರಿದಂತೆ ಹಲವರಿಗೆ ತಂಡದ ಆಡಳಿತ ಮಂಡಳಿ ಶಿಕ್ಷೆ ವಿಧಿಸಿದೆ. ಅವರು ಸೂಪರ್​ಹೀರೊ ಜಂಪ್​ಸೂ​ಟ್ ಧರಿಸಿಕೊಂಡು ಪ್ರಯಾಣಿಸುವಂತೆ ಹೇಳಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ 2024 ಪಂದ್ಯದ ಒಂದು ದಿನದ ನಂತರ ತಂಡವು ಮುಂಬೈನಿಂದ ಹೊರಡುತ್ತಿದ್ದಾಗ, ಶಿಕ್ಷೆಗೊಳಗಾದ ನಾಲ್ವರು ಎಂಐ ಆಟಗಾರರಲ್ಲಿ ಕಿಶನ್ ಮತ್ತು ಕಾರ್ತಿಕೇಯ ಈ ಜಂಪ್​ ಸೂಟ್ಸ್​ ಧರಿಸಿದ್ದರು.

ಐದು ಬಾರಿಯ ಚಾಂಪಿಯನ್ ಮುಂಬೈ ಫ್ರಾಂಚೈಸಿಯು ತಂಡದ ಮೀಟಿಂಗ್​ಗೆ ತಡವಾಗಿ ಬರುವ ತಮ್ಮ ಆಟಗಾರರನ್ನು ಈ ತಮಾಷೆಯ ರೀತಿಯಲ್ಲಿ ಶಿಕ್ಷಿಸುತ್ತದೆ ಮುಂಬಯಿ ಇಂಡಿಯನ್ಸ್​​ ತನ್ನ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಅಪ್ಲೋಡ್ ಮಾಡಿದೆ, ಇದರಲ್ಲಿ ನಾಲ್ವರು ಆಟಗಾರರು ತಮಾಷೆಯ ಜಂಪ್​​ಸೂಟ್​ಗಳನ್ನು ಧರಿಸಿರುವುದನ್ನು ಕಾಣಬಹುದು. “ಶಿಕ್ಷೆಯ ಜಂಪ್​ಸೂಟ್​ಗಳು ಮರಳಿ ಬಂದಿವೆ” ಎಂದು ವೀಡಿಯೊಗೆ ಶೀರ್ಷಿಕೆ ನೀಡಲಾಗಿದೆ.

ಮುಂಬಯಿ ಇಂಡಿಯನ್ಸ್​ ತಂಡಕ್ಕೆ ಶುಭ ಸುದ್ದಿ, ಸೂರ್ಯ ವಾಪಸ್ ಬರುವ ದಿನಾಂಕ ಫಿಕ್ಸ್​

ಶಸ್ತ್ರಚಿಕಿತ್ಸೆಯಿಂದ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳದ ಕಾರಣ ಐಪಿಎಲ್​ 17ನೇ ಆವೃತ್ತಿಯ (IPL 2024) ಮೂರು ಪಂದ್ಯಗಳಿಂದ ಹೊರಗುಳಿದಿರುವ ಸೂರ್ಯಕುಮಾರ್ ಯಾದವ್ (SuryaKumar Yadav) ಅವರ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡ ಕಣಕ್ಕಿಳಿದಿದೆ. ಅದೇ ರೀತಿ ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಅವರ ಅನುಪಸ್ಥಿತಿಯಲ್ಲೇ ತಂಡ ಸೋಲುತ್ತಿದೆ ಎಂಬುದಾಗಿ ಹೇಳಲಾಗುತ್ತಿದೆ. ಏತನ್ಮಧ್ಯೆ ಅವರು ಶೀಘ್ರದಲ್ಲೇ ಮುಂಬಯಿ ಇಂಡಿಯನ್ಸ್ ತಂಡಕ್ಕೆ ಮರಳಲಿದ್ದಾರೆ ಎಂಬುದಾಗಿ ಸುದ್ದಿಯಾಗಿದೆ. ಪ್ರಸ್ತುತ ತಮ್ಮ ಪುನಶ್ಚೇತನ ಪ್ರಕ್ರಿಯೆಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದಾರೆ.

ಇದನ್ನೂ ಓದಿ: Virat kohli : ಬೃಹತ್ ದಾಖಲೆಯೊಂದರ ಸನಿಹದಲ್ಲಿದ್ದಾರೆ ವಿರಾಟ್​ ಕೊಹ್ಲಿ

ಇಂಡಿಯನ್ ಪ್ರೀಮಿಯರ್ ಲೀಗ್ 2024 ಕ್ಕೆ ಮುಂಚಿತವಾಗಿ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅವರಿಗೆ ಸಾಧ್ಯವಾಗಲಿಲ್ಲ. ಅವರಿಗೆ ಪುನಶ್ಚೇತನ ಮುಂದುವರಿಸಲು ತಿಳಿಸಲಾಯಿತು. ಅವರು ತಮ್ಮ ಪಾದದ ಗಾಯ ಮತ್ತು ಸ್ಪೋರ್ಟ್ಸ್ ಹರ್ನಿಯಾಗೆ ಬ್ಯಾಕ್ ಟು ಬ್ಯಾಕ್ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು. ಹೀಗಾಗಿ ತಕ್ಷಣದಲ್ಲೇ ಸುಧಾರಿಸಿಕೊಳ್ಳುವುದಕ್ಕೆ ಅವರಿಗೆ ಸಾಧ್ಯವಾಗಲಿಲ್ಲ.

ಅವರ ಅನುಪಸ್ಥಿತಿಯನ್ನು ಐದು ಬಾರಿಯ ಚಾಂಪಿಯನ್ ತಂಡ ಅನುಭವಿಸಿದೆ. ಅವರು 17 ನೇ ಋತುವಿನಲ್ಲಿ ಇನ್ನೂ ಒಂದು ಜಯ ಕಂಡಿಲ್ಲ. ಪ್ರಸಕ್ತ ಋತುವಿನಲ್ಲಿ ಒಂದು ಪಾಯಿಂಟ್ ಇಲ್ಲದ ಏಕೈಕ ತಂಡ ಮುಂಬಯಿ . ಗುಜರಾತ್ ಟೈಟಾನ್ಸ್ ವಿರುದ್ಧದ ಸೋಲಿ

Exit mobile version