ಬೆಂಗಳೂರು: ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್ನಿಂದ ಮುಂಬೈ ಇಂಡಿಯನ್ಸ್ಗೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ ಎಂಬ ಸುದ್ದಿ ಭಾರತೀಯ ಕ್ರಿಕೆಟ್ ರಂಗದಲ್ಲಿ ಬಿರುಗಾಳಿ ಎಬ್ಬಿಸಿದೆ. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ನಲ್ಲಿ ಸ್ಟಾರ್ಡಮ್ ಗಳಿಸಿದ್ದ ವೇಳೆಯೇ ಆ ಫ್ರಾಂಚೈಸಿಯಿಂದ ದೂರ ಸರಿದು ಗುಜರಾತ್ ಟೈಟಾನ್ಸ್ ತಂಡವನ್ನು ಸೇರಿಕೊಂಡಿದ್ದರು. ಅಲ್ಲಿ ನಾಯಕರಾದ ಅವರು ಗುಜರಾತ್ ಟೈಟನ್ಸ್ ತಂಡವನ್ನು ಚೊಚ್ಚಲ ಐಪಿಎಲ್ ಪ್ರಶಸ್ತಿ ಕಡೆಗೆ ಮುನ್ನಡೆಸಿದ್ದರು. ಆದರೆ ಈದೀಗ “ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ಗೆ ಮರಳುವ ಸಾಧ್ಯತೆಯಿದೆ. ಅವರು ಗುಜರಾತ್ ಟೈಟಾನ್ಸ್ ತಂಡವನ್ನು ತೊರೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿರುವುದರಿಂದ ಈ ಕ್ರಮವು ದೊಡ್ಡ ಪರಿಣಾಮ ಸೃಷ್ಟಿಸುವುದು ಖಾತರಿ. ಭಾರತ ತಂಡದ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ ಈ ಕುರಿತು ಮಾತನಾಡಿದ್ದು ಮುಂಬಯಿ ತಂಡಕ್ಕೆ ಚಿನ್ನ ಸಿಕ್ಕಂತೆ ಎಂದು ಹೇಳಿದ್ದಾರೆ.
“ಈ ಸುದ್ದಿ ನಿಜವಾಗಿದ್ದರೆ ಮುಂಬೈ ಇಂಡಿಯನ್ಸ್ ಚಿನ್ನ ಗೆದ್ದಿದೆ ಎಂದೇ ಅರ್ಧ. ಆದ್ದರಿಂದ ಇದು ನಿಜವಾಗಿದ್ದರೆ ವ್ಯವಹಾರ ಪಕ್ಕಾ ಎಂದಾಗಿದ್ದರೆ ದೊಡ್ಡ ವಿಷಯವೇ ಸರಿ. ಮುಂಬೈ ಯಾವುದೇ ಆಟಗಾರನನ್ನು ಬಿಡುಗಡೆ ಮಾಡದು. ಹಾಗೂ ಮುಂಬೈ ಇಂಡಿಯನ್ಸ್ ಎಂದಿಗೂ ಆಟಗಾರರನ್ನು ವ್ಯಾಪಾರದ ದೃಷ್ಟಿಯಿಂದ ಕಂಡಿಲ್ಲ. ಆದರೆ ಎಂಐ ಆಟಗಾರನಾಗಿ ಹಾರ್ದಿಕ್ ಹಿಂತಿರುಗಿದರೆ ಆ ಇಲೆವೆನ್ ಬಲಿಷ್ಠವಾಗಲಿದೆ,” ಎಂದು ಅಶ್ವಿನ್ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿಹೇಳಿದ್ದಾರೆ.
ಯಾರೆಲ್ಲ ಇದ್ದಾರೆ ತಂಡದಲ್ಲಿ?
ರೋಹಿತ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ನೇಹಾಲ್ ವಧೇರಾ, ಟಿಮ್ ಡೇವಿಡ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಾಲ್ ಮತ್ತು ಜೋಫ್ರಾ ಆರ್ಚರ್/ ರೀ ಲ್ ಮೆರೆಡಿತ್/ ಜೇಸನ್ ಬೆಹ್ರೆನ್ಡಾರ್ಫ್/ ಮಿಚೆಲ್ ಸ್ಟಾರ್ಕ್/ ಪ್ಯಾಟ್ ಕಮಿನ್ಸ್ ಅವರು ಮುಂಬಯಿ ತಂಡದಲ್ಲಿ ಇರಲಿದ್ದಾರೆ.
ಒಬ್ಬ ನಾಯಕನನ್ನು ಮೂರು ಬಾರಿ ವ್ಯಾಪಾರ ಮಾಡಲಾಗಿದೆ. ಈ ಹಿಂದೆ ಅಜಿಂಕ್ಯ ರಹಾನೆ ಇದ್ದರು. ಇದೀಗ ಹಾರ್ದಿಕ್ ಪಾಂಡ್ಯ. ಎಂದು ಅಶ್ವಿನ್ ಹೇಳಿದ್ದಾರೆ.
ಅಜಿಂಕ್ಯ ಮತ್ತು ಹಾರ್ದಿಕ್ ನಡುವಿನ ಏಕೈಕ ವ್ಯತ್ಯಾಸವೆಂದರೆ ಪಾಂಡ್ಯ ಐಪಿಎಲ್ ವಿಜೇತ ನಾಯಕ. ಹೀಗಾಗಿ ಗುಜರಾತ್ ಟೈಟಾನ್ಸ್ ತಂಡದ ಸಮತೋಲನವನ್ನು ಸಂಪೂರ್ಣವಾಗಿ ಬದಲಾಗುತ್ತದೆ. ಮುಂಬೈ ಈಗ ಮಾಡಬೇಕಾಗಿರುವುದು ಹಾರ್ದಿಕ್ ಪಾಂಡ್ಯ 15 ಕೋಟಿ ಆಟಗಾರನಾಗಿರುವ ಕಾರಣ ಬಜೆಟ್ ಅಡಿಯಲ್ಲಿ ಬರುವುದನ್ನು ಖಚಿತಪಡಿಸಿಕೊಳ್ಳಲು ಅವರು ತಮ್ಮ ಪರ್ಸ್ ಅನ್ನು ಸಿದ್ಧಗೊಳಿಸಬೇಕು ಎಂದು ಅಶ್ವಿನ್ ಹೇಳಿದ್ದಾರೆ.
ಏಳು ಬಾರಿ ಮುಂಬಯಿ ತಂಡ
ಪಾಂಡ್ಯ 2022 ರ ಋತುವಿಗೆ ಮುಂಚಿತವಾಗಿ ಬಿಡುಗಡೆಯಾಗುವ ಮೊದಲು ಐಪಿಎಲ್ನ ಏಳು ಋತುಗಳಲ್ಲಿ ಮುಂಬೈ ಪರ ಆಡಿದ್ದರು. ಗುಜರಾತ್ ಟೈಟಾನ್ಸ್ ತಂಡವನ್ನು ಸೇರಿಕೊಂಡ ನಂತರ, ಪಾಂಡ್ಯ ತಂಡವನ್ನು ಚೊಚ್ಚಲ ಋತುವಿನಲ್ಲಿ ಟ್ರೋಫಿಯನ್ನು ಗಳಿಸುವುದು ಸೇರಿದಂತೆ ಬ್ಯಾಕ್ ಟು ಬ್ಯಾಕ್ ಐಪಿಎಲ್ ಫೈನಲ್ ಕಡೆಗೆ ಮುನ್ನಡೆಸಿದರು.
ಇದನ್ನೂ ಓದಿ : IPL 2024 : ಗಾಯಾಳು ಪೃಥ್ವಿ ಶಾಗೆ ಸಿಕ್ಕಿತು ಮತ್ತೊಂದು ಜೀವದಾನ
ಕಳೆದ ಎರಡು ಋತುಗಳಲ್ಲಿ ಗಾಯಗೊಂಡಿರುವ ಜೋಫ್ರಾ ಆರ್ಚರ್ ಅವರನ್ನು 8 ಕೋಟಿ ರೂ.ಗೆ ಉಳಿಸಿಕೊಳ್ಳುವುದಕ್ಕೆ ಮುಂಬೈ ಇಂಡಿಯನ್ಸ್ ಸಿದ್ಧವಿದೆಯೇ ಎಂಬ ಬಗ್ಗೆ ಇನ್ನೂ ಯಾವುದೇ ದೃಢೀಕರಣವಿಲ್ಲ.
ಐಪಿಎಲ್ ಆಡಳಿತ ಮಂಡಳಿಯು ಹೆಚ್ಚುವರಿ 5 ಕೋಟಿ ರೂ.ಗಳನ್ನು ಹೆಚ್ಚಿಸಿದೆ. ಮುಂಬಯಿ ಬಳಿಕ ಮೀಸಲು ಹಣವನ್ನು 50ಲಕ್ಷವಿದೆ. ಈಗ ಒಟ್ಟು ಹಣ 5.50 ಕೋಟಿಯಾಗಿದೆ. ಹೀಗಾಗಿ ಮಿನಿ ಹರಾಜಿನ ಮೂಲಕ ಬಳಗವನ್ನು ಗಟ್ಟಿ ಮಾಡಿಕೊಳ್ಳಲಿದೆ.